ETV Bharat / bharat

'ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಜಾಗತಿಕ ಸ್ವೀಕಾರ ದೊರಕಬೇಕು : ಪ್ರಧಾನಿ ಮೋದಿ - ನರೇಂದ್ರ ಮೋದಿ ನ್ಯಾಷನಲ್ ಮೆಟ್ರಾಲಜಿ ಕಾನ್ಕ್ಲೇವ್‌ನ ಉದ್ಘಾಟನಾ ಭಾಷಣ

ಈ ತಂತ್ರಜ್ಞಾನವು ಹೊಸ ಕೈಗಾರಿಕೆಗಳಿಗೆ ಸಹಾಯ ಮಾಡುತ್ತದೆ ಮತ್ತು ಸಂಶೋಧನೆ ಉತ್ತೇಜಿಸುತ್ತದೆ. ಇದು ದೇಶವನ್ನು ಮುಂದೆ ಕೊಂಡೊಯ್ಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ನಾವು ಭಾರತೀಯ ಉತ್ಪನ್ನಗಳೊಂದಿಗೆ ಜಗತ್ತನ್ನು ತುಂಬಲು ಬಯಸುವುದಿಲ್ಲ..

modi
modi
author img

By

Published : Jan 4, 2021, 12:03 PM IST

Updated : Jan 4, 2021, 12:37 PM IST

ನವದೆಹಲಿ : ಜಾಗತಿಕ ಬೇಡಿಕೆ ಮಾತ್ರವಲ್ಲದೆ 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳ ಜಾಗತಿಕ ಸ್ವೀಕಾರವೂ ಇದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಆಧಾರದ ಮೇಲೆ ನಾವು ಬ್ರಾಂಡ್ ಇಂಡಿಯಾವನ್ನು ಬಲಪಡಿಸಬೇಕು ಎಂದು ನ್ಯಾಷನಲ್ ಮೆಟ್ರಾಲಜಿ ಕಾನ್‌ಕ್ಲೇವ್‌ನ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೇಳಿದ್ದಾರೆ.

ಭಾರತೀಯ ವಿಜ್ಞಾನಿಗಳು ಎರಡು 'ಮೇಡ್ ಇನ್ ಇಂಡಿಯಾ' ಕೋವಿಡ್-19 ಲಸಿಕೆಗಳನ್ನು ತರಲು ಯಶಸ್ವಿಯಾಗಿದ್ದಾರೆ. ದೇಶವು ತನ್ನ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು. ಒಂದು ದೇಶವು ವಿಜ್ಞಾನದ ಮೇಲೆ ಹೆಚ್ಚು ಕೇಂದ್ರೀಕರಿಸಿದ್ರೆ, ಅದರ ತಂತ್ರಜ್ಞಾನವು ಹೆಚ್ಚು ಬಲಗೊಳ್ಳುತ್ತದೆ.

ಪ್ರಧಾನಿ ಮೋದಿ ಭಾಷಣ

ಈ ತಂತ್ರಜ್ಞಾನವು ಹೊಸ ಕೈಗಾರಿಕೆಗಳಿಗೆ ಸಹಾಯ ಮಾಡುತ್ತದೆ ಮತ್ತು ಸಂಶೋಧನೆ ಉತ್ತೇಜಿಸುತ್ತದೆ. ಇದು ದೇಶವನ್ನು ಮುಂದೆ ಕೊಂಡೊಯ್ಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ನಾವು ಭಾರತೀಯ ಉತ್ಪನ್ನಗಳೊಂದಿಗೆ ಜಗತ್ತನ್ನು ತುಂಬಲು ಬಯಸುವುದಿಲ್ಲ.

ಆದರೆ, ನಾವು ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯ ಉತ್ಪನ್ನಗಳ ಪ್ರತಿಯೊಬ್ಬ ಗ್ರಾಹಕರ ಹೃದಯವನ್ನು ಗೆಲ್ಲಬೇಕು ಎಂದು ಪಿಎಂ ಮೋದಿ ಹೇಳಿದರು. ಸಿಎಸ್‌ಐಆರ್‌ನ ವಿಜ್ಞಾನಿಗಳು ಇಡೀ ದೇಶದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮಾತುಕತೆ ನಡೆಸಬೇಕು ಮತ್ತು ಮುಂದಿನ ಪೀಳಿಗೆಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು ಎಂದು ಅವರು ತಿಳಿಸಿದರು.

Last Updated : Jan 4, 2021, 12:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.