ETV Bharat / bharat

AIMIM ವಾರಿಸ್ ಪಠಾಣ್ ವಿವಾದಾತ್ಮಕ ಹೇಳಿಕೆ.. ಬಿಜೆಪಿ ನಾಯಕರ ಜತೆಗಿನ ಫೋಟೋಗಳು ವೈರಲ್‌! - ವಾರಿಸ್ ಪಠಾಣ್ ವಿವಾದಾತ್ಮಕ ಹೇಳಿಕೆ

100 ಕೋಟಿ ಜನರ ಮೇಲೆ ಪ್ರಾಬಲ್ಯ ಮೆರೆಯಲು 15 ಕೋಟಿ ಮುಸ್ಲಿಮರು ಸಾಕು ಎಂದು ಹೇಳಿಕೆ ನೀಡಿದ್ದ ಎಐಎಂಐಎಂ ನಾಯಕ ವಾರಿಸ್ ಪಠಾಣ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

waris pathan controversial statement,ವಾರಿಸ್ ಪಠಾಣ್ ವಿವಾದಾತ್ಮ ಹೇಳಿಕೆ
ವಾರಿಸ್ ಪಠಾಣ್
author img

By

Published : Feb 21, 2020, 1:12 PM IST

Updated : Feb 21, 2020, 3:15 PM IST

ಹೈದರಾಬಾದ್: ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್(ಎಐಎಂಐಎಂ) ನಾಯಕ ವಾರಿಸ್ ಪಠಾಣ್ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಅವರನ್ನ ಬಂಧಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.

ಕಳೆದ ಶನಿವಾರ(ಫೆ.15) ಕಲಬುರಗಿಯಲ್ಲಿ ನಡೆದಿದ್ದ ಸಿಎಎ ವಿರುದ್ಧದ ಪ್ರತಿಭನೆ ವೇಳೆ ಮಾತನಾಡಿದ್ದ ವಾರಿಸ್ ಪಠಾಣ್, ಇತರೆ 100 ಕೋಟಿ ಜನರ ಮೇಲೆ ಪ್ರಾಬಲ್ಯ ಮೆರೆಯಲು 15 ಕೋಟಿ ಮುಸ್ಲಿಮರು ಸಾಕು ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

  • #WATCH AIMIM leader Waris Pathan: ...They tell us that we've kept our women in the front - only the lionesses have come out&you're already sweating. You can understand what would happen if all of us come together. 15 cr hain magar 100 ke upar bhaari hain, ye yaad rakh lena.(15.2) pic.twitter.com/KO8kqHm6Kg

    — ANI (@ANI) February 20, 2020 " class="align-text-top noRightClick twitterSection" data=" ">

ನವದೆಹಲಿಯ ಶಾಹೀನ್‌ಬಾಗ್‌ನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ಟೀಕಿಸುತ್ತಿರುವವರಿಗೆ ಉತ್ತರಿಸಿದ್ದ ಪಠಾಣ್, ನಾವು ಸ್ವಾತಂತ್ರ್ಯ ಪಡೆದುಕೊಳ್ಳಬೇಕು. ನಮಗೆ ಬೇಕಾಗಿರುವುದು ಸಿಗದಿದ್ದರೆ ಅದನ್ನು ಬಲವಂತವಾಗಿ ಪಡೆಯಬೇಕು ಎಂಬುದು ನೆನಪಿರಲಿ.

ನಾವು ನಮ್ಮ ತಾಯಿ ಮತ್ತು ಸಹೋದರಿಯರನ್ನು ಪ್ರತಿಭಟನೆಗೆ ಕಳಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮ ಸಿಂಹಿಣಿಗಳು ಮಾತ್ರ ಹೊರಬಂದಿದ್ದು, ಈಗಾಗಲೇ ನೀವು ಬೆವರಲು ಶುರುವಾಗಿದ್ದೀರಿ. ನಾವೆಲ್ಲರೂ ಜತೆಯಾಗಿ ಬಂದರೆ ಏನಾಗಬಹುದು ಎಂದು ಊಹಿಸಿ. ನಾವು 15 ಕೋಟಿ ಇರಬಹುದು. ಆದರೆ, 100 ಕೋಟಿ ಜನರ ಮೇಲೆ ಪ್ರಾಬಲ್ಯ ಮೆರೆಯಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದಿದ್ದರು.

  • Tejashwi Yadav,RJD on AIMIM's Waris Pathan: The statement is condemnable, he should be arrested. AIMIM is working like B-team of BJP. Similarly, leaders like Anurag Thakur & Parvesh Varma should also be arrested. Action must be taken against anyone who makes provocative remarks pic.twitter.com/eTdgIUCWbD

    — ANI (@ANI) February 21, 2020 " class="align-text-top noRightClick twitterSection" data=" ">

ಪಠಾಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಪಠಾಣ್ ವಾರಿಸ್​ನನ್ನ ಬಂಧಿಸಬೇಕು ಎಂದಿದ್ದಾರೆ. ಎಐಎಂಐಎಂ ಬಿಜೆಪಿಯ ಬಿ ಟೀಂನಂತೆ ವರ್ತಿಸುತ್ತದೆ. ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮೊದಲಾದವರನ್ನೂ ಬಂಧಿಸಬೇಕು. ಯಾರೇ ಆಗಲಿ ಪ್ರಚೋದನಾಕಾರಿ ಹೇಳಿಕೆ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

  • Hiding behind Children and Women, LEGENDS are seeking "Azadi" 😂😂😂.

    What more Azadi do they want? Aren't they enjoying every kind of Azadi since 1947?

    Waris Pathan and other leaders of AIMIM should come out of their Aurangzeb's World.

    These threats don't work in #NewIndia

    — BJP Karnataka (@BJP4Karnataka) February 20, 2020 " class="align-text-top noRightClick twitterSection" data=" ">

ಪಠಾಣ್ ಅವರ ಹೇಳಿಕೆಗೆ ಟ್ವಿಟರ್​ ಮೂಲಕ ತಿರುಗೇಟು ನೀಡಿರುವ ಕರ್ನಾಟಕ ಬಿಜೆಪಿ, ಮಹಿಳೆ ಮತ್ತು ಮಕ್ಕಳ ಹಿಂದೆ ಅಡಗಿ ಕುಳಿತಿರುವ ಮಹಾನುಭಾವರು ಆಜಾದಿ ಕೇಳುತ್ತಿದ್ದಾರೆ. ಇದಕ್ಕಿಂತ ಹೆಚ್ಚು ಯಾವ ಆಜಾದಿ ಬೇಕು. 1947ರಿಂದ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಅವರು ಅನುಭವಿಸುತ್ತಿಲ್ಲವೇ? ವಾರಿಸ್ ಪಠಾಣ್ ಮತ್ತು ಎಐಎಂಐಎಂನ ಇತರ ನಾಯಕರು ಔರಂಗಜೇಬ್‌ನ ಪ್ರಪಂಚದಿಂದ ಹೊರಬರಬೇಕು. ಈ ರೀತಿಯ ಬೆದರಿಕೆಗಳು ಹೊಸ ಭಾರತದಲ್ಲಿ ನಡೆಯುವುದಿಲ್ಲ ಎಂದಿದೆ.

ಪಠಾಣ್ ಅವರ ಈ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಅವರು ಬಿಜೆಪಿಯ ಹಲವು ಪ್ರಮುಖ ನಾಯಕರ ಜೊತೆ ಗುರ್ತಿಸಿಕೊಂಡಿರುವ ಫೊಟೋಗಳು ವೈರಲ್​ ಆಗಿವೆ. ಮರಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಪತ್ರಕರ್ತ ಅರ್ನಬ್ ಗೋಸ್ವಾಮಿ , ಕೇಂದ್ರ ಸಚಿವ ಪಿಯೂಷ್ ಗೋಯಲ್​ ಜೊತೆ ಇರುವ ಫೊಟೋಗಳು ಸದ್ದು ಮಾಡುತ್ತಿವೆ.

ಮುಂಬೈನ ಬೈಕುಲ್ಲಾ ಕ್ಷೇತ್ರದ ಶಾಸಕನಾಗಿರುವ ವಾರಿಸ್ ಪಠಾಣ್, ವಕೀಲನಾಗಿದ್ದು, 1993ರ ಮುಂಬೈ ಬಾಂಬ್​ ಸ್ಫೋಟ ಪ್ರಕರಣದ ಓರ್ವ ಆರೋಪಿ ಮತ್ತು ಹಿಟ್​ ಅಂಡ್​ ರನ್​ ಪ್ರಕರಣದಲ್ಲಿ ಸಲ್ಮಾನ್ ಖಾನ್ ಪರ ವಕಾಲತ್ತು ವಹಿಸಿದ್ದರು.

Last Updated : Feb 21, 2020, 3:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.