ಭೋಪಾಲ್(ಮಧ್ಯಪ್ರದೇಶ): ದೇಶಾದ್ಯಂತ ಲಾಕ್ಡೌನ್ ಹೇರಿಕೆ ಮಾಡಿರುವ ಕಾರಣ ಕೆಲವರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಮಹಿಳೆಯೋರ್ವಳು ತನ್ನ ಮಕ್ಕಳ ಒಂದು ಹೊತ್ತಿನ ಊಟಕ್ಕಾಗಿ ಮಂಗಳಸೂತ್ರ ಅಡವಿಟ್ಟಿದ್ದಾರೆ. ಗಂಡ ಪಾರ್ಶ್ವವಾಯು ಪೀಡಿತನಾಗಿದ್ದು, ಆತ ಹೊರಗಡೆ ಹೋಗಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದಿದ್ದಾಳೆ.
ದೇವಸ್ಥಾನದ ಹೊರಗಡೆ ಪ್ರಸಾದ ಮಾರುವ ಕೆಲಸ ಮಾಡುತ್ತಿದ್ದ ಮಹಿಳೆ ಇದೀಗ ಆರ್ಥಿಕ ತೊಂದರೆಗೊಳಗಾಗಿದ್ದಾಳೆ. ಹೀಗಾಗಿ ಮಕ್ಕಳ ಊಟಕ್ಕಾಗಿ ರೇಷನ್ ಖರೀದಿ ಮಾಡಲು ತನ್ನ ಬಳಿ ಹಣವಿಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದಾಳೆ.
ಕೌಶಲ್ಯಾ ಪಾಟೀಲ್ 5 ಸಾವಿರ ರೂಪಾಯಿ ಪಡೆದುಕೊಂಡು ಮಂಗಳಸೂತ್ರ ಅಡ ಇಟ್ಟಿದ್ದಾಳೆ. ಅದರಿಂದ ಮಕ್ಕಳಿಗೆ ರೇಷನ್ ಖರೀದಿ ಮಾಡಿದ್ದು, ಉಳಿದ ಹಣದಲ್ಲಿ ದೇವಸ್ಥಾನದ ಮುಂದೆ ಮಾರಲು ಪ್ರಸಾದ ಖರೀದಿ ಮಾಡಿದ್ದಾಗಿ ತಿಳಿಸಿದ್ದಾಳೆ. ಸದ್ಯ ದೇವಸ್ಥಾನಗಳು ರೀ ಓಪನ್ ಆಗಿರುವ ಕಾರಣ ಹಣ ಗಳಿಕೆ ಮಾಡಬಹುದು ಎಂದು ಆಕೆ ಹೇಳಿಕೊಂಡಿದ್ದಾಳೆ.
ಈಕೆಯ ಮಗನೋರ್ವ ಪೆಟ್ರೋಲ್ ಪಂಪ್ನಲ್ಲಿ ಕೆಲಸ ಮಾಡ್ತಿದ್ದು, ಆತ ಪಡೆದುಕೊಳ್ಳುವ ಸಂಬಳ ಕೂಡ ಬಹಳ ಕಡಿಮೆಯಾಗಿರುವ ಕಾರಣ ಬೇರೆ ದಾರಿ ಕಾಣಲಿಲ್ಲ ಎಂದು ಸುದ್ದಿ ಸಂಸ್ಥೆ ಮುಂದೆ ತನ್ನ ಅಳಲು ಹೇಳಿಕೊಂಡಿದ್ದಾಳೆ.