ಮುಂಬೈ: ವಾಂಖೆಡೆ ಮೈದಾನದಲ್ಲಿ ವಿಂಡೀಸ್ ವಿರುದ್ಧ ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಗೆದ್ದು ಕೊಹ್ಲಿ ಸೈನ್ಯ ಸರಣಿಯನ್ನ 2-1 ಅಂತರದಿಂದ ಕೈವಶ ಮಾಡಿಕೊಂಡಿದೆ. ಈ ವೇಳೆ ಕೊಹ್ಲಿ ಬ್ಯಾಟ್‌ನಿಂದ ಸಿಡಿದ ಅದ್ಭುತ ಸಿಕ್ಸರ್ ದೃಶ್ಯ ನೋಡಿ ಅವರೇ ಅರೆಕ್ಷಣ ದಂಗಾಗಿ ಬಿಟ್ಟರು!
ರಿಷಭ್ ಪಂತ್ ವಿಕೆಟ್ ಬೀಳುತ್ತಿದ್ದಂತೆ ಮೈದಾನಕ್ಕೆ ಬಂದ ಕೊಹ್ಲಿ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಈ ವೇಳೆ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಮುಗಿಸಿ ಮುನ್ನಡೆದ ಅವರು 29 ಬಾಲ್ಗಳಲ್ಲಿ ಬರೋಬ್ಬರಿ 70 ರನ್ ಸಂಪಾದಿಸಿ ಎದುರಾಳಿ ತಂಡದ ಬೌಲರ್ಗಳ ಮೇಲೆ ಗದಾ ಪ್ರಹಾರವನ್ನೇ ನಡೆಸಿದ್ರು. ಈ ವೇಳೆ, ವೆಸ್ಟ್ ಇಂಡೀಸ್ ತಂಡದ ಕೆಸ್ರಿಕ್ ವಿಲಿಯಮ್ಸ್ ಓವರ್ನಲ್ಲಿ ಅದ್ಭುತವಾಗಿ ಸಿಕ್ಸರ್ ಸಿಡಿಸಿದ ಅವರು ಬಳಿಕ ಅಚ್ಚರಿ ವ್ಯಕ್ತಪಡಿಸಿದ್ರು.
-
Ooops !!! That's a Biggie 🙌🔥🔥🔥
— Ή I Ƭ ᄂ Σ Я 😎 (@AlwaysHitler45) December 11, 2019 " class="align-text-top noRightClick twitterSection" data="
That Expression from Kohli 😂😂😂
Virat Kohli vs Kesrick Williams 🔥👌#ViratKohli #ViratvsWilliams #INDvWI pic.twitter.com/TZzgMOOfmi
">Ooops !!! That's a Biggie 🙌🔥🔥🔥
— Ή I Ƭ ᄂ Σ Я 😎 (@AlwaysHitler45) December 11, 2019
That Expression from Kohli 😂😂😂
Virat Kohli vs Kesrick Williams 🔥👌#ViratKohli #ViratvsWilliams #INDvWI pic.twitter.com/TZzgMOOfmiOoops !!! That's a Biggie 🙌🔥🔥🔥
— Ή I Ƭ ᄂ Σ Я 😎 (@AlwaysHitler45) December 11, 2019
That Expression from Kohli 😂😂😂
Virat Kohli vs Kesrick Williams 🔥👌#ViratKohli #ViratvsWilliams #INDvWI pic.twitter.com/TZzgMOOfmi
ವಿಲಿಯಮ್ಸ್ ಎಸೆದ 18ನೇ ಓವರ್ನಲ್ಲಿ ಅದ್ಭುತವಾಗಿ ಸಿಕ್ಸರ್ ಎತ್ತಿದ ಕೊಹ್ಲಿ ಪಂದ್ಯದಲ್ಲಿ ಒಟ್ಟಾರೆ 7 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸಿದ್ದರು. ಈ ಮೂಲಕ ಎರಡು ವರ್ಷಗಳ ಹಿಂದೆ ಕೊಹ್ಲಿಯನ್ನು ತಮ್ಮ ಸಿಗ್ನೇಚರ್ ಸ್ಟೈಲ್ನಲ್ಲಿ ಅಣಕ್ಕಿಸಿದ್ದ ವೆಸ್ಟ್ ಇಂಡೀಸ್ ಬೌಲರ್ಗೆ ಕೊಹ್ಲಿ ಮೊದಲ ಟಿ-20 ಪಂದ್ಯದಲ್ಲೇ ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕೊಹ್ಲಿ, ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಈ ಇನ್ನಿಂಗ್ಸ್ ತುಂಬಾ ಮಹತ್ವದ್ದು ಹಾಗೂ ಸ್ಮರಣಿಯ ಎಂದು ಸಂತಸ ವ್ಯಕ್ತಪಡಿಸಿದ್ರು.