ETV Bharat / bharat

ಏನಿದು ವಿಶ್ವ ಆಹಾರ ಕಾರ್ಯಕ್ರಮ..? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ: ಇಲ್ಲಿದೆ ಡೀಟೇಲ್ಸ್

author img

By

Published : Oct 9, 2020, 7:12 PM IST

ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಉತ್ತಮ ಪರಿಸ್ಥಿತಿಗಳನ್ನು ಒದಗಿಸಲು ಮತ್ತು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನಾರ್ವೇಜಿಯನ್ ನೊಬೆಲ್ ಸಮಿತಿಯು ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ)ಕ್ಕೆ 2020ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಯುದ್ಧ ಮತ್ತು ಸಂಘರ್ಷದ ಆಯುಧವಾಗಿ ಹಸಿವು ಬಳಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ಆಯ್ಕೆ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ

Noble peace prize for World Food Programme
ವಿಶ್ವ ಆಹಾರ ಕಾರ್ಯಕ್ರಮ

ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಉತ್ತಮ ಪರಿಸ್ಥಿತಿಗಳನ್ನು ಒದಗಿಸಲು ಮತ್ತು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನಾರ್ವೇಜಿಯನ್ ನೊಬೆಲ್ ಸಮಿತಿಯು ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ)ಕ್ಕೆ 2020ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಏನಿದು ವಿಶ್ವ ಆಹಾರ ಕಾರ್ಯಕ್ರಮ..? ವಿಶ್ವ ಆಹಾರ ಕಾರ್ಯಕ್ರಮವು 2030 ರ ಹೊತ್ತಿಗೆ ಜಗತ್ತನ್ನು ಹಸಿವು ಮುಕ್ತ ಮಾಡುವ ಉದ್ದೇಶದಿಂದ ಕೆಲಸ ಮಾಡುವ ವಿಶ್ವದ ಅತೀ ದೊಡ್ಡ ಮಾನವೀಯ ಸಂಘಟನೆಯಾಗಿದೆ.

ಡಬ್ಲ್ಯುಎಫ್‌ಪಿ ತುರ್ತು ಪರಿಸ್ಥಿತಿಗಳಾದ ಸಂಘರ್ಷ, ಬರ, ಪ್ರವಾಹ, ಭೂಕಂಪ, ಚಂಡಮಾರುತ, ಬೆಳೆ ಹಾನಿ ಮತ್ತು ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಆಹಾರ ಮತ್ತು ಇತರ ಸಹಾಯವನ್ನು ಒದಗಿಸುವ ಮೊದಲನೇ ಸಂಸ್ಥೆಯಾಗಿದೆ. ಇದರ ಜೊತೆಗೆ, ಸುಸ್ಥಿರ ಅಭಿವೃದ್ಧಿ, ಸರ್ಕಾರಗಳ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಮೂಲಕ ದೀರ್ಘಕಾಲೀನ ಬದಲಾವಣೆಯನ್ನು ಇದು ಉತ್ತೇಜಿಸುತ್ತದೆ.

ವಿಶ್ವ ಆಹಾರ ಕಾರ್ಯಕ್ರಮಕ್ಕೆ 2020 ರ ನೊಬೆಲ್ ಶಾಂತಿ ಪ್ರಶಸ್ತಿ :

ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಯ ಉತ್ತಮ ಪರಿಸ್ಥಿತಿಗಳನ್ನು ಒದಗಿಸಲು ಮತ್ತು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನಾರ್ವೇಜಿಯನ್ ನೊಬೆಲ್ ಸಮಿತಿಯು ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ)ಕ್ಕೆ 2020ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಯುದ್ಧ ಮತ್ತು ಸಂಘರ್ಷದ ಆಯುಧವಾಗಿ ಹಸಿವು ಬಳಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ಆಯ್ಕೆ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ

ವಿಶ್ವ ಆಹಾರ ಕಾರ್ಯಕ್ರಮ ಹೇಗೆ ಕಾರ್ಯನಿರ್ವಹಿಸುತ್ತದೆ..?

  • ವಿಶ್ವಾದ್ಯಂತ 17 ಸಾವಿರ ಸಿಬ್ಬಂದಿ
  • ಪ್ರತಿದಿನ 5,600 ಟ್ರಕ್‌ಗಳು, 20 ಹಡಗುಗಳು ಮತ್ತು 92 ವಿಮಾನಗಳು ಡಬ್ಲ್ಯುಎಫ್‌ಪಿ ಭಾಗವಾಗಿ ಸಂಚರಿಸುತ್ತವೆ.
  • ಶೇ. 100 ಸ್ವಯಂಪ್ರೇರಿತ ನಿಧಿಯ ಮೂಲಕ 2018 ರಲ್ಲಿ 7.2 ಬಿಲಿಯನ್ ಯುಎಸ್ ಡಾಲರ್​ ಸಂಗ್ರಹಿಸಲಾಗಿದೆ
  • 83 ದೇಶಗಳಲ್ಲಿ 86.7 ಮಿಲಿಯನ್ ಫಲಾನುಭವಿಗಳು ಮತ್ತು ಕಾರ್ಯಾಚರಣೆಗಳು
  • 60 ದೇಶಗಳಲ್ಲಿ 16.4 ಮಿಲಿಯನ್ ಶಾಲಾ ಮಕ್ಕಳು ಆಹಾರ ಸ್ವೀಕರಿಸುತ್ತಿದ್ದಾರೆ
  • ಡಬ್ಲ್ಯುಎಫ್‌ಪಿ 40 ದೇಶಗಳ ಸಣ್ಣ ಹಿಡುವಳಿದಾರರನ್ನು ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತದೆ
  • ಇದುವರೆಗೆ 1.76 ಬಿಲಿಯನ್ ಯುಎಸ್​ ಡಾಲರ್​ ನಗದು ವ್ಯವಹಾರ ನಡೆಸಿದೆ
  • ಶೇ. 52 ಮಹಿಳೆಯರು ಮತ್ತು ಹುಡುಗಿಯರು ಡಬ್ಲ್ಯುಎಫ್‌ಪಿ ನೆರವಿನೊಂದಿಗೆ ಆಹಾರ ನೆರವು ಪಡೆಯುತ್ತಿದ್ದಾರೆ
  • ವರ್ಷಕ್ಕೆ 90 ದಶ ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಒದಗಿಸುತ್ತದೆ.
  • ಜೀವನೋಪಾಯವನ್ನು ಅಭಿವೃದ್ಧಿಪಡಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಸರಿದೂಗಿಸಲು 2014 ರಿಂದ 1.4 ದಶಲಕ್ಷ ಹೆಕ್ಟೇರ್ ಅರಣ್ಯವಾಗಿ ಪರಿವರ್ತಿಸಲಾಗಿದೆ.
  • 2018 ರಲ್ಲಿ 42 ದೇಶಗಳ 5 ಮಿಲಿಯನ್ ಜನರು ಡಬ್ಲ್ಯುಎಫ್‌ಪಿ ನೆರವಿನೊಂದಿಗೆ ಪೌಷ್ಠಿಕಾಂಶ ಶಿಕ್ಷಣ ಪಡೆದಿದ್ದಾರೆ
  • ಮಾನವೀಯ ಕಾರ್ಯಗಳಿಗೆ ಬಳಸುವ ಸಲುವಾಗಿ ಡಬ್ಲ್ಯುಎಫ್‌ಪಿ ನೆರವಿನೊಂದಿಗೆ ಕಳೆದ ವರ್ಷ ಸುಮಾರು 90 ಸಂಸ್ಥೆಗಳು ಡ್ರೋನ್ ತರಬೇತಿ ಪಡೆದಿವೆ
  • ಆಹಾರ ಭದ್ರತಾ ಮೌಲ್ಯಮಾಪನ ಸಮೀಕ್ಷೆಗಳಿಗೆ ಮೊಬೈಲ್ ತಂತ್ರಜ್ಞಾನ ಬಳಸಲು ಡಬ್ಲ್ಯುಎಫ್‌ಪಿಗೆ 40 ದೇಶಗಳು ಬೆಂಬಲ ನೀಡಿವೆ
  • 2018 ರಲ್ಲಿ 24.5 ಮಿಲಿಯನ್ ಜನರು ನಗದು ನೆರವು ಪಡೆದಿದ್ದಾರೆ, ಈ ಪೈಕಿ ಶೇ. 26 ಎಲೆಕ್ಟ್ರಾನಿಕ್ ವೋಚರ್​ಗಳ ಮೂಲಕ ನಡೆದಿವೆ
  • 80 ದೇಶಗಳ 80 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸಹಾಯ ಒದಗಿಸಲು, 1 ಸಾವಿರಕ್ಕೂ ಹೆಚ್ಚು ಎನ್‌ಜಿಒಗಳು ಡಬ್ಲ್ಯುಎಫ್‌ಪಿ ಜೊತೆ ಪಾಲುದಾರಿಕೆ ಹೊಂದಿವೆ

ವಿಶ್ವ ಆಹಾರ ಕಾರ್ಯಕ್ರಮದ ಇತಿಹಾಸ :

ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ವಿಶ್ವಸಂಸ್ಥೆ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಗಳ ಜಂಟಿ ಕಾರ್ಯಕ್ರಮವಾಗಿದೆ. ಡಿಸೆಂಬರ್ 1961 ರಲ್ಲಿ ಇದನ್ನು ಸ್ಥಾಪಿಸಲಾಯಿತು ಮತ್ತು 1963 ರಲ್ಲಿ ಇದರ ಚಟುವಟಿಕೆಗಳು ಪ್ರಾರಂಭವಾಯಿತು.

1961: ಡಬ್ಲ್ಯುಎಫ್‌ಪಿ ಸ್ಥಾಪನೆ

1963: ಮೊದಲ ಅಭಿವೃದ್ಧಿ ಕಾರ್ಯಕ್ರಮವನ್ನು ಸುಡಾನ್‌ನಲ್ಲಿ ಪ್ರಾರಂಭಿಸಲಾಯಿತು

1984: ಇಥಿಯೋಪಿಯಾದ ಬರಗಾಲದ ಸಮಯದಲ್ಲಿ 2 ಮಿಲಿಯನ್ ಟನ್ ಆಹಾರ ವಿತರಣೆ

1992: ಯುರೋಪಿನ ಮೊದಲ ದೊಡ್ಡ ಪ್ರಮಾಣದ ತುರ್ತು ಪರಿಹಾರ ಕಾರ್ಯಾಚರಣೆಯನ್ನು ಯುಗೊಸ್ಲಾವಿಯದಲ್ಲಿ ನಡೆಸಲಾಯಿತು

ವಿಶ್ವ ಆಹಾರ ಕಾರ್ಯಕ್ರಮದ ಇತಿಹಾಸ ಮತ್ತು ಪ್ರಮುಖ ಮಾನವೀಯ ಕಾರ್ಯಕ್ರಮಗಳು:

  • ವಿಶ್ವ ಸಂಸ್ಥೆಯ ಮೂಲಕ ಆಹಾರ ಒದಗಿಸುವ ಪ್ರಾಯೋಗಿಕ ಕಾರ್ಯಕ್ರಮವಾಗಿ (ಯುಎಸ್ ಅಧ್ಯಕ್ಷ ಡ್ವೈಟ್ ಐಸೆನ್‌ಹೋವರ್ ಸೂಚನೆ ಮೇರೆಗೆ) ಡಬ್ಲ್ಯುಎಫ್‌ಪಿ ರೂಪ ತಾಳುತ್ತದೆ
  • ಸೆಪ್ಟೆಂಬರ್ 1962 ರಲ್ಲಿ ಉತ್ತರ ಇರಾನ್​ನ ಬೋಯಿನ್ ಜಹ್ರಾ ಪ್ರದೇಶದಲ್ಲಿ ಭೂಕಂಪನ ಸಂಭವಿಸಿ 12 ಸಾವಿರಕ್ಕೂ ಅಧಿಕ ಜನ ಸಾಯುತ್ತಾರೆ. ಸಾವಿರಾರು ಮನೆಗಳು ನಾಶವಾಗುತ್ತವೆ. ಈ ವೇಳೆ ಬದುಕುಳಿದವರಿಗೆ 1,500 ಮೆಟ್ರಿಕ್ ಟನ್ ಗೋಧಿ, 270 ಟನ್ ಸಕ್ಕರೆ ಮತ್ತು 27 ಟನ್ ಚಹಾ ಹುಡಿಯನ್ನು ಡಬ್ಲ್ಯುಎಫ್‌ಪಿ ತ್ವರಿತವಾಗಿ ಕಳುಹಿಸುತ್ತದೆ.
  • ಡಬ್ಲ್ಯುಎಫ್‌ಪಿಯ ಮೊದಲ ಅಭಿವೃದ್ಧಿ ಕಾರ್ಯಕ್ರಮ 1963 ರಲ್ಲಿ ಸುಡಾನ್‌ನ ನುಬಿಯನ್ನರಿಗಾಗಿ ಪ್ರಾರಂಭಿಸಲಾಯಿತು.
  • 1963 ರಲ್ಲಿ ಡಬ್ಲ್ಯುಎಫ್‌ಪಿಯ ಮೊದಲ ಶಾಲಾ ಊಟ ಯೋಜನೆ, ಟೋಗೊದಲ್ಲಿ ಪ್ರಾರಂಭವಾಯಿತು. ಆ ಬಳಿಕ ತುರ್ತು ಸ್ಥಿತಿಯಲ್ಲಿ ನೆರವು ನೀಡುವ ಮತ್ತು ಅಭಿವೃದ್ಧಿ ಮಾಡುವ ಪ್ರಮುಖ ಸಂಸ್ಥೆಯಾಗಿ ಡಬ್ಲ್ಯುಎಫ್‌ಪಿ ಗುರುತಿಸಿಕೊಂಡಿತು
  • 1965 ರಲ್ಲಿ, ಡಬ್ಲ್ಯುಎಫ್‌ಪಿಯನ್ನು ಪೂರ್ಣ ಪ್ರಮಾಣದ ಯುಎನ್ ಕಾರ್ಯಕ್ರಮವಾಗಿ ಘೋಷಿಸಲಾಯಿತು.
  • 1970 ರ ದಶಕದಲ್ಲಿ ಪಶ್ಚಿಮ ಸಾಹೇಲ್​ನಲ್ಲಿ ಭೀಕರ ಬರಗಾಲದ ಎದುರಾದಾಗ, ಅಗತ್ಯವಿರುವವರಿಗೆ ಸಹಾಯ ಮಾಡಲು ಡಬ್ಲ್ಯುಎಫ್‌ಪಿ ತನ್ನ ಶಕ್ತಿಮೀರಿ ಪ್ರಯತ್ನಪಟ್ಟಿತ್ತು. ಕಾರಿನಿಂದ ಒಂಟೆಯವರೆಗೆ, ರಸ್ತೆಯಿಂದ ನದಿಗೆವರೆಗೆ ಇದು ಸಹಾಯವನ್ನು ಒದಗಿಸಿತ್ತು. 12 ರಾಷ್ಟ್ರೀಯ ವಾಯುಪಡೆಗಳ ಮೂವತ್ತು ಸರಕು ವಿಮಾನಗಳ ಮೂಲಕ ಆಹಾರ ಒದಗಿಸುವ ಕಾರ್ಯವನ್ನು ಡಬ್ಲ್ಯುಎಫ್‌ಪಿ ಮಾಡಿತ್ತು.
  • 1984 ರಲ್ಲಿ ಇಥಿಯೋಪಿಯಾದ ಬರಗಾಲ ಉಂಟಾದಾಗ ಡಬ್ಲ್ಯುಎಫ್‌ಪಿ 2 ಮಿಲಿಯನ್ ಟನ್ ಆಹಾರ ಒದಗಿಸಿದೆ.
  • 1989 ರಲ್ಲಿ, ಅತೀ ದೊಡ್ಡ ಸೇವಾ ಕಾರ್ಯಕ್ರಮ ಆಪರೇಷನ್ ಲೈಫ್‌ಲೈನ್ ಸುಡಾನ್​ನ್ನು ಪ್ರಾರಂಭಿಸಲಾಯಿತು. ಈ ವೇಳೆ ಯುನಿಸೆಫ್ ಜೊತೆಗೆ ಯುಎನ್ ಏಜೆನ್ಸಿಗಳು ಮತ್ತು ದತ್ತಿ ಸಂಸ್ಥೆಗಳ ಒಕ್ಕೂಟವನ್ನು ಡಬ್ಲ್ಯುಎಫ್‌ಪಿ ಮುನ್ನಡೆಸಿತು ಮತ್ತು 1.5 ಮಿಲಿಯನ್ ಟನ್ ಆಹಾರವನ್ನು ವಿಮಾನಗಳ ಮೂಲಕ ಆಕಾಶದಿಂದ ಒದಗಿಸಿತ್ತು. ಮೂರು ದಿನಗಳ ಕಾಲ ಮುಂಜಾನೆಯಿಂದ ಮುಸ್ಸಂಜೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ 20 ವಿಮಾನಗಳು ಪಾಲ್ಗೊಂಡಿದ್ದವು. ಲಕ್ಷಾಂತರ ಜೀವನಗಳ್ನು ಉಳಿಸಿದ ಈ ಕಾರ್ಯಕ್ರಮ ಇತಿಹಾಸದಲ್ಲಿ ಇಂದಿಗೂ ದೊಡ್ಡ ಕಾರ್ಯಾಚರಣೆಯಾಗಿ ಉಳಿದಿದೆ.
  • ಯುಗೊಸ್ಲಾವಿಯ ವಿಂಗಡನೆಯಾಗುತ್ತಿದ್ದಂತೆ ರುವಾಂಡಾದಲ್ಲಿ ನರಮೇಧ ಪ್ರಾರಂಭವಾಗುತ್ತದೆ, ಅಲ್ಲಿಯೂ ಡಬ್ಲ್ಯುಎಫ್‌ಪಿ ಸಹಾಯ ಹಸ್ತ ಚಾಚಿದೆ.
  • 1999 ರಲ್ಲಿ ಕೊಸೊವೊದಲ್ಲಿ, ಡಬ್ಲ್ಯುಎಫ್‌ಪಿ ಮೊಬೈಲ್ ಬೇಕರಿಗಳ ಜಾಲವನ್ನು ಸ್ಥಾಪಿಸುತ್ತದೆ.
  • ಕ್ಯೂಟೋ ಶಿಷ್ಟಾಚಾರದಿಂದ ಬದಲಾಗುತ್ತಿರುವ ಹವಾಮಾನದ ಪ್ರಭಾವವನ್ನು ಜಗತ್ತು ಅಂಗೀಕರಿಸಿದೆ: ಡಬ್ಲ್ಯುಎಫ್‌ಪಿಯ ದೀರ್ಘಕಾಲೀನ ನೆರವು ಯೋಜನೆಗಳಿಂದಾಗಿ ಇದನ್ನು ಸರಿಪಡಿಸಲು ಹೊಸ ಪ್ರಯತ್ನ ನಡೆಯುತ್ತಿದೆ.
  • ಸರ್ಕಾರೇತರ ಸಂಸ್ಥೆಗಳು ಮಾನವೀಯ ಸೇವೆ ಮತ್ತು ಅಭಿವೃದ್ದಿಯ ನಿಟ್ಟಿನಲ್ಲಿ ನೆರವನ್ನು ನೀಡಲು ಮುಂದೆ ಬರುತ್ತಿವೆ. ಡಬ್ಲ್ಯುಎಫ್‌ಪಿ, ಹೆಚ್ಚಿನ ನೆರವನ್ನು ಕ್ರೂಢೀಕರಿಸುವ ಮೂಲಕದ ಜಗತ್ತನ್ನು ಹಸಿವು ಮುಕ್ತ ಮಾಡಲು ಪ್ರಯತ್ನಿಸುತ್ತಿದೆ.
  • 2000 ಇಸವಿಯಲ್ಲಿ ದೊಡ್ಡ ಮಟ್ಟದ ಅಭಿವೃದ್ದಿ ಗುರಿಯನ್ನು ಡಬ್ಲ್ಯುಎಫ್‌ಪಿ ಹೊಂದಿದೆ. ಬಡತನ, ಹಸಿವು ಮತ್ತು ಸಾಂಕ್ರಾಮಿಕ ರೋಗ ಮುಕ್ತ ಜಗತ್ತಿನ ನೀಲನಕ್ಷೆಯನ್ನು ಡಬ್ಲ್ಯುಎಫ್‌ಪಿ ತಯಾರಿಸಿದೆ. ಇದಕ್ಕಾಗಿ ಹೆಚ್ಚಿನ ಶಕ್ತಿಯನ್ನು ಒಗ್ಗೂಡಿಸುತ್ತಿದೆ. ಜಾಗತಿಕವಾಗಿ ಸಂಘರ್ಷ ಮತ್ತು ಅಭದ್ರತೆಯನ್ನು ಕೊನೆಗೊಳಿಸಲು, ವಿವಿಧ ದೇಶಗಳ ರಾಜಕೀಯ ಗುಣಮಟ್ಟವನ್ನುನ ಸುಧಾರಿಸಲು ಇದು ಪ್ರಯತ್ನಿಸುತ್ತಿವೆ.
  • ಅತೀ ದೊಡ್ಡ ಮಾನವೀಯ ಬಿಕ್ಕಟ್ಟುಗಳಿಲ್ಲ ದಶಕಗಳಿಲ್ಲ (2004 ರ ಏಷ್ಯನ್ ಸುನಾಮಿ ಮತ್ತು 2010 ರ ಹೈಟಿ ಭೂಕಂಪ ಎರಡ ಸಂದರ್ಭದಲ್ಲೂ ದೊಡ್ಡ ಮಟ್ಟದ ಸಹಾಯ ಬೇಕಾಗಿತ್ತು) ಈ ಸಂದರ್ಭಗಳಲ್ಲಿ ದೊಡ್ಡ ಮಟ್ಟದ ನೆರವಿನೊಂದಿಗೆ ಹೊಸ ಅನ್ವೇಷಣೆಗಳನ್ನು ಡಬ್ಲ್ಯುಎಫ್‌ಪಿ ಮಾಡಿದೆ.
  • ವಿಶ್ವದ ಮೊದಲ ನಿಯಮಿತ ಮಾನವೀಯ ವಾಯು ಸೇವೆ, UNHAS ಪ್ರಾರಂಭವಾಗಿದೆ
  • 2014 ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾ ವೈರಸ್ ಕಾಣಿಸಿಕೊಂಡಾಗ ಕೂಡ ಡಬ್ಲ್ಯುಎಫ್‌ಪಿ ತನ್ನ ಕಾರ್ಯಚಟುವಟಿಕೆಯನ್ನು ಸಮರ್ಥವಾಗಿ ನಿರ್ವಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.