ಬೋಲಂಗಿರ್ (ಒಡಿಶಾ) : ಟ್ರಾಫಿಕ್ ರೂಲ್ಸ್ಗಳನ್ನು ಉಲ್ಲಂಘಿಸಿದ ಕಾರಣ ಹೊಸ ಮೋಟಾರು ವಾಹನ ಕಾಯ್ದೆ ಅನ್ವಯ ವಾಹನ ಸವಾರನೊಬ್ಬ ಬರೋಬ್ಬರಿ 22,500 ರೂ. ದುಬಾರಿ ಮೊತ್ತದ ದಂಡ ಕಟ್ಟಿರುವ ಘಟನೆ ಒಡಿಶಾದ ಬೋಲಂಗಿರ್ನಲ್ಲಿ ನಡೆದಿದೆ.
ಸುಶಾಂತ್ ಮೆಹರ್ ಎಂಬ ವಾಹನ ಸವಾರ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದ ಕಾರಣ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಹೊಂದಿಲ್ಲದ ಕಾರಣ ಟ್ರಾಫಿಕ್ ಪೊಲೀಸರಿಗೆ ದುಬಾರಿ ಮೊತ್ತದ ದಂಡ ತೆತ್ತಿದ್ದಾನೆ. ಆರ್ಟಿಒ ಚಲನ್ನಲ್ಲಿ ನಮೂದಿಸಿದ್ದಂತೆ, ಆರ್ಟಿಒ ಅಧಿಕಾರಿಗಳನ್ನು ನಿಂದಿಸಿದ್ದಕ್ಕಾಗಿ 2000 ರೂ ದಂಡ,ಡ್ರೈವಿಂಗ್ ಲೈಸೆನ್ಸ್ ನೀಡದಿದ್ದಕ್ಕಾಗಿ 5000 ರೂ ದಂಡ, ಹಾಗೂ ಅತೀ ವೇಗದಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ 5000 ದಂಡ ,ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ 10,000 ದಂಡ ವಿಧಿಸಲಾಗಿದೆ.