ತಿರುವನಂತಪುರಂ(ಕೇರಳ): ಭೂಮಿ ತಾಯಿ ತಂದ ಬೆವರಿನ ಸಿರಿ ಹಂಚಿಕೊಂಡು ತಿಂದ್ರೆ ಏನ್ ಚಂದವೋ... ಅಂತಾ ಒಂದು ಹಾಡನ್ನು ನಾವೆಲ್ಲಾ ಕೇಳಿದ್ದೇವೆ.. ಇತ್ತೀಚೆಗೆ ಕೆಲವರು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದಂತೆ ಮಾನವೀಯತೆಯನ್ನು ಮರೆಯುತ್ತಿದ್ದಾರೆ. ಆದ್ರೆ, ಇಲ್ಲೋರ್ವ ಪೊಲೀಸ್ ತಾನು ತಿನ್ನುವ ಆಹಾರವನ್ನು ಸಾಮಾನ್ಯ ವ್ಯಕ್ತಿಯೊಂದಿಗೆ ಹಂಚಿಕೊಂಡು ತಿಂದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಎಸ್ ಎಸ್ ಶ್ರೀಜಿತ್ ಎಂಬ ಪೊಲೀಸ್ ಅಧಿಕಾರಿ ತಿರುವನಂತಪುರಂನ ಹೊರವಲಯದಲ್ಲಿರುವ ಹರ್ತಾಲ್ ಎಂಬಲ್ಲಿ ತನ್ನ ಆಹಾರವನ್ನು ಹಂಚಿಕೊಂಡು ತಿನ್ನುವ ವೇಳೆ ವಿಡಿಯೋ ಮಾಡಲಾಗಿದ್ದು, ಈಗ ಈ ಪೊಲೀಸ್ ನಿಜವಾದ ಜನನಾಯಕ ಎಂಬುದಾಗಿ ಎಲ್ಲೆಡೆ ಜನರು ಬಣ್ಣಿಸುತ್ತಿದ್ದಾರೆ.
- " class="align-text-top noRightClick twitterSection" data="">
ಈ ವಿಡಿಯೋ ಪೋಸ್ಟ್ ಮಾಡಿದ ಮೊದಲ ಮೂರು ಗಂಟೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಇನ್ನು ಅಲ್ಲಿನ ಪೊಲೀಸ್ ಮಹಾನಿರ್ದೇಶಕ ಲೋಕನಾಥ ಬೆಹ್ರಾ ಅವರು ಕೂಡ ಈ ವಿಡಿಯೋ ನೋಡಿ ಸಂತಸಪಟ್ಟು ಪೊಲೀಸ್ ಅಧಿಕಾರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ನಾನು ನನ್ನ ಆಹಾರದ ಪೊಟ್ಟಣ ತೆರೆಯಲು ಹೊರಟಾಗ ಸಮೀಪದಲ್ಲೇ ಇದ್ದ ವ್ಯಕ್ತಿ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದನ್ನು ನೋಡಿದೆ. ಆತನನ್ನು ನೋಡಿ ಅವನು ಹಸಿದಿರಬಹುದು ಎಂದು ತಿಳಿದು, ಊಟ ಆಯ್ತಾ ಎಂದು ಕೇಳಿದೆ. ಅದಕ್ಕೆ ಆತ ಇಲ್ಲವೆಂದು ಪ್ರತಿಕ್ರಿಯಿಸಿದ್ದ. ನಂತರ ನಾನು ಬಾ ಊಟ ಮಾಡುವ ಎಂದು ಕರೆದೆ, ಅದಕ್ಕೂ ಆತ ನಿರಾಕರಿಸಿದ. ನಾನು ಆತನನ್ನು ಊಟ ಮಾಡಲೇ ಬೇಕು ಒತ್ತಾಯಿಸಿದಾಗ ಒಪ್ಪಿಕೊಂಡು ನನ್ನ ಜೊತೆ ಆಹಾರ ಸವಿದ ಎಂದು ಶ್ರೀಜಿತ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.