ಹೈದರಾಬಾದ್ (ತೆಲಂಗಾಣ): ಲಾಕ್ಡೌನ್ನಿಂದಾಗಿ ಹೈದರಾಬಾದ್‌ನ ಪ್ರಸಿದ್ಧ ಪ್ರವಾಸಿ ತಾಣ ಹುಸೇನ್ ಸಾಗರ್ನ ನೀರಿನ ಗುಣಮಟ್ಟ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್‌ಗೆ ಮೊದಲು ಮತ್ತು ಲಾಕ್ಡೌನ್ನ ನಂತರದ ಡೇಟಾದ ವಿಶ್ಲೇಷಣೆಯಿಂದ ಸರೋವರದ ನೀರಿನ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ.
ಒಟ್ಟು ಎಂಟು ಸ್ಥಳಗಳಲ್ಲಿ ಲಾಕ್‌ಡೌನ್ ಮೊದಲು ಮತ್ತು ನಂತರದ ನೀರಿನ ಗುಣಮಟ್ಟ ಸುಧಾರಿಸಿರುವುದು ಕಂಡು ಬಂದಿದೆ. ಸರೋವರದ ಸುತ್ತಮುತ್ತಲಿನ ದೋಣಿ ವಿಹಾರ, ಮನರಂಜನೆ, ತಿನಿಸುಗಳು ಮುಂತಾದ ಚಟುವಟಿಕೆಗಳನ್ನು ನಿರ್ಬಂಧಿಸಿರುವುದರಿಂದ ನೀರಿನ ಗುಣಮಟ್ಟದಲ್ಲಿ ಸುಧಾರಣೆಯಾಗಬಹುದು ಎಂದು ತೆಲಂಗಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಟಿಎಸ್‌ಪಿಸಿಬಿ) ಹೇಳಿದೆ.
ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರಗಳನ್ನು ವಿಭಜಿಸುವ ಸುಂದರವಾದ ಈ ಮಾನವ ನಿರ್ಮಿತ ಸರೋವರ ತೆಲಂಗಾಣ ರಾಜಧಾನಿಯ ಪ್ರಮುಖ ಮನರಂಜನಾ ತಾಣಗಳಲ್ಲಿ ಒಂದಾಗಿದೆ.