ETV Bharat / bharat

ಕುಡುಕರಿಗೆ ಜಗನ್​ ಗಿಫ್ಟ್​... ​ಆಂಧ್ರ ಸರ್ಕಾರವೇ ಸ್ಥಾಪಿಸಲಿದೆ ನೂರಾರು ಮದ್ಯದ ಮಾಲ್​ಗಳು! - apsbcl

'ವಾಕ್​ ಇನ್​ ಶಾಪ್ಸ್​' ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಮದ್ಯದ ಮಾಲ್​ಗಳನ್ನು ಸ್ಥಾಪಿಸಲು ಆಂದ್ರ ಪ್ರದೇಶ ಸರ್ಕಾರ ಯೋಜನೆ ರೂಪಿಸಿದೆ.

Walk in Shops
ವಾಕ್​ ಇನ್​ ಶಾಪ್ಸ್
author img

By

Published : Sep 26, 2020, 6:55 PM IST

ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ರಾಜ್ಯಾದ್ಯಂತ ಸರ್ಕಾರವೇ ಮುಂದೆ ನಿಂತು ಮದ್ಯದಂಗಡಿಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ 'ವಾಕ್​ ಇನ್​ ಶಾಪ್ಸ್​' ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಮದ್ಯದ ಮಾಲ್​ಗಳನ್ನು ಸ್ಥಾಪಿಸಲು ಜಗನ್​ ಸರ್ಕಾರ ಯೋಜನೆ ರೂಪಿಸಿದೆ.

ಉನ್ನತ ಮಟ್ಟದ ಮದ್ಯದಂಗಡಿಗಳು ಇವಾಗಿದ್ದು, ಇಂತಹ 50 ರಿಂದ 100 ಮಾಲ್‌ಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗುವುದು ಎಂದು ವರದಿಯಾಗಿದೆ. ರಾಜ್ಯದ ಪ್ರಮುಖ ನಗರಗಳು, ಜಿಲ್ಲಾ ಕೇಂದ್ರಗಳು ಮತ್ತು ಪ್ರಮುಖ ಪಟ್ಟಣಗಳಲ್ಲಿ ಇಂತಹ ಮಾಲ್​ಗಳನ್ನು ಸ್ಥಾಪಿಸಲಾಗುತ್ತಿದೆ.

ಇವುಗಳನ್ನು ಆಂಧ್ರಪ್ರದೇಶ ರಾಜ್ಯ ಪಾನೀಯಗಳ ನಿಗಮ ಲಿಮಿಟೆಡ್ (APSBCL) ನಿರ್ವಹಿಸುತ್ತದೆ. ಅದನ್ನು ಸಕ್ರಿಯವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ 2020-21ನೇ ಸಾಲಿನಲ್ಲಿ ಹೊಸ ಮದ್ಯ ನೀತಿಯನ್ನು ಕೂಡಾ ಘೋಷಿಸಿದೆ. ಕಂದಾಯ ಇಲಾಖೆಯ ವಿಶೇಷ ಪ್ರಧಾನ ಕಾರ್ಯದರ್ಶಿ ರಜತ್ ಭಾರ್ಗವ, ಕಳೆದ ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ. ಈ ವರ್ಷದ ಅಕ್ಟೋಬರ್ 1 ರಿಂದ 2021 ರ ಸೆಪ್ಟೆಂಬರ್ 30 ರವರೆಗೆ ಈ ನೀತಿ ಜಾರಿಯಲ್ಲಿರುತ್ತದೆ.

ಪ್ರಸ್ತುತ ಸರ್ಕಾರವು ನಡೆಸುತ್ತಿರುವ ಮದ್ಯದಂಗಡಿಗಳಲ್ಲಿ ಕೆಲವು ರೀತಿಯ ಬ್ರಾಂಡಿಗಳಿವೆ. ಹೊಸದಾಗಿ ಸ್ಥಾಪಿಸಲಾಗುತ್ತಿರುವ ‘ವಾಕ್ ಇನ್ ಶಾಪ್ಸ್’ನಲ್ಲಿ ಎಲ್ಲಾ ಬ್ರಾಂಡ್‌ಗಳ ಮದ್ಯಗಳನ್ನು ಇರಿಸಲು ಎಪಿಎಸ್‌ಬಿಸಿಎಲ್ ಯೋಜನೆ ರೂಪಿಸಿದೆ. ರಾಜ್ಯದ ಒಟ್ಟು ಮದ್ಯದಂಗಡಿಗಳ ಸಂಖ್ಯೆ 2,934 ಮೀರಬಾರದು. ಹೀಗಾಗಿ ಈ ವಾಕ್ ಇನ್ ಶಾಪ್ಸ್ ಇರುವ ಸ್ಥಳದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮದ್ಯದಂಗಡಿಗಳನ್ನು ತೆಗೆದುಹಾಕಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.