ಮುಂಬೈ: ಟೆಲಿಕಾಂ ಇಂಡಸ್ಟ್ರಿ ಸಮರದಲ್ಲಿ ನಾ ಮುಂದು ತಾ ಮುಂದು ಎಂದು ಆಫರ್ ಮೇಲೆ ಆಫರ್ ನೀಡಲು ಮುಂದಾಗಿ ಕೈಸುಟ್ಟುಕೊಂಡಿರುವ ಕೆಲ ಕಂಪನಿ ಇದೀಗ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿವೆ ಎಂದು ತಿಳಿದು ಬಂದಿದೆ.
ರಿಲಯನ್ಸ್ ಜಿಯೋ ಜತೆ ಪೈಪೋಟಿ ನೀಡಲು ಮುಂದಾಗಿ ಜನರಿಗೆ ಆಕರ್ಷಕ ಪ್ಲಾನ್ ನೀಡಿದ್ದ ಟೆಲಿಕಾಂ ಕಂಪನಿಗಳಾದ ವೋಡಾಫೋನ್, ಐಡಿಯಾ ಹಾಗೂ ಏರ್ಟೆಲ್ ಇದೀಗ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಪ್ಲಾನ್ ರೂಪಿಸಿಕೊಂಡಿದ್ದು, ಡಿಸೆಂಬರ್ 1ರಿಂದಲೇ ಹೊಸ ಪ್ಲಾನ್ ಜಾರಿಗೊಳಿಸಲು ನಿರ್ಧರಿಸಿವೆ.
74,000 ರೂ ಕೋಟಿ ನಷ್ಟ ಅನುಭವಿಸಿರುವ ಈ ಕಂಪನಿ ಇದೀಗ ತಮ್ಮ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರಕ್ಕೆ ಮುಂದಾಗಿದ್ದು, ಫೋನ್ ಕರೆ ಹಾಗೂ ಡೇಟಾದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುವ ಯೋಜನೆ ರೂಪಿಸಿಕೊಂಡಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಂಪನಿಗಳು ತಮ್ಮ ಗ್ರಾಹಕರಿಗೆ ಉನ್ನತ ಮಟ್ಟದ ಹಾಗೂ ಡಿಜಿಟಲ್ ಪ್ಲಾನ್ ನೀಡುವ ಉದ್ದೇಶದಿಂದ ತನ್ನ ಸೇವಾ ದರ ಹೆಚ್ಚಿಸಲು ನಿರ್ಧರಿಸಿವೆ ಎಂದು ಸಮರ್ಥನೆ ನೀಡಿವೆ. ಆದರೆ ಗ್ರಾಹಕರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕಲು ಪ್ಪಾನ್ ಹಾಕಿಕೊಂಡಿರುವ ಈ ಕಂಪನಿಗಳು ಎಷ್ಟು ಹೆಚ್ಚುವರಿ ಹಣ ಹೇರಲಿವೆ ಎಂಬುದರ ಬಗ್ಗೆ ತಿಳಿಸಿಲ್ಲ.