ಜೈಪುರ: ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಸುಮೋರ್‌ಪುರ ಥಾನಾದಲ್ಲಿ ಗ್ರಾಮಸ್ಥರು ಯುವಕನಿಗೆ ಮೂತ್ರ ಕುಡಿಯುವಂತೆ ಶಿಕ್ಷೆ ವಿಧಿಸಿದ ಅಮಾನವೀಯ ಘಟನೆ ನಡೆದಿದೆ. ಕಲುರಾಮ್ (24) ಎಂಬ ಯುವಕನಿಗೆ ಜನಸಮೂಹದ ಮುಂದೆ ಮೂತ್ರ ಕುಡಿಯಲು ಒತ್ತಾಯಿಸಲಾಯಿತು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಈ ಕುರಿತು ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿರೋಹಿಯ ಪಲಾಡೆ (ಎಂ) ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪೂರಾ ರಾಮ್ ದಹಿಯಾ ತಿಳಿಸಿದ್ದಾರೆ.
ಪಲಾಡಿ (ಎಂ) ಮತ್ತು ಸುಮೇರ್‌ಪುರ ಪೊಲೀಸ್ ಠಾಣೆಗಳ ತಂಡವು ಆರೋಪಿಗಳಿಗಾಗಿ ಶೋಧ ನಡೆಸುತ್ತಿದೆ. ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 13-15 ಜನರು ಘಟನೆಯಲ್ಲಿ ಭಾಗಿಯಾಗಿದ್ದರು ಅವರು ಹೇಳಿದರು.