ETV Bharat / bharat

ದೇವಾಲಯಗಳ ಮೇಲಿನ ದಾಳಿಗಳನ್ನು ಖಂಡಿಸಿದ ವಿಶ್ವ ಹಿಂದೂ ಪರಿಷತ್ - ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂಡೆ

2020ರ ಅಕ್ಟೋಬರ್‌ನಲ್ಲಿ ಪೂರ್ವ ಗೋದಾವರಿಯ ಅಂತ್ರಾವೇದಿಯಲ್ಲಿ ದುಷ್ಕರ್ಮಿಗಳು ದೇವಾಲಯ ರಥವನ್ನು ಸುಟ್ಟು ಹಾಕಿರುವುದು ಸೇರಿದಂತೆ ಇಂತಹ ಅನೇಕ ಘಟನೆಗಳು ನಡೆದಿವೆಯೆಂದು ಅಸಮಾಧಾನ ಹೊರ ಹಾಕಿದ್ದಾರೆ..

VHP condemns vandalising of idols at Ramateertham temple
ದೇವಾಲಯಗಳ ಮೇಲಿನ ದಾಳಿಗಳನ್ನು ಖಂಡಿಸಿದ ವಿಶ್ವ ಹಿಂದೂ ಪರಿಷತ್
author img

By

Published : Jan 3, 2021, 7:30 AM IST

ನವದೆಹಲಿ : 2020 ಡಿಸೆಂಬರ್ 28 ಮತ್ತು 29ರ ಮಧ್ಯರಾತ್ರಿ ಆಂಧ್ರಪ್ರದೇಶದ ರಾಮತೀರ್ಥಂ ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಿರುವುದನ್ನು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಖಂಡಿಸಿದೆ.

ವಿಹೆಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂಡೆ ಈ ಕುರಿತು ಪ್ರತಿಕ್ರಿಯಿಸಿ, ಕಳೆದೆರಡು ದಿನಗಳಲ್ಲಿ ಆಂಧ್ರಪ್ರದೇಶದ ಇನ್ನೂ ಮೂರು ದೇವಾಲಯದ ಮೇಲೆ ದಾಳಿ ನಡೆದಿವೆ. 2020ರ ಅಕ್ಟೋಬರ್‌ನಲ್ಲಿ ಪೂರ್ವ ಗೋದಾವರಿಯ ಅಂತ್ರಾವೇದಿಯಲ್ಲಿ ದುಷ್ಕರ್ಮಿಗಳು ದೇವಾಲಯ ರಥವನ್ನು ಸುಟ್ಟು ಹಾಕಿರುವುದು ಸೇರಿದಂತೆ ಇಂತಹ ಅನೇಕ ಘಟನೆಗಳು ನಡೆದಿವೆಯೆಂದು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ, ಜಗನ್​ ಮೋಹನ್​​ ರೆಡ್ಡಿ ನೇತೃತ್ವದ ಸರ್ಕಾರವನ್ನು ದೂಷಿಸಿದರು.

ಈ ಸುದ್ದಿಯನ್ನೂ ಓದಿ: ಸಚಿವೆ ಸೃತಿ ಇರಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಶೂಟರ್​ ವರ್ತಿಕಾ ಸಿಂಗ್

ಅಪರಾಧಿಗಳ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮಕೈಗೊಳ್ಳಬೇಕು. ಮತ್ತು ಎಲ್ಲಾ ದೇವಾಲಯಗಳಿಗೆ, ವಿಶೇಷವಾಗಿ ರಾಜ್ಯ ಸರ್ಕಾರದ ನಿಯಂತ್ರಿತ ದತ್ತಿ ಮಂಡಳಿಯಡಿಯಲ್ಲಿ ಬರುವ ದೇವಾಲಯಗಳಿಗೆ ಸರಿಯಾದ ಭದ್ರತಾ ಕ್ರಮಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.

ದೇವಾಲಯಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರವು "ಅಸಮರ್ಥ ಮತ್ತು ಇಷ್ಟವಿಲ್ಲ" ಎಂದು ತೋರುತ್ತಿರುವಂತಿದೆ. ಹಾಗಾಗಿ, ಈ ದೌರ್ಜನ್ಯಗಳ ವಿರುದ್ಧ ಸಾರ್ವಜನಿಕ ಆಂದೋಲನಕ್ಕೆ ಕರೆ ನೀಡುವುದನ್ನು ಬಿಟ್ಟು ನಮಗೆ ಬೇರೆ ಮಾರ್ಗಗಳಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.