ಜೈಪುರ: ಒಗ್ಗಟ್ಟಿನಿಂದ ಮಾತ್ರ ಜಯ ಗಳಿಸಿಸಲು ಸಾಧ್ಯವಿದೆ. ಹೀಗಾಗಿ ಆ.14 ಅಂದರೆ ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಹೋಟೆಲ್ ಫೇರ್ಮಾಂಟ್ನಲ್ಲೇ ಇರುವಂತೆ ಶಾಸಕರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮಾತನಾಡಿದ ಗೆಹ್ಲೋಟ್, ಸರ್ಕಾರಕ್ಕೆ ಇರುವ ಕಂಟಕದಿಂದ ಪಾರಾಗುವವರೆಗೆ ಎಲ್ಲಾ ಶಾಸಕರು ಒಟ್ಟಿಗೆ ಇರಬೇಕು. ಅದು ಎಷ್ಟು ದಿನಗಳಾದರೂ ಆಗಬಹುದು. ಹೋಟೆಲ್ನಲ್ಲಿ ಕುಳಿತುಕೊಂಡೆ ನಿಮ್ಮ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವಂತೆ ಶಾಸಕರಿಗೆ ಸೂಚಿಸಿದ್ದಾರೆ.
ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯದ ಹೈಡ್ರಾಮಾದ ನಡುವೆ ಬಿಜೆಪಿ ಜೊತೆ ಕೈ ಜೋಡಿಸದೆ ಸಿಎಂ ಪರ ಇರುವ ಕಾಂಗ್ರೆಸ್ ಶಾಸಕರನ್ನು ಜೈಪುರದ ಫೇರ್ಮಾಂಟ್ ಹೋಟೆಲ್ನಲ್ಲಿರಿಸಲಾಗಿದೆ. ಸುಮಾರು 70 ಶಾಸಕರು ಇಲ್ಲಿದ್ದು, ಅವರ ಕುಟುಂಬಸ್ಥರು ಹೋಟೆಲ್ಗೆ ಭೇಟಿ ನೀಡುತ್ತಿರುತ್ತಾರೆ.
ಈದ್, ರಕ್ಷಾಬಂಧನ ಮತ್ತು ಕೃಷ್ಣ ಜನ್ಮಾಷ್ಟಮಿಯನ್ನು ಹೋಟೆಲ್ನಲ್ಲೇ ಆಚರಿಸಲು ಕೂಡ ಶಾಸಕರ ಕುಟುಂಬ ಮತ್ತು ಸಂಬಂಧಿಕರಿಗೆ ವ್ಯವಸ್ಥೆ ಮಾಡಲಾಗಿದೆ.