ನವದೆಹಲಿ: 12ನೇ ಆವೃತ್ತಿ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ರನ್‌ಗಳ ಬರ ಎದುರಿಸಿದ್ದರು. ಇಷ್ಟಿದ್ದರೂ ಹತಾಶರಾಗದೆ ಯಾವುದೇ ಐಡಿಯಾ ಕೊಟ್ಟರೂ ಮುಕ್ತ ಮನಸ್ಸಿನಿಂದ ಕೇಳುತ್ತಿದ್ದರು. ತಮ್ಮ ಆಟವನ್ನ ಸುಧಾರಿಸಿಕೊಳ್ಳಲು ಮುಂದಾಗುತ್ತಿದ್ದರು. ಹಾಗಾಗಿ ವಿರಾಟ್ ಕೊಹ್ಲಿ ನನ್ನ ಪ್ರಕಾರ ನಿಜಕ್ಕೂ ಒಳ್ಳೆಯ ಕ್ಯಾಪ್ಟನ್ ಅಂತಾ ಆರ್‌ಸಿಬಿ ಕೋಚ್ ಡೆನಿಯಲ್ ವೆಟ್ಟೋರಿ ಬಣ್ಣಿಸಿದ್ದಾರೆ.
ಕೋಚ್ ನಿರ್ಧಾರ, ಸಲಹೆಗಳ ಪರ ಬಲವಾಗಿ ನಿಲ್ಲುವ ಕೊಹ್ಲಿ :
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಪ್ಲೇಯರಾಗಿ, ಕೋಚ್ ಆಗಿ ಆರು ಸೀಸನ್‌ಗಳಲ್ಲಿ ಕೊಹ್ಲಿಯನ್ನ ತುಂಬಾ ಹತ್ತಿರದಿಂದ ನೋಡ್ತಿದ್ದಾರೆ ಡೆನಿಯಲ್ ವೆಟ್ಟೋರಿ. ಹಾಗಾಗಿ ದಿಲ್ಲಿವಾಲಾಗೆ ಆಟ ಬಗೆಗಿನ ಕಮಿಂಟ್‌ಮೆಂಟ್‌ನ ಕೊಂಡಾಡಿದ್ದಾರೆ. 'ನಾನಾಗಲಿ ಇಲ್ಲ ಬೇರೆ ಯಾವುದೇ ತರಬೇತುದಾರರು ಸಲಹೆಗಳನ್ನ ನೀಡ್ತಾಯಿದ್ರೇ ಅವುಗಳನ್ನ ಕೇಳಿಸಿಕೊಳ್ತಾರೆ. ಏನೇ ಮಾತುಕತೆಯನ್ನ ವಿರಾಟ್ ಕೊಹ್ಲಿ ಜತೆಗೆ ನಡೆಸಿದ್ರೂ ಯಾವುದು ಉತ್ತಮವೋ ಆ ಬಗ್ಗೆ ಯೋಚಿಸ್ತಾರೆ. ಸಲಹೆಗಳು ಹೇಗೆ ವರ್ಕ್ ಆಗುತ್ತೆ ಅನ್ನೋದರ ಕುರಿತಂತೆ ಚಿಂತಿಸುತ್ತಾರೆ. ವಿರಾಟ್ ಜತೆಗೆ ಮಾತುಕತೆ ನಡೆಸುವಾಗ ಬರೀ ನಂಬರ್‌ಗಳ ಲೆಕ್ಕವೇ ಇರಲ್ಲ. ಅಂತಃಪ್ರಜ್ಞೆ ಮತ್ತು ಆಟದ ಕುರಿತಂತೆ ಅರ್ಥ ಮಾಡಿಕೊಳ್ಳುವುದರತ್ತಲೇ ಕೊಹ್ಲಿ ತರಬೇತಿದಾರರ ಜತೆಗೆ ಬೆರೆಯುತ್ತಾರೆ. ತಂಡದ ಎಲ್ಲಾ ಚರ್ಚೆಗಳಲ್ಲೂ ಪಾಲ್ಗೊಳ್ಳುವ ವಿರಾಟ್, ಅಂತಿಮವಾಗಿ ಕೋಚ್ ಸಲಹೆ, ನಿರ್ಧಾರಗಳ ಪರ ಬಲವಾಗಿ ನಿಂತುಕೊಳ್ಳುತ್ತಾರೆ. ಸಲಹೆಗಳನ್ನ ಪಡೆದು ಅವುಗಳನ್ನ ಆಟದಲ್ಲಿ ಅನುಷ್ಠಾನಕ್ಕೆ ತರುತ್ತಾರೆ. ಈ ಗುಣದಿಂದಾಗಿಯೇ ವಿರಾಟ್ ಕೊಹ್ಲಿ ನಿಜಕ್ಕೂ ಒಳ್ಳೆಯ ನಾಯಕ' ಅಂತಾ ನ್ಯೂಜಿಲೆಂಡ್‌ನ ಮಾಜಿ ಕ್ಯಾಪ್ಟನ್ ಡೆನಿಯಲ್ ವೆಟ್ಟೋರಿ ಶ್ಲಾಘಿಸಿದ್ದಾರೆ.