ETV Bharat / bharat

ವಿಶ್ವ ವಾಣಿಜ್ಯ ಕಟ್ಟಡದ ಎತ್ತರದಷ್ಟು ದೂರದಲ್ಲಿದ್ದಾಗ ವಿಕ್ರಂ ಸಂಪರ್ಕ ಕಳೆದುಕೊಂಡಿತು! - ಇಸ್ರೋ ವಿಜ್ಞಾನಿಗಳು

ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್​​ ಚಂದಿರನ ಅಂಗಳ ತಲುಪಲು 400 ಮೀಟರ್​ ದೂರದಲ್ಲಿದ್ದಾಗ ಗ್ರೌಂಡ್‌ ಸ್ಟೇಷನ್‌ನಿಂದ ಸಂಪರ್ಕ ಕಳೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಮಾಹಿತಿ ಹೊರಬಿದ್ದಿದೆ.

ಚಂದ್ರಯಾನ-2
author img

By

Published : Sep 11, 2019, 5:32 PM IST

Updated : Sep 11, 2019, 5:46 PM IST

ಹೈದರಾಬಾದ್​: ಚಂದ್ರಯಾನ-2 ನೌಕೆಯ ವಿಕ್ರಂ ಲ್ಯಾಂಡರ್‌ ಶಶಿಯ ಅಂಗಳಕ್ಕೆ ಸೆಪ್ಟೆಂಬರ್​​ 7ರಂದು ಇಳಿಯಲು 2.1 ಕಿಲೋಮೀಟರ್​​ ದೂರದಲ್ಲಿದ್ದಾಗ ಭೂಮಿಯಿಂದ ಸಂಪರ್ಕ ಕಳೆದುಕೊಂಡಿತು. ಇದಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ.

Chandrayaan-2
ವಿಕ್ರಂ ಲ್ಯಾಂಡರ್​​​

ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿಕ್ರಂ ಲ್ಯಾಂಡರ್​​​ 2.1 ಕಿ.ಮೀಟರ್​ ಅಲ್ಲ, ಬದಲಿಗೆ ಕೇವಲ 400 ಮೀಟರ್​​​ ದೂರದಲ್ಲಿದ್ದಾಗ ಭೂಮಿಯಿಂದ ಸಂಪರ್ಕ ಕಳೆದುಕೊಂಡಿದೆ. ಲ್ಯಾಂಡರ್​​ ಚಂದ್ರನ ಅಂಗಳದಲ್ಲಿ ಇಳಿಯಲು ಹಾಕಲಾಗಿದ್ದ ಗ್ರೀನ್​ ಲೈನ್​ ಕೇವಲ 400 ಮೀಟರ್​ ದೂರದಲ್ಲಿದ್ದಾಗಲೇ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Chandrayaan-2
ಇಸ್ರೋ ವಿಜ್ಞಾನ ಕೇಂದ್ರ

ಕೊನೆಯ ಹಂತದಲ್ಲಿ ವಿಕ್ರಂ ಲ್ಯಾಂಡರ್ ಏಕಾಏಕಿಯಾಗಿ ಸಂಪರ್ಕ ಕಳೆದುಕೊಂಡಿದ್ದರಿಂದ ಭಾರತಕ್ಕೆ ಸ್ವಲ್ಪ ಮಟ್ಟದ ಹಿನ್ನೆಡೆಯಾಗಿದ್ದು, ಇದೀಗ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ನಿರಂತರ ಶ್ರಮ ಹಾಕುತ್ತಿದ್ದಾರೆ. ಚಂದ್ರನ ಅಂಗಳದಲ್ಲಿ ಆರ್ಬಿಟರ್​ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿದ್ದು ಅದರ ಸಹಾಯದಿಂದ ಚಂದ್ರನ ಅಧ್ಯಯನ ನಡೆಸಲಾಗುತ್ತಿದೆ.

ಚಂದಿರನ ದಕ್ಷಿಣ ಧ್ರುವಕ್ಕೆ ಕಾಲಿಡುವ ಇಸ್ರೋ ಯೋಜನೆ ಬಗ್ಗೆ ಈಗಾಗಲೇ ವಿವಿಧ ದೇಶಗಳ ಬಾಹ್ಯಾಕಾಶ ​ಸಂಸ್ಥೆಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಸ್ರೋ ಸಾಧನೆ ಮೆಚ್ಚುವಂಥದ್ದು, ಯೋಜನೆ ಶೇ.95ರಷ್ಟು ಯಶ ಕಂಡಿದೆ ಎಂದು ಹೇಳಿದ್ದಾರೆ.

Intro:Body:

2.1 ಕಿ,ಮೀ ಅಲ್ಲ, ಕೇವಲ 400 ಮೀಟರ್​ ದೂರವಿದ್ದಾಗ ವಿಕ್ರಂ ಸಂಪರ್ಕ ಕಳೆದುಕೊಂಡಿದ್ದು! 

ಹೈದರಾಬಾದ್​: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಮ್ಮಿಕೊಂಡಿದ್ದ ಮಹತ್ವಾಕಾಂಕ್ಷಿ ಚಂದ್ರಯಾನ-2 ಶಶಿ ಅಂಗಳಕ್ಕೆ ಸೆಪ್ಟೆಂಬರ್​​ 7ರಂದು ಇಳಿಯಲು ಕೊನೆ ಹಂತದಲ್ಲಿದ್ದಾಗ ಅಂದರೆ 2.1 ಕಿ,ಮೀಟರ್​​ ದೂರದಲ್ಲಿದ್ದಾಗ ವಿಕ್ರಂ ಲ್ಯಾಂಡರ್​​​ ಭೂಮಿಯಿಂದ ಸಂಪರ್ಕ ಕಳೆದುಕೊಂಡು, ಇಸ್ರೋ ವಿಜ್ಞಾನಿಗಳಿಗೆ ನಿರಾಸೆ ಮೂಡಿಸಿತ್ತು. 

ಆದರೆ ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಕ್ರಂ ಲ್ಯಾಂಡರ್​​​ 2.1 ಕಿ.ಮೀಟರ್​ ಅಲ್ಲ ಬದಲಿಗೆ ಕೇವಲ 400 ಮೀಟರ್​​​ ದೂರದಲ್ಲಿದ್ದಾಗ ಭೂಮಿಯಿಂದ ಸಂಪರ್ಕ ಕಳೆದುಕೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ವಿಕ್ರಂ ಲ್ಯಾಂಡರ್​​ ಚಂದ್ರನ ಅಂಗಳದಲ್ಲಿ ಇಳಿಯಲು ಹಾಕಲಾಗಿದ್ದ ಗ್ರಿನ್​ ಲೈನ್​ ಕೇವಲ 400 ಮೀಟರ್​ ದೂರದಲ್ಲಿದ್ದಾಗಲೇ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.  ಕೊನೆ ಕ್ಷಣದವರೆಗೂ ಇಸ್ರೋ ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲವೂ ನಡೆದಿತ್ತು. ಆದರೆ ಕೊನೆಯ 15 ಡೆಡ್ಲಿ ನಿಮಿಷಗಳು ಸರಿಯಾಗಿ ನಡೆದು ಹೋಗಿದ್ದರೆ, ಭಾರತ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡ್ತಿತ್ತು. 

ಆದರೆ ಕೊನೆಯ ಹಂತದಲ್ಲಿ ವಿಕ್ರಂ ಲ್ಯಾಂಡರ್​ ಏಕಾಏಕಿಯಾಗಿ ಸಂಪರ್ಕ ಕಳೆದುಕೊಂಡಿದ್ದರಿಂದ ಭಾರತಕ್ಕೆ ಸ್ವಲ್ಪ ಮಟ್ಟದ ಹಿನ್ನೆಡೆಯಾಗಿದ್ದು, ಇದೀಗ ನಿರಂತರವಾಗಿ ಅದರ ಸಂಪರ್ಕ ಪಡೆದುಕೊಳ್ಳಲು ಇಸ್ರೋ ಸಂಸ್ಥೆ ಶ್ರಮ ಪಡುತ್ತಿದೆ. ಚಂದ್ರನ ಅಂಗಳದಲ್ಲಿ ಆರ್ಬಿಟರ್​ ಸುರಕ್ಷಿತವಾಗಿ ಕಾರ್ಯ ನಡೆಸುತ್ತಿದ್ದು, ಅವರ ಸಹಾಯದಿಂದ ಭೂಮಿಯ ಅಧ್ಯಯನ ಮಾಡಲು ಇಸ್ರೋ ಇದೀಗ ಮುಂದಾಗಿದೆ. 

ಇನ್ನು ಚಂದಿರನ ದಕ್ಷಿಣಧ್ರುವಕ್ಕೆ ಕಾಲಿಡುವ ಇಸ್ರೋ ಯೋಜನೆ ಬಗ್ಗೆ ಈಗಾಗಲೇ ವಿವಿಧ ದೇಶದ ಸ್ಪೇಸ್​ ಸಂಸ್ಥೆಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅವರು ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಮೆಚ್ಚುವಂತಹದ್ದು, ಅದರಲ್ಲಿ ಇಸ್ರೋ ಶೇ.95ರಷ್ಟು ಯಶಸ್ಸು ಸಾಧಿಸಿದೆ ಎಂದು ಹೇಳಿವೆ.  

Conclusion:
Last Updated : Sep 11, 2019, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.