ETV Bharat / bharat

ವಿಶ್ವ ಕ್ರಿಕೆಟ್​​ ಮೇಲೆ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಾಬಲ್ಯ: ಅನಿಲ್​ ಕುಂಬ್ಳೆ

ಕೊಹ್ಲಿ ಜತೆಗಿನ ವೈಮನಸ್ಸಿನಿಂದಲೇ ಕೋಚ್​ ಹುದ್ದೆಗೆ ರಾಜೀನಾಮೆ ನೀಡಿದ್ದ ಅನಿಲ್​ ಕುಂಬ್ಳೆ ಇದೀಗ ವಿರಾಟ್​​ ಕೊಹ್ಲಿ ನೇತೃತ್ವದ ತಂಡವನ್ನ ಹಾಡಿಹೊಗಳಿದ್ದಾರೆ.

ಅನಿಲ್​ ಕುಂಬ್ಳೆ
author img

By

Published : Oct 26, 2019, 5:17 PM IST

ನವದೆಹಲಿ: ಐಸಿಸಿ ಟೆಸ್ಟ್​ ಚಾಂಪಿಯನ್​​ ಟೂರ್ನಿ ಆರಂಭಗೊಂಡ ಬಳಿಕ ಟೀಂ ಇಂಡಿಯಾ ಆಡಿರುವ ಐದು ಟೆಸ್ಟ್​​ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ಈಗಾಗಲೇ 240 ಅಂಕಗಳೊಂದಿಗೆ ಟಾಪ್​​ ಒನ್​ ಸ್ಥಾನದಲ್ಲಿದೆ.

ಈಗಾಗಲೇ ಎಲ್ಲ ಟಾಪ್​ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಿರುವ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವದ ಮೇಲೆ ಪ್ರಾಬಲ್ಯ ಸಾಧಿಸಲಿದೆ ಎಂದಿದ್ದಾರೆ. ಈ ಹಿಂದೆ ಮೂರು ವರ್ಷಗಳ ಹಿಂದೆ ನಾನು ಟೀಂ ಇಂಡಿಯಾ ಕೋಚ್​ ಆಗಿದ್ದ ವೇಳೆ ಸಹ ಈ ಮಾತನ್ನ ನಾನು ಹೇಳಿದ್ದೆ. ಸದ್ಯದ ತಂಡ ವಿಶ್ವ ಕ್ರಿಕೆಟ್​​ನಲ್ಲಿ ಪ್ರಾಬಲ್ಯ ಸಾಧಿಸುವ ಎಲ್ಲ ರೀತಿಯ ಕೌಶಲ್ಯ ಹೊಂದಿದ್ದು, ಈಗಾಗಲೇ ಅದು ಸಾಬೀತುಗೊಂಡಿದೆ ಎಂದಿದ್ದಾರೆ.

ಇದು ಕೇವಲ ಮೈದಾನಕ್ಕಿಳಿಯುವ 11 ಪ್ಲೇಯರ್​ಗಳಲ್ಲಿ ಮಾತ್ರವಲ್ಲ. ಹೊರಗಡೆ ಕುಳಿತುಕೊಳ್ಳುವ ಬೆಂಚ್ ಪ್ಲೇಯರ್ಸ್​​ಗಳಲ್ಲೂ ಈ ಪವರ್​ ಇದೆ ಎಂದಿದ್ದಾರೆ. ಈಗಾಗಲೇ ವಿದೇಶಿ ಪ್ರವಾಸದಲ್ಲಿದ್ದ ವೇಳೆ ಸಹ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುತ್ತಿದ್ದು, ಮುಂದಿನ ದಿನಗಳಲ್ಲೂ ಈ ರೀತಿಯ ಪ್ರದರ್ಶನ ಮೂಡಿ ಬರಲಿದೆ ಎಂದಿದ್ದಾರೆ.

ಈ ಹಿಂದೆ 2016ರಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದ ಅನಿಲ್​ ಕುಂಬ್ಳೆ 2017ರಲ್ಲಿ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್​ ಟ್ರೋಫಿ ನಂತರ ಕೊಹ್ಲಿ ಜತೆಗಿನ ವೈಮನಸ್ಸಿನಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆಲ್​ ಪಂಜಾಬ್​ ತಂಡದ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದಾರೆ.

Intro:Body:

ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವ ಕ್ರಿಕೆಟ್​​ ಮೇಲೆ ಪ್ರಾಬಲ್ಯ: ಅನಿಲ್​ ಕುಂಬ್ಳೆ 

ನವದೆಹಲಿ: ಐಸಿಸಿ ಟೆಸ್ಟ್​ ಚಾಂಪಿಯನ್​​ ಟೂರ್ನಿ ಆರಂಭಗೊಂಡ ಬಳಿಕ ಟೀಂ ಇಂಡಿಯಾ ಆಡಿರುವ ಐದು ಟೆಸ್ಟ್​​ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ಈಗಾಗಲೇ 240 ಅಂಕಗಳೊಂದಿಗೆ ಟಾಪ್​​ ಒನ್​ ಸ್ಥಾನದಲ್ಲಿದೆ. 

ಈಗಾಗಲೇ ಎಲ್ಲ ಟಾಪ್​ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಿರುವ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವದ ಮೇಲೆ ಪ್ರಾಬಲ್ಯ ಸಾಧಿಸಲಿದೆ ಎಂದಿದ್ದಾರೆ. ಈ ಹಿಂದೆ  ಮೂರು ವರ್ಷಗಳ ಹಿಂದೆ ನಾನು ಟೀಂ ಇಂಡಿಯಾ ಕೋಚ್​ ಆಗಿದ್ದ ವೇಳೆ ಸಹ ಈ ಮಾತನ್ನ ನಾನು ಹೇಳಿದ್ದೆ. ಸದ್ಯದ ತಂಡ ವಿಶ್ವ ಕ್ರಿಕೆಟ್​​ನಲ್ಲಿ ಪ್ರಾಬಲ್ಯ ಸಾಧಿಸುವ ಎಲ್ಲ ರೀತಿಯ ಕೌಶಲ್ಯ ಹೊಂದಿದ್ದು, ಈಗಾಗಲೇ ಅದು ಸಾಭೀತುಗೊಂಡಿದೆ ಎಂದಿದ್ದಾರೆ. 

ಇದು ಕೇವಲ ಮೈದಾನಕ್ಕಿಳಿಯುವ 11 ಪ್ಲೇಯರ್​ಗಳಲ್ಲಿ ಮಾತ್ರವಲ್ಲ. ಹೊರಗಡೆ ಕುಳಿತುಕೊಳ್ಳುವ ಬೆಂಚ್ ಪ್ಲೇಯರ್ಸ್​​ಗಳಲ್ಲೂ ಈ ಪವರ್​ ಇದೆ ಎಂದಿದ್ದಾರೆ. ಈಗಾಗಲೇ ವಿದೇಶಿ ಪ್ರವಾಸದಲ್ಲಿದ್ದ ವೇಳೆ ಸಹ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುತ್ತಿದ್ದು, ಮುಂದಿನ ದಿನಗಳಲ್ಲೂ ಈ ರೀತಿಯ ಪ್ರದರ್ಶನ ಮೂಡಿ ಬರಲಿದೆ ಎಂದಿದ್ದಾರೆ. 

ಈ ಹಿಂದೆ 2016ರಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದ ಅನಿಲ್​ ಕುಂಬ್ಳೆ 2017ರಲ್ಲಿ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್​ ಟ್ರೋಫಿ ನಂತರ ಕೊಹ್ಲಿ ಜತೆಗಿನ ವೈಮನಸ್ಸಿನಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆಲ್​ ಪಂಜಾಬ್​ ತಂಡದ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.