ETV Bharat / bharat

ಅಮೆಜಾನ್​ ಪ್ರೈಮ್​ ಹೊಸ ಫೀಚರ್.. ಗರಿಷ್ಠ ನೂರು ಗೆಳೆಯರೊಂದಿಗೆ ವಾಚ್ ಪಾರ್ಟಿ ಮಾಡ್ಬೋದು.. - ಅಮೆಜಾನ್​ ವಾಚ್​ ಪಾರ್ಟಿ

ಈ ವಾಚ್ ಪಾರ್ಟಿಗಳು ಆ್ಯಪಲ್​ನ ಸಫಾರಿ ಹೊರತುಪಡಿಸಿ ಡೆಸ್ಕ್​ಟಾಪ್​ ಬ್ರೌಸರ್​ಗಳಲ್ಲಿ ಲಭ್ಯವಿರುತ್ತದೆ. ಫೈರ್ ಟಿವಿ, ಸ್ಮಾರ್ಟ್​ ಟಿವಿ, ಆನ್​ಲೈನ್​ ವಿಡಿಯೋ ಗೇಮ್​ಗಳ ಗ್ಯಾಜೆಟ್​ಗಳು, ಮೊಬೈಲ್​ ಫೋನ್​ಗಳು, ಟ್ಯಾಬ್ಲೆಟ್​​ಗಳು ಸದ್ಯಕ್ಕೆ ಈ ಫೀಚರ್​ಗೆ ಸಹಕರಿಸೋದಿಲ್ಲ ಎಂದು ಅಮೆಜಾನ್​ ಸ್ಪಷ್ಟಪಡಿಸಿದೆ..

amazon prime
ಅಮೆಜಾನ್ ಪ್ರೈಮ್​
author img

By

Published : Jul 1, 2020, 5:25 PM IST

ಸ್ಯಾನ್​ ಫ್ರಾನ್ಸಿಸ್ಕೋ (ಅಮೆರಿಕ) : ಅಮೆಜಾನ್​ ಪ್ರೈಮ್​ ಹೊಸ ಫೀಚರ್‌ನ ಪರಿಚಯಿಸಿದೆ. ಇನ್ಮುಂದೆ ಪ್ರೈಮ್​ ಸದಸ್ಯರು ಯಾವುದಾದರೊಂದು ಸಿನಿಮಾ ಅಥವಾ ಕಾರ್ಯಕ್ರಮವನ್ನು ಒಂದೇ ಬಾರಿಗೆ ಬೇರೆ ಸ್ಥಳದಲ್ಲಿರುವ ಸ್ನೇಹಿತರೊಂದಿಗೆ ಏಕಕಾಲದಲ್ಲಿ ವೀಕ್ಷಿಸಬಹುದಾಗಿದೆ.

ಸುಮಾರು ನೂರು ಸದಸ್ಯರು ಏಕಕಾಲಕ್ಕೆ ಪ್ರೈಮ್​ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಈ ಫೀಚರ್ ಈಗ ಕೇವಲ ಅಮೆರಿಕದಲ್ಲಿ ಮಾತ್ರ ಲಭ್ಯವಿದ್ದು, ವೆಬ್​ ಬ್ರೌಸರ್ ಮೂಲಕ ವಾಚ್​ ಪಾರ್ಟಿಗೆ ಸಂಪರ್ಕ ಪಡೆಯಬಹುದಾಗಿದೆ ಎಂದು ಅಮೆಜಾನ್​ ಹೇಳಿದೆ.

ಈ ವಾಚ್ ಪಾರ್ಟಿಗಳು ಆ್ಯಪಲ್​ನ ಸಫಾರಿ ಹೊರತುಪಡಿಸಿ ಡೆಸ್ಕ್​ಟಾಪ್​ ಬ್ರೌಸರ್​ಗಳಲ್ಲಿ ಲಭ್ಯವಿರುತ್ತದೆ. ಫೈರ್ ಟಿವಿ, ಸ್ಮಾರ್ಟ್​ ಟಿವಿ, ಆನ್​ಲೈನ್​ ವಿಡಿಯೋ ಗೇಮ್​ಗಳ ಗ್ಯಾಜೆಟ್​ಗಳು, ಮೊಬೈಲ್​ ಫೋನ್​ಗಳು, ಟ್ಯಾಬ್ಲೆಟ್​​ಗಳು ಸದ್ಯಕ್ಕೆ ಈ ಫೀಚರ್​ಗೆ ಸಹಕರಿಸೋದಿಲ್ಲ ಎಂದು ಅಮೆಜಾನ್​ ಸ್ಪಷ್ಟಪಡಿಸಿದೆ.

ಈ ಹೊಸ ಫೀಚರ್​ಗೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದೂ ಕೂಡಾ ಅಮೆಜಾನ್​ ಪ್ರೈಮ್​ ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.