ETV Bharat / bharat

ಉತ್ತರಾಖಂಡ್​​ನಲ್ಲಿ ಮೇಘ ಸ್ಫೋಟ: ಮೂವರು ಬಲಿ, 11ಮಂದಿ ನಾಪತ್ತೆ - ಪಿಥೋರಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿ ಕೆ ಜೋಗ್ದಾಂಡೆ

ಉತ್ತರಾಖಂಡ್​ನಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಮೂವರು ಬಲಿಯಾಗಿದ್ದಾರೆ. ಮನೆಗಳು ಕುಸಿದು ಬಿದ್ದಿದ್ದು, 11 ಜನರು ನಾಪತ್ತೆಯಾಗಿದ್ದಾರೆ.

Uttarakhand cloud burst
ಮೇಘ ಸ್ಫೋಟ
author img

By

Published : Jul 20, 2020, 11:55 AM IST

ಉತ್ತರಾಖಂಡ: ಮೇಘ ಸ್ಫೋಟಗೊಂಡು ಮೂವರು ಮೃತಪಟ್ಟಿದ್ದು, 11 ಮಂದಿ ನಾಪತ್ತೆಯಾಗಿರುವ ಘಟನೆ ಉತ್ತರಾಖಂಡ್​ನ ಪಿಥೋರಗರ್​ ಜಿಲ್ಲೆಯ ಮ್ಯಾಡ್ಕೋಟ್ ಎಂಬ ಗ್ರಾಮದಲ್ಲಿ ನಡೆದಿದೆ.

ಜಿಲ್ಲಾಡಳಿತದ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ತಂಡ ಸೇರಿದಂತೆ ಇತರ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪಿಥೋರಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿ.ಕೆ.ಜೋಗ್ದಾಂಡೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಮೂವರು ಬಲಿಯಾಗಿದ್ದಾರೆ. ಐದು ಮನೆಗಳು ಕುಸಿದು ಬಿದ್ದಿವೆ. 11 ಜನರು ಕಾಣೆಯಾಗಿದ್ದಾರೆ. ರಸ್ತೆ ಸಂಪರ್ಕ ಕಡಿತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಮೊಬೈಲ್ ನೆಟ್‌ವರ್ಕ್‌ ಮತ್ತು ಟೆಲಿಕಾಂ ಸೇವೆಗಳ ಮೇಲೂ ಪರಿಣಾಮ ಬೀರಿದೆ ಎಂದು ಜೋಗ್ದಾಂಡೆ ಹೇಳಿದ್ದಾರೆ.

2013ರಲ್ಲಿ ಮೇಘ ಸ್ಫೋಟಗೊಂಡು ಪ್ರವಾಹ -ಭೂ ಕುಸಿತ ಸಂಭವಿಸಿ ಉತ್ತರಾಖಂಡ್​ನಲ್ಲಿ 1000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.