ನವದೆಹಲಿ: ಭಾರತ-ಚೀನಾ ಸೈನಿಕರ ಸಂಘರ್ಷದ ವಿಚಾರದಲ್ಲಿ ಕೇಂದ್ರದ ವಿರುದ್ಧ ಕಿಡಿ ಕಾರುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮತ್ತೊಮ್ಮೆ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾ ಪತ್ರಿಕೆಗಳು ಪ್ರಧಾನಿ ಮೋದಿಯನ್ನು ಹೊಗಳಿವೆ ಎಂಬ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಚೀನಾ ನಮ್ಮ ಸೈನಿಕರನ್ನು ಕೊಂದಿದೆ. ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಹಾಗಾದರೆ, ಈ ಸಂಘರ್ಷದ ಸಂದರ್ಭದಲ್ಲಿ ಚೀನಾ ಮೋದಿಯನ್ನು ಏಕೆ ಹೊಗಳುತ್ತಿದೆ?' ಎಂದು ಪ್ರಶ್ನೆ ಮಾಡಿದ್ದಾರೆ.
-
China killed our soldiers.
— Rahul Gandhi (@RahulGandhi) June 22, 2020 " class="align-text-top noRightClick twitterSection" data="
China took our land.
Then, why is China praising Mr Modi during this conflict? pic.twitter.com/iNV8c1cmal
">China killed our soldiers.
— Rahul Gandhi (@RahulGandhi) June 22, 2020
China took our land.
Then, why is China praising Mr Modi during this conflict? pic.twitter.com/iNV8c1cmalChina killed our soldiers.
— Rahul Gandhi (@RahulGandhi) June 22, 2020
China took our land.
Then, why is China praising Mr Modi during this conflict? pic.twitter.com/iNV8c1cmal
ಸರ್ವಪಕ್ಷ ಸಭೆಯಲ್ಲಿ ಮೋದಿಯವರ ಹೇಳಿಕೆ ಕುರಿತು ಚೀನಾದ ಪತ್ರಿಕೆಗಳಿಂದ ಬಂದ ವರದಿಗಳನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
ಇದಕ್ಕೂ ಮೊದಲು ಚೀನಾ ಪಡೆಗಳ ನಡುವಿನ ಮುಖಾಮುಖಿ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಈ ಗಡಿ ಸಂಘರ್ಷದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತುಗಳ ಪರಿಣಾಮಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದ್ದರು.