ಹೈದರಾಬಾದ್: ಟಿ-20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಮತ್ತೊಂದು ಭರ್ಜರಿ ಗೆಲುವು ದಾಖಲಿಸಿದ್ದು, ನೂತನ ದಾಖಲೆ ನಿರ್ಮಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ ಈ ಸಾಧನೆ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತ್ತು. ಈ ಸ್ಕೋರ್ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ(8)ವಿಕೆಟ್ ಕಳೆದುಕೊಂಡಿದೆ. ಮತ್ತೊಬ್ಬ ಆರಂಭಿಕ ಕೆ.ಎಲ್. ರಾಹುಲ್(62) ಹಾಗೂ ನಾಯಕ ವಿರಾಟ್ ಕೊಹ್ಲಿ ಅಜೇಯ (94) ರನ್ಗಳ ನೆರವಿನಿಂದ 4 ವಿಕೆಟ್ ಕಳೆದುಕೊಂಡು ಅಂತಿಮವಾಗಿ 18.4 ಓವರ್ಗಳಲ್ಲಿ 209 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಈ ಗೆಲುವಿನ ಮೂಲಕ ಟೀಂ ಇಂಡಿಯಾ ಟಿ-20 ಕ್ರಿಕೆಟ್ನಲ್ಲಿ ಅತಿ ದೊಡ್ಡ ಸ್ಕೋರ್ ಬೆನ್ನಟ್ಟಿ ಗೆಲುವು ದಾಖಲಿಸಿದೆ.
ಟಿ-20ಯಲ್ಲಿ ಟೀಂ ಇಂಡಿಯಾ ಬೆನ್ನಟ್ಟಿದ ಅತಿದೊಡ್ಡ ಸ್ಕೋರ್
- 208 ವೆಸ್ಟ್ ಇಂಡೀಸ್ ವಿರುದ್ಧ ಹೈದರಾಬಾದ್ 2019
- 207 ಶ್ರೀಲಂಕಾ ವಿರುದ್ಧ ಮೊಹಾಲಿ 2009
- 202 ಆಸ್ಟ್ರೇಲಿಯಾ ವಿರುದ್ಧ ರಾಜ್ಕೋಟ್ 2013
- 199 ಇಂಗ್ಲೆಂಡ್ ವಿರುದ್ಧ ಬ್ರಿಸ್ಟಲ್ 2018
- 198 ಆಸ್ಟ್ರೇಲಿಯಾ ವಿರುದ್ಧ 2016
ಟಿ-20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗಳಿಸಿರುವ ಅತಿದೊಡ್ಡ ಸ್ಕೋರ್ ಇದಾಗಿದ್ದು, ಇಂದಿನ ಪಂದ್ಯದಲ್ಲಿ ಅಜೇಯ 94 ರನ್ ಗಳಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 2016ರಲ್ಲಿ ಅಡಿಲೇಡ್ನಲ್ಲಿ ಅಜೇಯ 90 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ಕೆ.ವಿಲಿಯಮ್ಸ್ 4 ಓವರ್ಗಳಲ್ಲಿ ಬರೋಬ್ಬರಿ 60 ರನ್ ನೀಡಿ ಅತಿ ದುಬಾರಿ ಬೌಲರ್ ಎಂದು ಎನ್ನಿಸಿಕೊಂಡರು.
ರೋಹಿತ್ ಹಿಂದಿಕ್ಕಿದ ವಿರಾಟ್
ಟಿ-20 ಕ್ರಿಕೆಟ್ನಲ್ಲಿ ಹಿಟ್ಮ್ಯಾನ್ 2539ರನ್ಗಳಿಕೆ ಮಾಡಿ ಮೊದಲ ಅತಿಹೆಚ್ಚು ರನ್ಗಳಿಕೆ ಮಾಡಿರುವ ಪ್ಲೇಯರ್ ಆಗಿದ್ದರು. ಆದರೆ ಇಂದಿನ ಪಂದ್ಯದಲ್ಲಿ 94ರನ್ಗಳಿಕೆ ಮಾಡಿರುವ ಕೊಹ್ಲಿ ಹಿಟ್ಮ್ಯಾನ್ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದು ಟಿ-20ಯಲ್ಲಿ 2544ರನ್ಗಳಿಸಿದ್ದಾರೆ. ಇದೀಗ ಟಿ20ಯಲ್ಲಿ ರೋಹಿತ್ 22 ಅರ್ಧಶತಕ ಗಳಿಸಿದ್ರೆ, ವಿರಾಟ್ 23 ಅರ್ಧಶತಕ ಗಳಿಸಿದ್ದಾರೆ.
ಟೀಂ ಇಂಡಿಯಾದ ಈ ಅಮೋಘ ಸಾಧನೆಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಸರ್ ವಿವಿಯನ್ ರಿಚರ್ಡ್ಸನ್ ಟ್ವೀಟ್ ಮೂಲಕ ಕೊಂಡಾಡಿದ್ದಾರೆ. ಇನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20ಯಲ್ಲಿ 23ನೇ ಅರ್ಧಶತಕ ಸಿಡಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
-
Amazing. Just amazing, @imVkohli
— Sir Vivian Richards (@ivivianrichards) December 6, 2019 " class="align-text-top noRightClick twitterSection" data="
">Amazing. Just amazing, @imVkohli
— Sir Vivian Richards (@ivivianrichards) December 6, 2019Amazing. Just amazing, @imVkohli
— Sir Vivian Richards (@ivivianrichards) December 6, 2019