ETV Bharat / bharat

ಚೀನಾದೊಂದಿಗೆ ಯಥಾಸ್ಥಿತಿ ಕಾಪಾಡಲು ಕೇಂದ್ರ ಸರ್ಕಾರ ಏಕೆ ಒತ್ತಾಯಿಸಲಿಲ್ಲ: ರಾಗಾ ಪ್ರಶ್ನೆ

author img

By

Published : Jul 7, 2020, 4:36 PM IST

ಗಾಲ್ವಾನ್​ನಲ್ಲಿ ಉಂಟಾದ ಕಲಹದ ನಂತರ ಪ್ರಧಾನಿ ಮೋದಿ ಚೀನಾದೊಂದಿಗೆ ಮಾತುಕತೆ ನಡೆಸಿ ಯಥಾಸ್ಥಿತಿ ಕಾಪಾಡಿಕೊಳ್ಳಬಹುದಿತ್ತು. ಆದರೆ ಈ ಕೆಲಸವನ್ನು ಏಕೆ ಮಾಡಿಲ್ಲ? ಇದರ ಹಿಂದಿನ ಕಾರಣಗಳೇನು? ಎಂದು ತಿಳಿಸಬೇಕು ಎಂದು ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

Rahul
ರಾಗಾ ಪ್ರಶ್ನೆ

ನವದೆಹಲಿ: ಗಾಲ್ವಾನ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದ ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ, ಚೀನಾ ಜೊತೆಗಿನ ಸಂಬಂಧವನ್ನು ಯಥಾಸ್ಥಿತಿಗೆ ತರಲು ಸರ್ಕಾರ ಏಕೆ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸಿ ಉಭಯ ದೇಶಗಳ ಸಂಬಂಧವನ್ನು ಯಥಾಸ್ಥಿತಿಗೆ ತರುವುದು ಕೇಂದ್ರ ಸರ್ಕಾರದ ಹೊಣೆ. ಗಾಲ್ವಾನ್​​ನಲ್ಲಿ ಉಂಟಾದ ಘರ್ಷಣೆ ಬಗ್ಗೆ ಪ್ರಶ್ನಿಸಿದ ರಾಗಾ, ಈ ಘಟನೆ ನಡೆದ ನಂತರ ಪ್ರಧಾನಿ ಮೋದಿ ಚೀನಾದೊಂದಿಗೆ ಮಾತುಕತೆ ನಡೆಸಿ ಈ ಹಿಂದೆ ಅಸ್ತಿತ್ವದಲ್ಲಿರುವ ವ್ಯವಹಾರಗಳ ಪುನಃಸ್ಥಾಪನೆ ಮಾಡಬಹುದಿತ್ತು. ಆದರೆ ಈ ಕಾರ್ಯವನ್ನು ಪ್ರಧಾನಿ ಮಾಡಲಿಲ್ಲ. ಇದರ ಹಿಂದಿನ ಕಾರಣವಾದರೂ ಏನಿರಬಹುದು ಎಂದು ಪ್ರಶ್ನಿಸಿದ್ದಾರೆ.

ಗಾಲ್ವಾನ್ ಕಣಿವೆಯ ಪ್ರಾದೇಶಿಕ ಸಾರ್ವಭೌಮತ್ವದ ಬಗ್ಗೆ ಮೋದಿ ಇದೂವರೆಗೆ ಏಕೆ ಪ್ರಸ್ತಾಪಿಸಿಲ್ಲ. 20 ಭಾರತೀಯ ಸೈನಿಕರ ಹತ್ಯೆಯನ್ನು ಸಮರ್ಥಿಸಲು ಸರ್ಕಾರವು ಚೀನಾಕ್ಕೆ ಅವಕಾಶ ನೀಡಿದೆ ಎಂದು ರಾಹುಲ್​ ಗಾಂಧಿ ಆರೋಪಿಸಿದರು.

ರಾಹುಲ್ ಗಾಂಧಿ ಅವರು ರಕ್ಷಣಾ ಸ್ಥಾಯಿ ಸಮಿತಿಯ ಒಂದೇ ಒಂದು ಸಭೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ದೇಶದ ರಕ್ಷಣೆ ಬಗ್ಗೆ ಉದ್ದವಾದ ಭಾಷಣ ಮಾಡುತ್ತಾರೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರಶ್ನಿಸುತ್ತಾರೆ. ಜವಾಬ್ದಾರಿಯುತ ಪ್ರತಿಪಕ್ಷದ ನಾಯಕನಾದವನು ಮಾಡಬೇಕಾದ ಕೆಲಸವನ್ನು ಹೊರತುಪಡಿಸಿ, ಮಾಡಬಾರದ ಎಲ್ಲವನ್ನೂ ರಾಹುಲ್​ ಗಾಂಧಿ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.