ಭಾರತದ ಹತ್ತಿರದ ನೆರೆಯ ಮತ್ತು ಮಿತ್ರ ರಾಷ್ಟ್ರವಾದ ನೇಪಾಳವು ಹಳೆಯ ವಸಾಹತುಶಾಹಿ ಒಪ್ಪಂದಗಳನ್ನು ಮರುಪರಿಶೀಲಿಸುತ್ತದೆ ಮತ್ತು ವಿವಾದಿತ ಭೂಮಿಯಲ್ಲಿ ತನ್ನ ಹತ್ತಿರದ ನೆರೆಯ ಮತ್ತು ಮಿತ್ರರೊಂದಿಗೆ ಹಕ್ಕು ಸಾಧಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಇತ್ತೀಚೆಗೆ ತರಾತುರಿಯಲ್ಲಿ ಸಂಸತ್ತಿನಲ್ಲಿ ಮಸೂದೆಯನ್ನು ಜಾರಿಗೆ ತಂದಿರುವ ನೇಪಾಳ ಕಾಲಾಪನಿ, ಲಿಪುಲೆಖ್ ಮತ್ತು ಲಿಂಪಿಯಾಧುರಾ ಎಂಬ ಮೂರು ಸ್ಥಳಗಳನ್ನು ನೇಪಾಳಕ್ಕೆ ಸೇರಿಸಿಕೊಂಡಿದೆ.
ನೇಪಾಳದ ಈ ಆಕ್ರಮಕಾರಿ ಕೃತ್ಯಕ್ಕೆ ಕೋಪಗೊಂಡ ಭಾರತವು ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ಗೊಂದಲದಲ್ಲಿ ಸಿಲುಕಿದೆ. ನೇಪಾಳದ ಈ ವಿಚಿತ್ರ ವರ್ತನೆಯು ಗಡಿಯಲ್ಲಿ ಭಾರತ, ಚೀನಾದೊಂದಿಗಿನ ಗಡಿ ಸಂಬಂಧಿತ ವಿವಾದದ ಹಿನ್ನೆಲೆಯಲ್ಲಿ ಉಲ್ಬಣಗೊಂಡಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಚೀನಾ ದೇಶವು ತನ್ನ ಸೈನ್ಯವನ್ನು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಹತ್ತಿರಕ್ಕೆ ತಂದಿದ್ದು ಮಾತ್ರವಲ್ಲದೆ, ಭಾರತದ ಗುರುತು ಹಾಕದ ಗಡಿಗಳನ್ನು ರಕ್ಷಿಸುವ ಭಾರತದ ಸಂಕಲ್ಪವನ್ನು ಪರೀಕ್ಷಿಸುತ್ತಿದೆ. ಜೂನ್ 15 ರಂದು ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್‌ಎಸಿ ವಿವಾದದ ಬಗ್ಗೆ ಚೀನಾದ ಪ್ರತಿವಾದದ ಬಗ್ಗೆ ಭಾರತ ಪ್ರತಿಕ್ರಿಯಿಸುವ ರೀತಿ ಮತ್ತು ಅದನ್ನು ನಿಯಂತ್ರಿಸುವ ವಿಧಾನವು ಭೂ ಗಡಿ ವಿಷಯದಲ್ಲಿ ನೇಪಾಳ ಭಾರತವನ್ನು ಹೇಗೆ ಸವಾಲು ಮಾಡುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.
ಈ ಸಮಯದಲ್ಲಿ ನೇಪಾಳವು ವಿವಾದಿತ ಪ್ರದೇಶದ ಮೇಲೆ ತನ್ನ ಹಕ್ಕುಗಳನ್ನು ಇಷ್ಟು ಆಕ್ರಮಣಕಾರಿಯಾಗಿ ಏಕೆ ಸಾಧಿಸಿತು? ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಅವರ ಆಂತರಿಕ ತೊಂದರೆಗಳಿಂದ ಪಾರಾಗಲು ಈ ರೀತಿ ಪೂರ್ವ ನಿಯೋಜಿತವಾಗಿ ಕೃತ್ಯ ಎಸಗಿದರೆ? ಅಥವಾ ಗಡಿಯಲ್ಲಿ ಭಾರತಕ್ಕೆ ಆಕ್ರಮಣಕಾರಿಯಾಗಿ ತಂಟೆ ಮಾಡುತ್ತಿರುವ ಚೀನಾದಿಂದ ಪ್ರೋತ್ಸಾಹಿಸಲ್ಪಟ್ಟಿದೆಯೇ ಎಂಬುದು ಪ್ರಶ್ನೆಯಾಗಿದೆ?
ವಿವಾದಿತ ಪ್ರದೇಶಗಳನ್ನ ಕಬಳಿಸಲು ನೇಪಾಳ ಸರ್ಕಾರದ ಪ್ರಯತ್ನಗಳ ಸಮಯವು ಚೀನಾ ಜೊತೆಗೆ ಭಾರತ ಗಡಿ ವಿವಾದದ ಘಟನೆಗೆ ಸಂಬಂಧ ಹೊಂದಿದೆಯೆಂದು ತೋರುತ್ತದೆ. ಆದರೂ, ನೇಪಾಳ ಪ್ರಧಾನಿ ಒಲಿಯ ನಿರ್ಧಾರವು ಎಲ್ಲಕ್ಕಿಂತ ಹೆಚ್ಚಾಗಿ ನವದೆಹಲಿಯೊಂದಿಗಿನ ಅವರ ಹಳಸಿದ ಸಂಬಂಧಗಳಿಂದ ಆಗಿರುವುದು ಬೇರೆಲ್ಲ ಕಾರಣಗಳಿಗಿಂತ ಹೆಚ್ಚಿನದ್ದಾಗಿದೆ. ಇದೇ ಭಾರತದ ಮೇಲೆ ನೇಪಾಳದ ವರ್ತನೆಗೆ ಪ್ರೇರೇಪಿಸಿತು ಎಂದು ಸೂಚಿಸಲು ಸಾಕಷ್ಟು ಕಾರಣಗಳಿವೆ.
ನೇಪಾಳದ ಯುದ್ಧಕ್ಕೆ ಪ್ರ ಧಾನಿ ಒಲಿ ಚೀನಾವನ್ನು ದೂಷಿಸಿದಾಗ ಓಲಿಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ನವರೇನ್ ತಪ್ಪಾಗಿ ಅರ್ಥ ಮಾಡಿಕೊಂಡಿದ್ದರು. ಸಾರ್ವಭೌಮ ಮಿತ್ರ ರಾಷ್ಟ್ರ ನೇಪಾಳವು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥ ಎಂಬ ಈ ಹೇಳಿಕೆಯು ಕಠ್ಮಂಡುವಿನ ಆಡಳಿತ ವಲಯಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಅದರ ನಂತರ, ನೇಪಾಳ ಸರ್ಕಾರವು ಭಾರತವು ತಮ್ಮದೆಂದು ಪ್ರತಿಪಾದಿಸಿದ್ದ ಆ 3 ಸ್ಥಳಗಳನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡಿದೆ. ತಮ್ಮ ನಿರ್ಧಾರದ ಬಗ್ಗೆ ಭಾರತವು ಏನು ಯೋಚಿಸುತ್ತಿದೆ ಎಂದು ಪರೀಕ್ಷಿಸಲು ನೇಪಾಳಿಗಳು ವಿರಾಮ ನೀಡಲಿಲ್ಲ ಅಥವಾ ಭಾರತ ದೇಶವು ಈ ಬಗ್ಗೆ ಮಾತುಕತೆಗೆ ಮುಕ್ತವಾಗಿದೆಯೇ? ಎಂಬ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಮಸೂದೆ ಜಾರಿಗೆ ಬಂದ ನಂತರವೇ ಒಲಿ ಸರ್ಕಾರವು ಭಾರತದೊಂದಿಗೆ ಮಾತನಾಡಲು ಸಿದ್ಧ ಎಂದು ಹೇಳಿ ನವದೆಹಲಿ ಸಂಪರ್ಕಕ್ಕೆ ನಿರ್ಧಾರ ಮಾಡಿತು. ಈ ಮಸೂದೆ ಪಾಸ್ ಆದ ಬಳಿಕ ಮಾತುಕತೆಗೆ ಬಂದ ನೇಪಾಳಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ರಾಜತಾಂತ್ರಿಕ ಅಧಿಕಾರಿ, ʻಈಗ ಮಾತನಾಡಲು ಅಲ್ಲಿ ಇನ್ನೇನಿದೆʼ ಎಂದಿದ್ದಾರೆ. ಭಾರತದ ಬಗ್ಗೆ ನೆರೆ ರಾಷ್ಟ್ರಗಳಲ್ಲಿ ವೈರತ್ವ ಏಕೆ ಹೆಚ್ಚುತ್ತಿದೆ ಮತ್ತು ವಿವಾದಿತ ಪ್ರದೇಶಗಳ ಮೇಲೆ ಹಿಡಿತ ಸಾಧಿಸುವಂತಹ ಸಾಂಕೇತಿಕ ಕೃತ್ಯಗಳು ನೇಪಾಳದ ಕಡೆಯಿಂದ ಪ್ರಚೋದಿತವಾಗಿ ಏಕೆ ಆಗುತ್ತಿವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಲು ಭಾರತ ಸರ್ಕಾರ ನಿರ್ಧರಿಸಿದರೆ. ಸಾಕಷ್ಟು ಕಾರಣ ಸಿಗುತ್ತವೆ.
ನೇಪಾಳ ಪ್ರಧಾನಿ ಒಲಿಯ ಆಡಳಿತದ ಗುಣಮಟ್ಟ ಅಲ್ಲಿನ ಜನರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಕೊರೋನಾ ಜಾಗತಿಕ ಸಾಂಕ್ರಾಮಿಕ ರೋಗವನ್ನು ಓಲಿ ಹೇಗೆ ನಿಭಾಯಿಸಿದ್ದಾರೆ ಎಂಬ ಬಗ್ಗೆ ಯುವ ಸಮುದಾಯದಿಂದ ಆಂದೋಲನವೇ ನಡೆಯುತ್ತಿದೆ. ಕೊರೋನಾ ಪಾಸಿಟಿವ್ ಸಂಖ್ಯೆಗಳು ಗಗನಕ್ಕೇರಿವೆ. ಇಲ್ಲಿಯೂ ಸಹ, ಓಲಿ ಭಾರತದ ಕಡೆಗೆ ಬೊಟ್ಟು ಮಾಡಿದ್ದು, ಭಾರತದಿಂದ ಬರುತ್ತಿರುವವರಿಂದ ಹೆಚ್ಚು ವೈರಸ್ ಹರಡುತ್ತಿದೆ ಎಂದು ಆರೋಪಿಸಿ ಅವರ ಗಮನ ಬದಲಾಯಿಸಿದರು. ಆದರೆ, ಸತ್ಯವೆಂದರೆ ಭಾರತದಿಂದ ನೇಪಾಳಕ್ಕೆ ಹಿಂದಿರುಗಿದವರ ಸಂಖ್ಯೆ ಬಹಳ ಕಡಿಮೆ.
ತಾವು ಅನಾರೋಗ್ಯಕ್ಕೆ ಒಳಗಾದಾಗ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ನಡೆದ ಯತ್ನದಲ್ಲಿ ಭಾರತದ ಕೈವಾಡವಿದೆ ಎಂದು ಭಾವಿಸಿದ್ದ ಪ್ರಧಾನಿ ಓಲಿ ಅವರು ನವದೆಹಲಿ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಒಲಿ ವಿರುದ್ಧ ಪ್ರಚಂಡಾ ತಿರುಗಿ ಬೀಳಲು ಸಹ ಭಾರತದ ಪ್ರೋತ್ಸಾಹವೇ ಕಾರಣ ಎಂಬುವುದು ಅವರ ಆರೋಪ. ಸಾಮಾಜಿಕವಾಗಿ ಹೆಚ್ಚು ಆಕ್ಸೆಸೆಬಲ್ ಆಗಿದ್ದ ಚೀನಾದ ರಾಯಭಾರಿ ಹಸ್ತಕ್ಷೇಪದ ನಂತರ ಓಲಿ ನೇಪಾಳದಲ್ಲಿ ಅಧಿಕಾರ ಉಳಿಸಿಕೊಂಡರು.
ಇತ್ತ, ಭಾರತದ ವಿರುದ್ಧ ತಿರುಗಿ ಬೀಳಲು ಅವಕಾಶಕ್ಕಾಗಿ ಕಾಯುತ್ತಿದ್ದ ನೇಪಾಳ ಪ್ರಧಾನಿ ಒಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೇಪಾಳ ತನ್ನ ಪ್ರದೇಶವೆಂದು ಹೇಳಿಕೊಂಡಿದ್ದ ಪ್ರದೇಶದಲ್ಲಿ ಲಿಪುಲೆಖ್ ಪಾಸ್ ಮೂಲಕ ಕೈಲಾಸ ಮಾನಸರೋವರಕ್ಕೆ ಹೋಗುವ ರಸ್ತೆಯನ್ನು ಸ್ವಲ್ಪವೂ ಯೋಚಿಸದೇ ಉದ್ಘಾಟನೆ ಮಾಡಿದ ಸಂದರ್ಭವನ್ನು ಒಲಿ ಸರಿಯಾಗಿಯೇ ಬಳಕೆ ಮಾಡಿಕೊಂಡರು. ಈ ಸಂದರ್ಭ ಹೇಳಿಕೆ ನೀಡಿದ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ: “ಐತಿಹಾಸಿಕವಾಗಿ ನೇಪಾಳಕ್ಕೆ ಸೇರಿದ ಭೂಪ್ರದೇಶದಲ್ಲಿ ಭಾರತ ಲಿಂಕ್ ರಸ್ತೆಯನ್ನ ನಿರ್ಮಿಸಿ ಉದ್ಘಾಟಿಸಿದೆ. 1816 ರ ಸುಗೌಲಿ ಒಪ್ಪಂದದ ಪ್ರಕಾರ, ಮಹಾಕಾಳಿ ನದಿಯ ಪೂರ್ವದಲ್ಲಿರುವ ಪ್ರದೇಶವು ನೇಪಾಳಕ್ಕೆ ಸೇರಿದೆ ಮತ್ತು ನೇಪಾಳದ ಗಡಿಯನ್ನು ನಿರ್ಧರಿಸುವಲ್ಲಿ ‘ಸ್ಥಿರ ಗಡಿ’ ತತ್ವವನ್ನು ಅನುಸರಿಸಲು 1988 ರಲ್ಲಿ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದರು, ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿದಾಗ ಮತ್ತು ದೀರ್ಘ ತೀರ್ಥಯಾತ್ರೆಗೆ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಲಿಪುಲೆಖ್‌ನಲ್ಲಿ ಗಡಿ ಪೋಸ್ಟ್ ನಿರ್ಮಿಸಲು ನಿರ್ಧರಿಸಿದಾಗ ನೇಪಾಳ ತನ್ನ ಪ್ರತಿಭಟನೆ ವ್ಯಕ್ತಪಡಿಸಿತ್ತು. ಹಿಂದೂಗಳು ಬಹುಸಂಖ್ಯಾತರಾಗಿರುವ ದೇಶದಲ್ಲಿ ಹಿಂದೂಗಳನ್ನು ಸಜ್ಜುಗೊಳಿಸಲು ಮಾನಸರೋವರ್ ಯಾತ್ರೆಯನ್ನು ಬಳಸುವ ಭಾರತೀಯ ನಾಯಕತ್ವದ ಸ್ಪಷ್ಟ ಪ್ರಯತ್ನಗಳು ನೇಪಾಳವನ್ನು ಕೆರಳಿಸಿದೆ. ಮೋದಿಯ ನೇತೃತ್ವದ ಭಾರತೀಯ ಸರ್ಕಾರ ಹಿಂದೂ ನಾಗರಿಕ ಸಂಪರ್ಕಗಳನ್ನು ಬಳಸಲು ಪ್ರಯತ್ನಿಸುವ ಮೂಲಕ ದೇಶದ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಿದೆ. ಈ ಪ್ರಯತ್ನದಿಂದ ಭಾರತಕ್ಕೆ ಹಿನ್ನಡೆಯಾಗಿದೆ. ಉಳಿಗಮಾನ್ಯ ಪದ್ಧತಿ ನಡೆಸಿದ್ದ ರಾಣಾ ರಾಜವಂಶದಿಂದಾಗಿ ನೇಪಾಳ, ಹಿಂದೂ ಧರ್ಮವನ್ನು ಅದೇ ಹಿನ್ನೆಲೆಯಲ್ಲಿ ಗ್ರಹಿಸುತ್ತದೆ, ಉಳಿಗ ಮಾನ್ಯ ಪದ್ಧತಿ ವಿರುದ್ಧ ಅಂದು ಮಾವೋವಾದಿಗಳು ಭಾರೀ ಹೋರಾಟ ಸಹ ನಡೆಸಿದ್ದರು. ಕಠ್ಮಂಡುವಿನ ನಾಯಕತ್ವವು ನೇಪಾಳವನ್ನು ಹಿಂದೂ ರಾಜ್ಯವೆಂದು ಘೋಷಿಸಲು ನಿರಾಕರಿಸಿದಾಗ ಭಾರತ ಮತ್ತು ನೇಪಾಳ ನಡುವಿನ ಸಂಬಂಧವು ಕಹಿಯಾಗಿತ್ತು.
2015 ರಿಂದೀಚೆಗೆ, ನೇಪಾಳದೊಂದಿಗಿನ ಭಾರತದ ಸಂಬಂಧವು ಕುಸಿಯುತ್ತಿದೆ. ವಿಶೇಷ ಸಂಬಂಧದ ಹೊರತಾಗಿಯೂ ಭಾರತ ಸರ್ಕಾರವು ಈ ನೇಪಾಳದ ಜೊತೆಗಿನ ಬಾಂಧವ್ಯವನ್ನು ಮರುರೂಪಿಸಲು ಸಾಧ್ಯವಾಗಲಿಲ್ಲ. ಗಡಿಯ ಈ ಭೂಮಿ ಕಲಹ ಭಾರತವು ಚೀನಾ ದೃಷ್ಟಿಕೋನದಿಂದ ನೋಡುವುದರಿಂದ ಮುಂದಿನ ದಿನಗಳಲ್ಲಿ ನೇಪಾಳದ ಜೊತೆ ಭವಿಷ್ಯದ ಸಂಬಂಧಗಳಿಗೆ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುವುದು. ಇದು ಭಾರತ, ನೇಪಾಳ ದೇಶಗಳ ನಿಕಟ ಸಂಬಂಧಗಳನ್ನು ವಿವಿಧ ಹಂತಗಳಲ್ಲಿ ಹಾಳು ಮಾಡುತ್ತದೆ. ಆತಂಕಕಾರಿ ಸಂಗತಿಯೆಂದರೆ, ಭಾರತೀಯ ಆರ್ಥಿಕತೆಯು ಸದ್ಯ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವುದರಿಂದ ಉದ್ಯೋಗವನ್ನು ಹುಡುಕುತ್ತಿರುವ ಅನೇಕ ಯುವ ನೇಪಾಳಿಗಳಿಗೆ ಇನ್ನು ಮುಂದೆ ಭಾರತ ಆಕರ್ಷಕ ತಾಣವಾಗುವುದಿಲ್ಲ.