ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ,ಕನ್ನಡಿಗ ಮಯಾಂಕ್ ಅಗರವಾಲ್ ಅಬ್ಬರದ ದ್ವಿಶತಕ ಸಿಡಿಸಿದ್ದು, ತಮ್ಮಲ್ಲಿರುವ ಸಾಮರ್ಥ್ಯ ಹೊರಹಾಕಿದ್ದಾರೆ.
ಕರ್ನಾಟಕ ರಣಜಿ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಈ ಪ್ಲೇಯರ್ಗೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಯ್ಕೆ ಸಮಿತಿ ಮಣೆ ಹಾಕಿತ್ತು. ಅದಾದ ಬಳಿಕ ತಮಗೆ ಸಿಕ್ಕ ಅವಕಾಶವನ್ನ ಅದ್ಭುತವಾಗಿ ಬಳಿಸಿಕೊಂಡಿರುವ ಮಯಾಂಕ್ ಬಗ್ಗೆ ಮತ್ತೋರ್ವ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮಾತನಾಡಿದ್ದಾರೆ.
2017ರಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದ ಮಯಾಂಕ್ ಅಗರವಾಲ್, ಖುದ್ದಾಗಿ ಈ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮೊಷನ್ ಪ್ರೋಮೋದಿಂದ ಸಹ ಮಯಾಂಕ್ ಹೊರಗುಳಿದಿದ್ದರು. ಆದರೆ, ಕರ್ನಾಟಕ ರಣಜಿ ತಂಡದ ಕ್ಯಾಪ್ಟನ್ ಆಗಿದ್ದ ವಿನಯ್ ಕುಮಾರ್ ಪ್ರೇರಣೆ ಮಾಡಿ, ಉತ್ತಮ ರನ್ಗಳಿಕೆ ಮಾಡುವಂತೆ ಹೇಳಿದ್ದರು. ಇದಾದ ನಂತರ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲೇ ಮಯಾಂಕ್ ತ್ರಿಶತಕ(304) ಸಿಡಿಸಿದ್ರು. ತದನಂತರ ಮಯಾಂಕ್ ತಿರುಗಿ ನೋಡದೇ ಓರ್ವ ಅದ್ಭುತ ಬ್ಯಾಟ್ಸಮನ್ ಆಗಿ ಹೊರಹೊಮ್ಮಿದ್ದಾರೆ ಎಂದು ಉತ್ತಪ್ಪ ತಿಳಿಸಿದ್ರು. ದಾವಣಗೆರೆ ಎಕ್ಸ್ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ವಿನಯ್ ಕುಮಾರ್ ತಮ್ಮ ಪ್ರೇರಣಾತ್ಮಕ ಮಾತುಗಳಿಂದಲೇ ಮಯಾಂಕ್ಗೆ ಕ್ರಿಕೆಟ್ನಲ್ಲಿ ಕಮ್ಬ್ಯಾಕ್ ಆಗಲು ಕಾರಣವಾಗಿದ್ದು, ಅವರ ಸದ್ಯದ ಸ್ಥಿತಿಗೆ ಆ ವ್ಯಕ್ತಿ ಕಾರಣ ಎಂದು ತಿಳಿಸಿದ್ದಾರೆ.
ಕರ್ನಾಟಕ ರಣಜಿ ತಂಡದಲ್ಲಿ ಮಯಾಂಕ್ ಮೇಲಿಂದ ಮೇಲೆ ಅವಕಾಶ ಪಡೆದುಕೊಂಡು ಓರ್ವ ಅದ್ಭುತ ಬ್ಯಾಟ್ಸಮನ್ ಆಗಿ ರೂಪಗೊಳ್ಳುವಲ್ಲಿ ವಿನಯ್ ಕುಮಾರ್ ಪಾತ್ರ ತುಂಬಾ ಮಹತ್ವದಾಗಿದೆ. ಸದ್ಯದ ಮಯಾಂಕ್ ಉತ್ತಮ ಪ್ರದರ್ಶನಕ್ಕೆ ವಿನಯ್ ಕಾರಣ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.