ನವದೆಹಲಿ: ಪ್ರಪಂಚದ ಯಾವುದೇ ವ್ಯಕ್ತಿ, ಊರು, ವಿಷಯ ಸೇರಿದಂತೆ ನೀವು ಬಯಸುವ ಮಾಹಿತಿಯನ್ನು ಸರಳ ಭಾಷೆಯಲ್ಲಿ, ಅಚ್ಚುಕಟ್ಟಾಗಿ ಪೂರೈಸುವ ವಿಕಿಪೀಡಿಯ ಧನ ಸಹಾಯಕ್ಕಾಗಿ ಓದುಗರ ಬಳಿ ಕೈವೊಡ್ಡಿದೆ.
ಯಾವುದೇ ಜಾಹೀರಾತು ಮೊದಲಾದ ಲಾಭದಾಯಕ ತಂತ್ರಗಾರಿಕೆಗಳ ಮೇಲೆ ಅವಲಂಬಿತವಾಗದ ವಿಕಿಪೀಡಿಯಾ ತನ್ನ ನಿರ್ವಹಣೆಯ ದೃಷ್ಟಿಯಿಂದ ಭಾರತೀಯ ಬಳಕೆದಾರರ ಬಳಿ ಧನ ಸಹಾಯಕ್ಕೆ ಕೋರಿಕೆವೊಡ್ಡಿದೆ.ವಿಕಿಪೀಡಿಯಾ ತನ್ನ ಭಾರತೀಯ ಬಳಕೆದಾರರಿಗೆ ತನ್ನ ವೆಬ್ ತಾಣದಲ್ಲಿ ಬರೆದಿರುವ ಓಲೆ ಹೀಗಿದೆ.
ಪ್ರಿಯ ಭಾರತೀಯ ಬಳಕೆದಾರರೇ, ಬಹುಶಃ ನಿಮಗೆ ವಿಕಿಪೀಡಿಯಾ ಇಷ್ಟವಾಗಿರಬಹುದು. ನಿಜಕ್ಕೂ ಅದು ಗ್ರೇಟ್. ನಿಮ್ಮ ಬಳಿ ಈ ವಿಷಯ ಹೇಳಲು ಅಸಹ್ಯವಾಗುತ್ತಿದೆ. ಆದರೂ, ಬಳಕೆದಾರರಿಗಾಗಿ ನಾವು ಉಳಿದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದ್ದು ನಿಮ್ಮ ಬಳಿ ಕೈವೊಡ್ಡುವ ಸಂದರ್ಭ ಎದುರಾಗಿದೆ. ನೀವು ಈಗಾಗಲೇ ಧನಸಹಾಯ ಮಾಡಿದ್ದರೆ ಧನ್ಯವಾದಗಳು.
ನಾವು ಮಾರಾಟಗಾರರಲ್ಲ. ಬಳಕೆದಾರರು ನೀಡುವ ದತ್ತಿಯಮೇಲೆ ನಾವು ಅವಲಂಬಿತರಾಗಿದ್ದೇವೆ. ವಿಕಿಪೀಡಿಯ ಬಳಕೆದಾರರ ಪೈಕಿ ಶೇ. 2ರಷ್ಟು ಜನ ಮಾತ್ರ 1000 ರೂ. ದಾನವಾಗಿ ನೀಡುತ್ತಿದ್ದಾರೆ. ನೀವು ಒಂದು ವಾರದ ಕಾಫಿ ಕುಡಿಯಲು ಖರ್ಚಾಗುವ 150 ರೂ. ದಾನ ನೀಡಿದ್ರೂ ನಾವು ಇನ್ನೊಂದಷ್ಟು ದಿನ ಉಳಿಯಲು ಸಾಕು.ಇಂತಿ ನಿಮ್ಮ ವಿಕಿಪೀಡಿಯ.