ನವದೆಹಲಿ: ಪೂರ್ವ ಲಡಾಕ್‌ನ ಗಾಲ್ವಾನ್ನಲ್ಲಿ ಚೀನೀ ಪಡೆಗಳು ಅತಿಕ್ರಮಿಸದೆ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಇಂಥ ಘಟನೆ ನಡೆಯುತ್ತಿರಲಿಲ್ಲ ಎಂದು ಭಾರತ ಹೇಳಿದೆ.
ಈ ಮೊದಲಿನಂತೆ ಉನ್ನತ ಮಟ್ಟದ ಒಪ್ಪಂದವನ್ನು ಚೀನಾದ ಸೂಕ್ಷ್ಮವಾಗಿ ಅನುಸರಿಸಿದ್ದರೆ ಎರಡೂ ಕಡೆ ಸಾವು ನೋವು ಸಂಭವಿಸುತ್ತಿರಲಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದೆ.
ಗಡಿ ನಿರ್ವಹಣೆಗೆ ಸಂಬಂಧಿತ ಅವರ ಜವಾಬ್ದಾರಿಯುತ ವಿಧಾನ ಗಮನಿಸಿದರೆ ಈ ಬಗ್ಗೆ ತಿಳಿಯುತ್ತದೆ. ಭಾರತವು ತನ್ನ ಎಲ್ಲಾ ಚಟುವಟಿಕೆಗಳನ್ನು ಯಾವಾಗಲೂ ಎಲ್‌ಎಸಿಯ ಒಳ ಭಾಗದಲ್ಲಿ ಇರುವಂತೆ ನೋಡಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ. ಚೀನಾದ ಕಡೆಯಿಂದ ನಾವು ಅದನ್ನೇ ನಿರೀಕ್ಷಿಸುತ್ತೇವೆ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಇಂದು ನಡೆದ ಸಂಘರ್ಷದಲ್ಲಿ ಭಾರತೀಯ ಪಡೆಯ 20 ಯೋಧರು ಹುತಾತ್ಮರಾದರೆ, ಚೀನಾದ 43 ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಈ ಪೈಕಿ ಕೆಲವರು ಸಾವಿಗೀಡಾಗಿದ್ದಾರೆ. 45 ವರ್ಷಗಳ ಬಳಿಕ ನಡೆದ ಮಾರಣಾಂತಿಕ ಘಟನೆ ಇದಾಗಿದೆ.
ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ಅಗತ್ಯತೆ ಮತ್ತು ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹಾರಿಸುವ ಬಗ್ಗೆ ನಮಗೆ ದೃ ಢವಾಗಿ ಮನವರಿಕೆಯಾಗಿದೆ. ಅದೇ ಸಮಯದಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.