ನವದೆಹಲಿ: ದೆಹಲಿ-ಗುರುಗ್ರಾಮ್ ಗಡಿಯಲ್ಲಿ ಸಾವಿರಾರು ಜನರು ನೆರೆದಿದ್ದು, ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ನಿಯಮಗಳನ್ನು ಧಿಕ್ಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೊರೊನಾ ಪ್ರಕರಣಗಳು ಅಧಿಕವಾದ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಗುರುವಾರ ಗಡಿಯನ್ನು ಮುಚ್ಚುವಂತೆ ಆದೇಶ ಹೊರಡಿಸಿತ್ತು. ಮಾಹಿತಿ ತಿಳಿಯದೆ ಆಗಮಿಸಿದ ಜರು ಗಡಿ ದಾಟಲಾಗದೆ ಪರದಾಡುತ್ತಿದ್ದಾರೆ.
ಕಚೇರಿ, ಕಾರ್ಖಾನೆ ಸೇರಿದಂತೆ ದೆಹಲಿಯ ಹಲವೆಡೆ ತಮ್ಮ ಕೆಲಸಗಳಿಗೆ ಹೊಗಲು ಜನರು ಎಂದಿನಂತೆ ತೆರಳುತ್ತಿದ್ದಾಗ ಗಡಿಯಲ್ಲಿ ತಡೆದು ನಿಲ್ಲಿಸಲಾಗಿದೆ. ಹೀಗೆ ತಡೆದು ನಿಲ್ಲಿಸಿದವರ ಪೈಕಿ ನೂರಾರು ಜನರು ಸೈಕಲ್ನಲ್ಲಿ ಬಂದವರೇ ಆಗಿದ್ದಾರೆ. ಗಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.