ETV Bharat / bharat

ಸಂಪೂರ್ಣ ಲಾಕ್​ಡೌನ್​​ ಹಿಂಪಡೆದ ಪಶ್ಚಿಮ ಬಂಗಾಳ ಸರ್ಕಾರ: ಆಗಸ್ಟ್​ 28ರಿಂದ ಜಾರಿ!

ಮಹಾಮಾರಿ ಕೊರೊನಾ ವೈರಸ್​ ತಡೆಗಟ್ಟುವ ಉದ್ದೇಶದಿಂದ ರಾಜ್ಯದಲ್ಲಿ ಹೇರಿಕೆ ಮಾಡಲಾಗಿದ್ದ ಲಾಕ್​ಡೌನ್​ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಸಂಪೂರ್ಣವಾಗಿ ಹಿಂಪಡೆದುಕೊಂಡಿದೆ.

West Bengal govt
West Bengal govt
author img

By

Published : Aug 13, 2020, 3:16 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹೇರಿಕೆ ಮಾಡಲಾಗಿದ್ದ ಸಂಪೂರ್ಣ ಲಾಕ್​​ಡೌನ್ ಇದೀಗ ಹಿಂಪಡೆದುಕೊಳ್ಳಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹತ್ವದ ಆದೇಶ ಹೊರಡಿಸದ್ದಾರೆ. ಅದರಂತೆ ರಾಜ್ಯದಲ್ಲಿ ಆಗಸ್ಟ್​​​ 28ರಿಂದ ಸಂಪೂರ್ಣ ಲಾಕ್​ಡೌನ್​ ಸಡಿಲಿಕೆ ಜಾರಿಗೊಳ್ಳಲಿದೆ.

ಈಗಾಗಲೇ ಆದೇಶ ಜಾರಿಗೊಳಿಸಿರುವ ಸರ್ಕಾರ, ಆಗಸ್ಟ್​ 20ರಿಂದಲೇ ಕರ್ಫ್ಯೂ ಹಿಂಪಡೆದುಕೊಳ್ಳುವುದಾಗಿ ತಿಳಿಸಿದೆ. ಲಾಕ್​ಡೌನ್​ ಹಿಂಪಡೆದುಕೊಳ್ಳುವಂತೆ ಅನೇಕ ಕಡೆಗಳಿಂದ ಮನವಿ ಬಂದಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಲಾಕ್​ಡೌನ್​ ದಿನಾಂಕ ತಿಂಗಳ ಆರು ದಿನಗಳವರೆಗೆ ಪರಿಷ್ಕರಿಸಲಾಗಿದ್ದು,ಆಗಸ್ಟ್ 20, 21, 27 ಮತ್ತು 31 ರಂದು ಮಾತ್ರ ರಾಜ್ಯವ್ಯಾಪಿ ಲಾಕ್​ಡೌನ್​ ಜಾರಿಯಲ್ಲಿರಲಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್​​ ಆದೇಶ ಹೊರಡಿಸಿ ಘೋಷಣೆ ಮಾಡಲಾಗಿತ್ತು. ಇದಾದ ಬಳಿಕ ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ,ಕಚೇರಿ, ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.