ETV Bharat / bharat

ಕೊರೊನಾ ಕರಿ ನೆರಳು: ಆರ್ಥಿಕ ಸಂಕಷ್ಟದಲ್ಲಿ ಮೃಗಾಲಯಗಳು - ಕೊರೊನಾ ಎಫೆಕ್ಟ್​

ಕೊರೊನಾದಿಂದ ಮೃಗಾಲಯಗಳು ನಷ್ಟ ಅನುಭವಿಸುತ್ತಿದ್ದು, ಅಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಲು ಮೃಗಾಲಯದ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ.

Virus drives Peru's zoos to breaking point as feed runs out
ಆರ್ಥಿಕ ಅಂಕಷ್ಟದಲ್ಲಿ ಮೃಗಾಯಲಗಳು
author img

By

Published : Apr 24, 2020, 7:17 PM IST

Updated : Apr 24, 2020, 9:31 PM IST

ಲಿಮಾ(ಬ್ರೆಜಿಲ್​) : ಕೊರೊನಾದಿಂದ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯಗಳು ಜನ ಬಾರದೇ ನಷ್ಟ ಅನುಭವಿಸುತ್ತಿದ್ದು, ಅಲ್ಲಿರುವ ಮೂಕ ಪ್ರಾಣಿಗಳಿಗೆ ಆಹಾರ ಒದಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಗ್ರಹಾಲಯದ ಮಾಲೀಕರು ದಾನಿಗಳ ಮೊರೆ ಹೋಗಿದ್ದಾರೆ.

ಆರ್ಥಿಕ ಅಂಕಷ್ಟದಲ್ಲಿ ಮೃಗಾಯಲಗಳು

ಲಾಕ್​ಡೌನ್​ನಿಂದ ಮೃಗಾಲಯಗಳಿಗೆ ಜನರು ಬರದ ಕಾರಣ ನಮಗೆ ಸಾಕಷ್ಟು ಆರ್ಥಿಕ ನಷ್ಟವಾಗಿದೆ. ಇಲ್ಲಿಯವರೆಗೆ ನಮ್ಮಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುತ್ತಿದ್ದು, ಮುಂದಿನ ಎರಡು ವಾರಗಳ ಕಾಲ ಆಹಾರ ಒದಗಿಸಲು ಯಾವುದೇ ಸಮಸ್ಯೆಯಿಲ್ಲ. ಆದರೆ, ಮುಂದಿನ ದಿನಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ತುಂಬಾನೇ ಕಷ್ಟಕರವಾಗಿದೆ. ಹಾಗಾಗಿ ದಾನಿಗಳಿಂದ ನೆರವು ಪಡೆಯಲು ಯೋಚಿಸಲಾಗಿದೆ ಎಂದು ಅಮೆಜಾನ್​ ಮೃಗಾಲಯದ ವ್ಯವಸ್ಥಾಪಕರು ತಿಳಿಸಿದರು.

ನಮ್ಮ ಮೃಗಾಲಯದಲ್ಲಿ ಸುಮಾರು 4,000 ಪ್ರಾಣಿಗಳಿಗಳಿದ್ದು, ಕೆಲವು ಅನಾರೋಗ್ಯದಿಂದ ಬಳಲುತ್ತಿವೆ. ಪ್ರತಿವರ್ಷ ಪೊಲೀಸರು ಕಳ್ಳಸಾಗಣಿಕೆಯಿಂದ ರಕ್ಷಿಸಲ್ಪಟ್ಟ ಪ್ರಾಣಿಗಳಿಗೂ ನಾವು ರಕ್ಷಣೆ ನೀಡುತ್ತಿದ್ದೇವೆ ಎಂದರು.

ಪ್ರಾಣಿ ಸಂಗ್ರಹಾಲಯಗಳ ನಿರ್ವಾಹಕರು, ಮೇಲಿನ ಅಧಿಕಾರಿಗಳಿಗೆ ಸಮಸ್ಯೆ ಕುರಿತಂತೆ ಸಾಕಷ್ಟು ಬಾರಿ ಪತ್ರ ಬರೆದಿದ್ದಾರೆ. ಆದರೆ, ಯಾವೊಬ್ಬ ಅಧಿಕಾರಿಯೂ ನಮ್ಮ ಮನವಿಗೆ ಸ್ಪಂದನೆ ನೀಡುತ್ತಿಲ್ಲ ಎಂದು ತಮ್ಮ ನೋವು ಹೊರ ಹಾಕಿದರು.

Last Updated : Apr 24, 2020, 9:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.