ETV Bharat / bharat

ಕನ್ಹಯ್ಯ ಕುಮಾರ್​​ ಮೇಲಿನ ದೇಶದ್ರೋಹ ಪ್ರಕರಣದ ವಿರುದ್ಧ ಹೋರಾಡಲು ಸಿದ್ಧ: ಸಿಪಿಐ - Kanhaiya Kumar

ದೇಶದ್ರೋಹದ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಸಿಪಿಐ ನಾಯಕ ಹಾಗೂ ಮಾಜಿ ಜೆಎನ್​ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ಅವರನ್ನು​ ವಿಚಾರಣೆಗೊಳಪಡಿಸಲು ದೆಹಲಿ ಸರ್ಕಾರ ಶನಿವಾರ ಅನುಮತಿ ನೀಡಿದ್ದು, ಇದರ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನುಬದ್ಧವಾಗಿ ಹೋರಾಡುತ್ತೇವೆ ಎಂದು ಸಿಪಿಐ ತಿಳಿಸಿದೆ.

sedition case against Kanhaiya Kumar
ಕನ್ಹಯ್ಯ ಕುಮಾರ್
author img

By

Published : Feb 29, 2020, 6:19 PM IST

ನವದೆಹಲಿ: ತಮ್ಮ ಮುಖಂಡ ಕನ್ಹಯ್ಯ ಕುಮಾರ್​ ಮೇಲಿರುವ ದೇಶದ್ರೋಹದ ಪ್ರಕರಣದ ವಿರುದ್ಧವಾಗಿ ರಾಜಕೀಯವಾಗಿ ಹಾಗೂ ಕಾನೂನುಬದ್ಧವಾಗಿ ಹೋರಾಡುತ್ತೇವೆ ಎಂದು ಭಾರತೀಯ ಕಮ್ಯುನಿಸ್ಟ್​ ಪಕ್ಷ (ಸಿಪಿಐ) ತಿಳಿಸಿದೆ.

2016ರಲ್ಲಿ ದೆಹಲಿಯ ಜವಾಹರಲಾಲ್​ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ದೇಶದ್ರೋಹದ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಮಾಜಿ ಜೆಎನ್​ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ಅವರನ್ನು​ ವಿಚಾರಣೆಗೊಳಪಡಿಸಲು ದೆಹಲಿ ಸರ್ಕಾರ ಶನಿವಾರ ಅನುಮತಿ ನೀಡಿದೆ.

ಇದಕ್ಕೆ ಪ್ರತಿಕ್ರಯಿಸಿರುವ ಸಿಪಿಐ, ರಾಜಕೀಯ ಒತ್ತಡಕ್ಕೆ ಬಲಿಯಾಗಿ ದೆಹಲಿಯ ಆಮ್ ಆದ್ಮಿ ಸರ್ಕಾರ ವಿಚಾರಣೆ ನಡೆಸಲು ಅನುಮತಿ ನೀಡಿದೆ ಎಂದು ಆರೋಪಿಸಿದೆ. ನಾವು ನಮ್ಮ ನಾಯಕನಿಗಾಗಿ ಹೋರಾಡುತ್ತೇವೆ. ಕನ್ಹಯ್ಯ ಕುಮಾರ್ ವಿರುದ್ಧದ ದೇಶದ್ರೋಹದ ಆರೋಪ ಸುಳ್ಳು ಹಾಗೂ ರಾಜಕೀಯ ಪ್ರೇರಿತವಾದದ್ದು ಎಂಬುದು ಸಾಬೀತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.