ಕೊಲ್ಕತ್ತಾ : ಹೊರಗಿನವರು, ಒಳಗಿನವರು ಎಂಬ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್, ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶ್ರೀ ಠಾಕೂರ್, "ಬೇರೆ ರಾಜ್ಯದಿಂದ ಬರುವ ಯಾರಾದ್ರೂ ಹೊರಗಿನವರಾಗಿದ್ದರೆ, ಒಳಗಿನವರು ಯಾರು?" ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷದ ಮುಖಂಡರು ದೆಹಲಿಯಿಂದ ಬರುವ ಬಿಜೆಪಿ ನಾಯಕರನ್ನು ಹೊರಗಿನವರು ಎಂದು ಹೇಳಿದ್ದರು.
ಆಸ್ಪತ್ರೆಯಲ್ಲಿ ದಾಖಲಾಗಿರುವ ಸೌರವ್ ಗಂಗೂಲಿಯನ್ನು ಭೇಟಿ ಮಾಡಲು ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಕೋಲ್ಕತಾಗೆ ಆಗಮಿಸಿದ್ದಾರೆ. ಇಂದು ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.