ETV Bharat / bharat

ವಾಂತಿ, ಭೇದಿ ತರುವ ಕಾಲರಾ; ಲಕ್ಷಣಗಳು ಮತ್ತು ಮುಂಜಾಗ್ರತಾ ಕ್ರಮಗಳು - ಡಿ ಹೈಡ್ರೇಶನ್ ಕಾಲರಾ

ಕಾಲರಾ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಕೆಲ ವಿರಳ ಪ್ರಕರಣಗಳಲ್ಲಿ ಮಾತ್ರ ಗಂಭೀರ ಸ್ವರೂಪದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸೋಂಕು ತಗುಲಿದ 20 ರಲ್ಲಿ ಓರ್ವ ರೋಗಿಯು ಅತಿ ತೀವ್ರ ಸ್ವರೂಪದ ವಾಂತಿ ಭೇದಿಯಿಂದ ಬಳಲುತ್ತಾನೆ ಹಾಗೂ ಅತಿ ಬೇಗನೆ ಡಿ ಹೈಡ್ರೇಶನ್ ಉಂಟಾಗುತ್ತದೆ. ಇನ್ನು ಕೆಲವರಿಗೆ ಕಾಲರಾ ರೋಗದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಹಾಗೆಯೇ ವಾಸಿಯಾಗಿಬಿಡಬಹುದು.

Vibrio cholerae bacterium that causes cholera

author img

By

Published : Jul 4, 2020, 8:43 PM IST

ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲರಾ ಪ್ರಮುಖವಾಗಿದೆ. ಅಸ್ವಚ್ಛ ವಾತಾವರಣ ಹಾಗೂ ಕಲುಷಿತ ಆಹಾರ, ನೀರು ಸೇವನೆಯಿಂದ ಬರುವ ಕಾಲರಾ, ತೀವ್ರ ವಾಂತಿ, ಭೇದಿಗಳಿಗೆ ಕಾರಣವಾಗುತ್ತದೆ. ವಿಬ್ರಿಯೊ ಕೊಲೆರೆ ಎಂಬ ಬ್ಯಾಕ್ಟೀರಿಯಾ ಸೋಂಕು ಜೀರ್ಣನಾಳಕ್ಕೆ ತಗಲುವುದರಿಂದ ಕಾಲೆರಾ ಬರುತ್ತದೆ. ಕಲುಷಿತ ಹಾಗೂ ಮತ್ತು ನೀರಿನಿಂದಲೇ ಕಾಲರಾ ಬರುವುದಾದರೂ, ಕಚ್ಚಾ ಅಥವಾ ಬೇಯಿಸದ, ಅರ್ಧಂಬರ್ಧ ಬೇಯಿಸಿದ ಮೀನಿನಿಂದಲೂ ಕಾಲರಾ ಬರಬಹುದು. ಕಾಲರಾ ಬ್ಯಾಕ್ಟೀರಿಯಾ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಹಾಗೂ ಸಾಮಾನ್ಯವಾಗಿ ಬಾಯಿಯ ಮೂಲಕವೇ ಬ್ಯಾಕ್ಟೀರಿಯಾ ದೇಹ ಪ್ರವೇಶಿಸುತ್ತದೆ. ದೈಹಿಕ ಸ್ವಚ್ಛತೆ ಕಾಪಾಡದ ಹಾಗೂ ಆಗಾಗ ಕೈತೊಳೆಯುವ ಅಭ್ಯಾಸವಿಲ್ಲದ ಕಾಲರಾ ರೋಗಿಯು ಇತರರಿಗೆ ಸೋಂಕು ಹರಡುತ್ತಾನೆ.

ಕಾಲರಾ ಪಿಡುಗು ಕಾಣಿಸಿಕೊಂಡ ವರ್ಷಗಳು

* 1817 - ಆಗ್ನೇಯ ಏಷ್ಯಾದಲ್ಲಿ ಪ್ರಥಮ ಬಾರಿಗೆ ಕಾಲರಾ ಕಾಣಿಸಿಕೊಂಡಿತು.

* 1829 - ವಿಶ್ವದಲ್ಲಿ ಎರಡನೆಯ ಬಾರಿಯ ಕಾಲರಾ ಪಿಡುಗು ಭಾರತ ದೇಶದಲ್ಲಿ ಆರಂಭವಾಯಿತು.

* 1852 - ಮೂರನೆಯ ಬಾರಿ ಭಾರತದಲ್ಲಿ ಕಾಲರಾ ಬಂದಿತು.

* 1863 - ಬಂಗಾಳ ಕೊಲ್ಲಿ ಸುತ್ತಲಿನ ಪ್ರದೇಶದಲ್ಲಿ ನಾಲ್ಕನೇ ಪಿಡುಗು ಆರಂಭವಾಯಿತು.

* 1881 - ಐದನೇ ಬಾರಿ ಭಾರತದಲ್ಲಿ ಪಿಡುಗು ಆರಂಭವಾಯಿತು.

* 1899 - ಆರನೇ ಬಾರಿಯೂ ಭಾರತದಲ್ಲಿಯೇ ಕಾಲರಾ ಉಲ್ಬಣಿಸಿತ್ತು.

ಕಾಲರಾ ಪ್ರಕರಣ ಹಾಗೂ ಸಾವು

1991 ರಲ್ಲಿ 7,088 ಪ್ರಕರಣಗಳು ಸಂಭವಿಸಿ, 150 ಜನ ಕಾಲರಾಗೆ ಬಲಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಾಲರಾ ವ್ಯಾಪಕತೆ ಕಡಿಮೆಯಾಗುತ್ತಿರುವುದು ಸಮಾಧಾನದ ಸಂಗತಿಯಾಗಿದೆ. 2018 ರಲ್ಲಿ 651 ಪ್ರಕರಣಗಳಲ್ಲಿ 6 ಜನ ಮೃತಪಟ್ಟಿದ್ದರು.

ಕಾಲರಾ ಹರಡಲು ಕಾರಣಗಳು

ವಿಬ್ರಿಯೊ ಕೊಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಾಲರಾ ಬರುತ್ತದೆ. ಕಾಲರಾ ರೋಗಿಯ ಮಲದಿಂದ ಬ್ಯಾಕ್ಟೀರಿಯಾ ಇತರ ನೀರು ಹಾಗೂ ಆಹಾರ ಪದಾರ್ಥಗಳಿಗೆ ಹರಡುವ ಸಾಧ್ಯತೆ ಇರುತ್ತದೆ. ಕಾಲರಾ ಹರಡುವಿಕೆಯ ಮೂಲಗಳು ಹೀಗಿವೆ:

- ನಗರ ಸಭೆ ಪೂರೈಸುವ ನೀರು

- ನಗರ ಸಭೆ ಪೂರೈಸುವ ನೀರಿನಿಂದ ಮಾಡಿದ ಮಂಜುಗಡ್ಡೆ

- ಬೀದಿ ಬದಿ ಮಾರುವ ಆಹಾರ ಮತ್ತು ಪಾನೀಯಗಳು

- ಮಾನವ ತ್ಯಾಜ್ಯದಿಂದ ಕಲುಷಿತವಾಗಿರುವ ನೀರು ಬಳಸಿ ಬೆಳೆಯಲಾದ ತರಕಾರಿ

- ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವ ಜಲಮೂಲಗಳಿಂದ ಹಿಡಿಯಲಾದ ಮೀನು ಹಾಗೂ ಇತರ ಜಲಚರಗಳ ಸೇವನೆಯಿಂದ ಕಾಲರಾ ಬರಬಹುದು

ಕಾಲರಾ ಬ್ಯಾಕ್ಟೀರಿಯಾ ವ್ಯಕ್ತಿಯೊಬ್ಬನ ಶರೀರ ಪ್ರವೇಶಿಸಿದಾಗ, ಕರುಳಿನಲ್ಲಿ ವಿಷಕಾರಿ ಪದಾರ್ಥವನ್ನು ಉಂಟು ಮಾಡುವುದರಿಂದ ತೀವ್ರ ಸ್ವರೂಪದ ವಾಂತಿ ಭೇದಿ ಆರಂಭವಾಗುತ್ತದೆ.

ಕಾಲರಾ ಲಕ್ಷಣಗಳು

ಬ್ಯಾಕ್ಟೀರಿಯಾ ದೇಹ ಪ್ರವೇಶಿಸಿದ ಐದಾರು ಗಂಟೆಗಳಲ್ಲಿಯೇ ಲಕ್ಷಣಗಳು ಕಾಣಿಸಿಕೊಳ್ಳುತ್ತವಾದರೂ ಕೆಲವೊಮ್ಮೆ ಐದಾರು ದಿನಗಳು ಹಿಡಿಯಬಹುದು. ಕಾಲರಾ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಕೆಲ ವಿರಳ ಪ್ರಕರಣಗಳಲ್ಲಿ ಮಾತ್ರ ಗಂಭೀರ ಸ್ವರೂಪದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸೋಂಕು ತಗುಲಿದ 20 ರಲ್ಲಿ ಓರ್ವ ರೋಗಿಯು ಅತಿ ತೀವ್ರ ಸ್ವರೂಪದ ವಾಂತಿ ಭೇದಿಯಿಂದ ಬಳಲುತ್ತಾನೆ ಹಾಗೂ ಅತಿ ಬೇಗನೆ ಡಿ ಹೈಡ್ರೇಶನ್ ಉಂಟಾಗುತ್ತದೆ. ಇನ್ನು ಕೆಲವರಿಗೆ ಕಾಲರಾ ರೋಗದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಹಾಗೆಯೇ ವಾಸಿಯಾಗಿಬಿಡಬಹುದು. ಆದರೆ ಸೋಂಕು ತಗುಲಿದ ಅವಧಿಯಲ್ಲಿ ಇವರಿಂದ ಮತ್ತೊಬ್ಬರಿಗೆ ಸೋಂಕು ಹರಡಬಹುದು.

ಡಿಹೈಡ್ರೇಶನ್ ಸೂಚಿಸುವ ಲಕ್ಷಣಗಳು: ಹೃದಯ ಬಡಿತ ಹೆಚ್ಚಳ, ಚರ್ಮದ ಸ್ಥಿತಿಸ್ಥಾಪಕತ್ವ ಕಡಿಮೆಯಾಗುವುದು, ಮೂಗು ಒಣಗುವುದು, ಕಡಿಮೆ ರಕ್ತದೊತ್ತಡ, ಸ್ನಾಯು ನೋವು. ಡಿಹೈಡ್ರೇಶನ್​ಗೆ ಬೇಗನೆ ಚಿಕಿತ್ಸೆ ನೀಡದಿದ್ದರೆ ಕೆಲವೇ ಗಂಟೆಗಳಲ್ಲಿ ರೋಗಿ ಸಾವನ್ನಪ್ಪುವ ಸಾಧ್ಯತೆಯಿರುತ್ತದೆ.

ಕಾಲರಾ ಉಪಚಾರ ಹಾಗೂ ನಿಯಂತ್ರಣ ಕ್ರಮಗಳು

ಕಾಲರಾಗೆ ವ್ಯಾಕ್ಸಿನ್ ಇದ್ದು, ಕುಟುಂಬದ ಎಲ್ಲರೂ ಈ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು. ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯುವುದು, ಕಲುಷಿತ ನೀರನ್ನು ಸೇವಿಸದಂತೆ ಎಚ್ಚರದಿಂದಿರುವುದು ಕಾಲರಾ ತಡೆಗೆ ಪ್ರಮುಖವಾಗಿದೆ. ಹಾಗೆಯೇ ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಹಣ್ಣು ತರಕಾರಿ ತೊಳೆಯಲು ಶುದ್ಧ ನೀರನ್ನೇ ಬಳಸಬೇಕು.

ತೊಳೆಯದ ಹಾಗೂ ಸಿಪ್ಪೆ ಸುಲಿಯದ ಹಣ್ಣುಗಳು, ಪ್ಯಾಶ್ಚರೈಜ್ ಮಾಡಿರದ ಹಾಲು, ಕಚ್ಚಾ ಹಾಗೂ ಅರ್ಧ ಬೇಯಿಸಿದ ಮೀನು, ಮಾಂಸ ಮುಂತಾದುವುಗಳನ್ನು ಸೇವಿಸಕೂಡದು. ಮೀನು ತಿಂದ ತಕ್ಷಣ ನಿಮಗೆ ನೀರಾದ ಮಲವಿಸರ್ಜನೆ ಆರಂಭವಾದಲ್ಲಿ ತಕ್ಷಣ ವೈದ್ಯರನ್ನು ಕಾಣಬೇಕು.

ಕಾಲರಾ ಔಷಧಗಳಿಂದ ಗುಣಪಡಿಸಬಲ್ಲ ಕಾಯಿಲೆಯಾಗಿದೆ. ಆದರೆ ಬಹಳ ಬೇಗನೆ ಶರೀರ ಡಿ ಹೈಡ್ರೇಶನ್ ಆಗುವುದರಿಂದ ತಕ್ಷಣ ಚಿಕಿತ್ಸೆ ಆರಂಭಿಸಬೇಕಾಗುತ್ತದೆ. ಡಿಹೈಡ್ರೇಶನ್ ತಡೆಗೆ ಬಾಯಿಯ ಮೂಲಕ ಅಥವಾ ಸಲೈನ್ ಮೂಲಕ ದೇಹಕ್ಕೆ ಅಗತ್ಯ ದ್ರಾವಣ ನೀಡಲಾಗುತ್ತದೆ. ಸೌಮ್ಯ ಪ್ರಕರಣಗಳಲ್ಲಿ ಆ್ಯಂಟಿಬಯಾಟಿಕ್ಸ್​ಗಳನ್ನು ಬಳಸುವುದಿಲ್ಲ. ಆದರೂ ರೋಗಿಗೆ ಆ್ಯಂಟಿ ಬಯಾಟಿಕ್ಸ್​ ನೀಡುವುದರಿಂದ ಬ್ಯಾಕ್ಟೀರಿಯಾಗಳು ನಾಶವಾಗಿ ರೋಗಿಯ ಮಲದ ಮೂಲಕ ಹರಡುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.