ನವದೆಹಲಿ: ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯನ್ನು ಇನ್ನು ಎರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಂಡಿದೆ. ಜಯದ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ "ಅದನ್ನು ನಾವು ಹೇಗೆ ಮಾಡಿದ್ದೇವೆ" ("That is how we do it.") ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
"That's how we do it! #NZvIND," ಪಂದ್ಯದ ನಂತರ ಹೀಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಸಂಭ್ರಮ ಹಂಚಿಕೊಂಡಿರುವ ಕೊಹ್ಲಿ,
-
That's how we do it! 💪🏼💪🏼💪🏼 #NZvIND pic.twitter.com/Ej97E0ciLJ
— Virat Kohli (@imVkohli) January 29, 2020 " class="align-text-top noRightClick twitterSection" data="
">That's how we do it! 💪🏼💪🏼💪🏼 #NZvIND pic.twitter.com/Ej97E0ciLJ
— Virat Kohli (@imVkohli) January 29, 2020That's how we do it! 💪🏼💪🏼💪🏼 #NZvIND pic.twitter.com/Ej97E0ciLJ
— Virat Kohli (@imVkohli) January 29, 2020
ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಉಭಯ ತಂಡಗಳು, ನಿಗದಿತ 20 ಓವರ್ಗಳಲ್ಲಿ 179 ರನ್ ಗಳಿಸಿದ್ದರಿಂದ ಹಾಗಾಗಿ ಸೂಪರ್ ಓವರ್ ನೀಡಲಾಯಿತು. ಅಂತಿಮವಾಗಿ ಸೂಪರ್ ಓವರ್ನ ಕೊನೆಯ ಎಸೆತವನ್ನು ರೋಹಿತ್ ಶರ್ಮಾ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕಿವೀಸ್ ಪಡೆ, ಜಸ್ಪ್ರಿತ್ ಬುಮ್ರಾ ದಾಳಿಯನ್ನು ಸಮರ್ಥವಾಗಿ ಎದುರಿಸಿ 17 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಭಾರತದ ಕೆ.ಎಲ್. ರಾಹುಲ್ ಹಾಗೂ ಹಿಟ್ಮ್ಯಾನ್ ಶರ್ಮಾ ಅಬ್ಬರದಿಂದಾಗಿ ಗೆದ್ದು ಬೀಗಿತು.
ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 3-0 ಅಂತರದಿಂದ ಮುನ್ನಡೆ ಸಾಧಿಸಿತು. ಉಭಯ ತಂಡಗಳ ನಡುವಿನ ನಾಲ್ಕನೇ ಟಿ-20 ಪಂದ್ಯ ಜನವರಿ 31 ರಂದು ನಡೆಯಲಿದೆ.
ನಂತರ ಮಾತನಾಡಿದ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್, "ನಾವು ನಿಗದಿತ ಓವರ್ನ ಒಳಗೆ ಗುರಿ ತಲುಪುವ ಅವಕಾಶವಿತ್ತು. ಸೂಪರ್ ಓವರ್ ವರೆಗೂ ಪಂದ್ಯ ತಂದು ನಿಲ್ಲಿಸಿದ್ದು ನಮಗೆ ಹಿನ್ನಡೆಯಾಯಿತು. ಜೊತೆಗೆ ಭಾರತ ಇಲ್ಲಿ ತಮ್ಮ ಅನುಭವದ ಆಟವನ್ನು ಪ್ರದರ್ಶಿಸಿಸಿತು" ಎಂದರು.
ಮುಂದುವರೆದು ಮಾತನಾಡಿದ ವಿಲಿಯಮ್ಸನ್ "ಇದು ನಮ್ಮ ಮುಂಬರುವ ಪಂದ್ಯಗಳಿಗೆ ಪಾಠವಾಗಲಿದೆ, ಭಾರತ ತಂಡದ ಉತ್ತಮ ಆರಂಭದ ಹೊರತಾಗಿಯೂ ನಮ್ಮ ಬೌಲರ್ಗಳು ಅಂತಿಮವಾಗಿ ಮೇಲುಗೈ ಸಾಧಿಸಿದರು. ಇಂದಿನ ಈ ಸ್ಕೋರ್ ಬೋರ್ಡ್ ಕ್ರಿಕೆಟ್ ಅನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ದಿದೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಸೋತಿರುವುದು ನಿರಾಸೆಯಾಗಿದೆ" ಎಂದು ಅವರು ಬೇಸರ ಹೊರಹಾಕಿದರು.