ETV Bharat / bharat

ದ್ವಿಪಕ್ಷೀಯ ಪಾಲುದಾರರಿಗಿಂತ ನಮ್ಮ ಸಂಬಂಧ ದೊಡ್ಡದು: ಮೈಕ್ ಪೊಂಪೆ ಘೋಷಣೆ - undefined

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ, ಮತ್ತು ಭಾರತ ವಿದೇಶಾಂಗ ಸಚಿವ ಎಸ್.ಜಯಶಂಕರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಜಂಟಿ ಸುದ್ದಿಗೊಷ್ಟಿ
author img

By

Published : Jun 26, 2019, 3:48 PM IST

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ವಹಿವಾಟು ಸಂಬಂಧಿ ಭಿನ್ನಮತ, ಇರಾನ್ ಜೊತೆಗಿನ ಸಂಘರ್ಷದ ಮಧ್ಯೆ ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ ಮತ್ತು ಭಾರತ ವಿದೇಶಾಂಗ ಸಚಿವ ಎಸ್.ಜಯಶಂಕರ್ ಜಂಟಿ ಸುದ್ದಿಗೊಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಕ್​ ಪೊಂಪೆ, ಭಾರತ, ಅಮೆರಿಕಕ್ಕೆ ಪ್ರಮುಖ ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿದೆ. ನಾವು ಈ ಸಮಯದಲ್ಲಿ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ ಮತ್ತು ಅವುಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ನಾವು ಒಬ್ಬರನ್ನೊಬ್ಬರು ಕೇವಲ ದ್ವಿಪಕ್ಷೀಯ ಪಾಲುದಾರರಂತೆ ನೋಡುತ್ತಿಲ್ಲ. ಅದಕ್ಕಿಂತ ದೊಡ್ಡ ಮಟ್ಟದ ಸಂಬಂಧವಿದೆ. ಇದರಿಂದ ನಾವು ಇತರರಿಗೆ ಪರಸ್ಪರ ಸಹಾಯ ಮಾಡಬಹುದಾಗಿದೆ ಎಂದಿದ್ದಾರೆ.

  • US Secretary of State Mike Pompeo: US-India partnership is already beginning to reach new heights, we have bolstered our defence cooperation, we have solidified our common vision for free and open Indo-Pacific. We have grown cooperation in energy, space & other areas. pic.twitter.com/lFLbs14QQ1

    — ANI (@ANI) June 26, 2019 " class="align-text-top noRightClick twitterSection" data=" ">

ಅಲ್ಲದೆ, ಉಭಯ ದೇಶಗಳ ರಕ್ಷಣಾ ಸಹಕಾರ, ಬಾಹ್ಯಾಕಾಶ ಮತ್ತು ಇತರ ಕ್ಷೇತ್ರಗಳ ಪರಸ್ಪರ ಸಹಕಾರ ವೃದ್ಧಿಗೆ ಗಮನ ಹರಿಸಿದ್ದೇವೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ವಿದೇಶಾಂಗ ಸಚಿವ ಎಸ್.ಜಯಶಂಕರ್, ನಾವು ಹಲವು ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಕೆಲವು ಸಂಬಂಧಗಳು ಕೆಲವು ನಿರ್ಧಾರಗಳ ಮೇಲೆ ನಿಂತಿವೆ. ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಇತಿಹಾಸವಿದೆ. ನಮ್ಮ ದೇಶದ ಹಿತಾಸಕ್ತಿಗೆ ಅನುಗುಣವಾಗಿ ಅವುಗಳನ್ನ ಮುಂದುವರೆಸುತ್ತೇವೆ ಎಂದಿದ್ದಾರೆ.

  • External Affairs Minister S Jaishankar on 'US-Iran tensions': We discussed the situation in the Gulf, I shared our interests and concerns with Secretary Pompeo, energy security is part of it but there are other concerns as well about diaspora, regional security, & trade. pic.twitter.com/HJfJRulCD3

ಇನ್ನು ಗಲ್ಫ್ ರಾಷ್ಟ್ರಗಳ ವಿಚಾರದ ಕುರಿತೂ ಮಾತನಾಡಿದ್ದೇವೆ, ನಮ್ಮ ಆಸಕ್ತಿ ಮತ್ತು ಕಾಳಜಿಯನ್ನ ಪೊಂಪೆ ಅವರೊಂದಿಗೆ ಹಂಚಿಕೊಂಡಿದ್ದೇನೆ. ಇಂಧನ ಸುರಕ್ಷತೆ, ವಲಸೆ, ಪ್ರಾದೇಶಿಕ ಭದ್ರತೆ ಮತ್ತು ವ್ಯಾಪಾರದ ಕುರಿತೂ ಚರ್ಚಿಸಿದ್ದೇವೆ ಎಂದು ಮಾಹಿತಿ ನೀಡಿದರು

Intro:Body:

NAtional

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.