ನವದೆಹಲಿ: ರೈತ ಹೋರಾಟದ ಕುರಿತಾಗಿ ಅಂತಾರಾಷ್ಟ್ರೀಯ ಗಣ್ಯರ ಟ್ವೀಟ್‌ಗಳ ಬಗ್ಗೆ ವಿದೇಶಾಂಗ ಸಚಿವಾಲಯ (ಎಂಇಎ) ಬಲವಾದ ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್ ಅದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದೆ.
ಗಾಲ್ವಾನ್, ಅರುಣಾಚಲ ಪ್ರದೇಶಗಳನ್ನು ಚೀನಾ ಆಕ್ರಮಿಸಿಕೊಂಡಾಗ ಸುಮ್ಮನಿದ್ದ ಎಂಇಎ, ಭಾರತೀಯ ನಾವಿಕರ ಬಂಧನದ ಸಮಯದಲ್ಲಿ ಚೀನಾಗೆ ಮಾತಿನ ಏಟು ಕೊಡದೇ ಸುಮ್ಮನಿದ್ದ ಸಚಿವಾಲಯ ಅದಕ್ಕೆ ಪ್ರಬಲ ದಾಖಲೆ ನೀಡದೇ ಸುಮ್ಮನಿದ್ದು, ಈಗ ಗಣ್ಯರ ವಿರುದ್ಧ ಪ್ರತಿಕ್ರಿಯೆ ಯಾಕೆ ನೀಡುತ್ತಿದೆ, ಎಂದು ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಪ್ರಶ್ನಿಸಿದ್ದಾರೆ.
ಮಾನವ ಹಕ್ಕುಗಳು ಹಾಗೂ ಜೀವನೋಪಾಯದ ಸಮಸ್ಯೆಗಳಿಗೆ ಜನರು ರಾಷ್ಟ್ರೀಯ ಗಡಿಗಳನ್ನು ಗುರುತಿಸುವುದಿಲ್ಲ ಎಂದು ನೀವು ಯಾವಾಗ ತಿಳಿಯುವಿರಿ, ಮ್ಯಾನ್ಮಾರ್‌ನಲ್ಲಿನ ಮಿಲಿಟರಿ ದಂಗೆಯ ಬಗ್ಗೆ ಎಂಇಎ ಪ್ರತಿಕ್ರಿಯಿಸಿದ್ದು ಯಾಕೆ? ಅದೇನಾದರೂ ಎಂಇಎಗೆ ಸಂಬಂಧಿಸಿದ್ದೇ? ಎಂದು ಕೇಳಿದ್ದಾರೆ
ರಿಹಾನಾ ಮತ್ತು ಗ್ರೇಟಾ ಥನ್‌ಬರ್ಗ್ ಅವರು ತಮ್ಮ ಟ್ವೀಟ್ ಮೂಲಕ ಎಂಇಎಯನ್ನು ಎಚ್ಚರಗೊಳಿಸಿದ್ದಾರೆ ಎಂದು ಮಾಜಿ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.