ETV Bharat / bharat

ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ: 8 ಮಂದಿಗೆ ಜಾಮೀನು ಮಂಜೂರು - ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣದ 8 ಮಂದಿಗೆ ಜಾಮೀನು ಮಂಜೂರು

ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್​ಜಿ ಪಾಲಿಮರ್ಸ್ ಸಿಇಒ ಸುಂಕೆ ಜೆಯಾಂಗ್, ನಿರ್ದೇಶಕ ಡಿಎಸ್ ಕಿಮ್, ಕಾರ್ಯಾಚರಣೆಯ ಹೆಚ್ಚುವರಿ ನಿರ್ದೇಶಕ ಪಿಪಿ ಮೋಹನ್ ರಾವ್ ಸೇರಿದಂತೆ ಇತರ 8 ಜನ ಆರೋಪಿಗಳಿಗೆ ಜಾಮೀನು ನೀಡಲಾಗಿದೆ.

ಅನಿಲ ದುರಂತ
ಅನಿಲ ದುರಂತ
author img

By

Published : Aug 5, 2020, 10:48 AM IST

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಿಂದ ಎಲ್​ಜಿ ಪಾಲಿಮರ್ಸ್ ಅನಿಲ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರಿಗೆ ಆಂಧ್ರಪ್ರದೇಶ ಹೈಕೋರ್ಟ್ ನಿನ್ನೆ ಜಾಮೀನು ಮಂಜೂರು ಮಾಡಿದೆ.

ಎಲ್​ಜಿ ಪಾಲಿಮರ್ಸ್ ಸಿಇಒ ಸುಂಕೆ ಜೆಯಾಂಗ್, ನಿರ್ದೇಶಕ ಡಿಎಸ್ ಕಿಮ್, ಕಾರ್ಯಾಚರಣೆ ಹೆಚ್ಚುವರಿ ನಿರ್ದೇಶಕ ಪಿಪಿ ಮೋಹನ್ ರಾವ್ ಸೇರಿದಂತೆ ಇತರ 8 ಜನ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಮೇ 7 ರಂದು ನಡೆದ ಅನಿಲ ಸೋರಿಕೆ ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದರು. ಈ ಕುರಿತು ಕಳೆದ ತಿಂಗಳ ಆರಂಭದಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಹೈ - ಪವರ್ ಸಮಿತಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಿಗೆ ತಮ್ಮ ವರದಿಯನ್ನು ಸಲ್ಲಿಸಿತ್ತು. ಈ ವರದಿ ಆಧರಿಸಿ ಪೊಲೀಸರು ಕಂಪನಿ ಸಿಇಒ ಮತ್ತು ಎಲ್​​​​​ಜಿ ಪಾಲಿಮರ್ಸ್‌ನ 2 ನಿರ್ದೇಶಕರು ಸೇರಿದಂತೆ 12 ಸದಸ್ಯರನ್ನು ಬಂಧಿಸಿದ್ದರು. ಇದೀಗ 8 ಜನರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.