ETV Bharat / bharat

ಲಾಕ್​ಡೌನ್​ನಿಂದ ತವರು ಮನೆಯಲ್ಲೇ ಉಳಿದ ಪತ್ನಿ: ಮಾಜಿ ಗೆಳತಿಯನ್ನ ವರಿಸಿದ ಪತಿ! - ಮಾಜಿ ಗೆಳತಿಯನ್ನು ವರಿಸಿದ ಪತಿ

ಪಾಟ್ನಾದಲ್ಲಿ ಪತ್ನಿಯೊಬ್ಬಳು ಲಾಕ್​ಡೌನ್ ಕಾರಣ ಪೋಷಕರ ಮನೆಯಲ್ಲಿ ಸಿಲುಕಿಕೊಂಡಿದ್ದಾಳೆ. ಇತ್ತ ಪತಿ ತನ್ನ ಮಾಜಿ ಗೆಳತಿಯನ್ನು ಮದುವೆಯಾಗಿದ್ದಾನೆ.

ಮಾಜಿ ಗೆಳತಿಯನ್ನು ವರಿಸಿದ ಪತಿ
ಮಾಜಿ ಗೆಳತಿಯನ್ನು ವರಿಸಿದ ಪತಿ
author img

By

Published : Apr 19, 2020, 8:19 PM IST

ಪಾಟ್ನಾ (ಬಿಹಾರ): ಲಾಕ್‌ಡೌನ್‌ನಿಂದಾಗಿ ಪಾಟ್ನಾದ ಪಾಲಿಗಂಜ್‌ನ ಮಹಿಳೆಯೊಬ್ಬಳು ತನ್ನ ತವರು ಮನೆಯಲ್ಲಿ ಸಿಲುಕಿದ ಹಿನ್ನೆಲೆ ಆಕೆಯ ಪತಿ ತನ್ನ ಮಾಜಿ ಗೆಳತಿಯನ್ನು ವಿವಾಹವಾದ ಘಟನೆ ನಡೆದಿದೆ.

ಲಾಕ್​ಡೌನ್​ ಘೋಷಿಸುವ ಮೊದಲು ಪತ್ನಿ ಗುಡಿಯಾ ದೇವಿ ತನ್ನ ತಾಯಿಯ ಮನೆಗೆ ಹೋಗಿದ್ದಳು. ಬಳಿಕ ಲಾಕ್​ಡೌನ್​ ಘೋಷಣೆಯಾದ ಕಾರಣ ಭರತ್‌ಪುರದ ತನ್ನ ಗಂಡನ ಮನೆಗೆ ಮರಳಲು ಆಕೆಗೆ ಸಾಧ್ಯವಾಗಲಿಲ್ಲ.

ಅವಳ ಪತಿ ಧೀರಜ್ ಕುಮಾರ್ ಹೇಗಾದರೂ ಹಿಂತಿರುಗಬೇಕೆಂದು ಕೇಳಿಕೊಳ್ಳುತ್ತಿದ್ದ. ಆದರೆ, ಮಹಿಳೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಧೀರಜ್​ ಕುಮಾರ್,​ ರಘುನಾಥಪುರದ ತನ್ನ ಮಾಜಿ ಗೆಳತಿಯನ್ನು ಮದುವೆಯಾಗಿದ್ದಾನೆ.

ಧೀರಜ್​ ಹಾಗೂ ಗುಡಿಯಾ ದೇವಿ ದಂಪತಿಗೆ 10 ವರ್ಷದ ಮಗನಿದ್ದಾನೆ. ಪಾಟ್ನಾ ಜಿಲ್ಲೆಯ ಪಾಲಿಗಂಜ್‌ನ ದುಲ್ಹಾನ್ ಬಜಾರ್ ಪೊಲೀಸ್​ ಠಾಣೆಯಲ್ಲಿ ಗುಡಿಯಾ ದೇವಿ ಈ ಕುರಿತು ದೂರು ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.