ETV Bharat / bharat

ಜೌನ್​ಪುರದಲ್ಲಿ ಗುಂಪು ಘರ್ಷಣೆ : ಆರು ಜನರ ಬಂಧನ - ಗುಂಪು ಘರ್ಷಣೆ ಸಂಬಂಧಪಟ್ಟಂತೆ ಆರು ಜನರ ಬಂಧನ

ಉತ್ತರಪ್ರದೇಶ ಜೌನ್‌ಪುರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ಆರು ಜನರನ್ನು ಬಂಧಿಸಲಾಗಿದೆ.

Uttar Pradesh: Six detained as two groups resort to stone pelting over land dispute
ಉತ್ತರ ಪ್ರದೇಶದ ಜೌನ್​ಪುರದಲ್ಲಿ ಗುಂಪು ಘರ್ಷಣೆ
author img

By

Published : Jun 12, 2020, 1:54 PM IST

ಜೌನ್‌ಪುರ : ಭೂ ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಹಲವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸೋನಾರಿ ಮತ್ತು ಅಮ್ರಾ ಗ್ರಾಮದ ಎರಡು ಗುಂಪುಗಳ ನಡುವೆ ಭೂಮಿಯನ್ನು ಹಂಚಿಕೊಳ್ಳುವ ಕುರಿತು ಹಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳಿದ್ದವು. ಶುಕ್ರವಾರ ಅಮ್ರಾ ಗ್ರಾಮದ ಒಂದು ಗುಂಪು ಸೋನಾರಿ ಗ್ರಾಮದ ಕಡೆ ತೆರಳುವಾಗ ಇದೇ ವಿಷಯದಲ್ಲಿ ಘರ್ಷಣೆ ನಡೆದಿದ್ದು, ಎರಡು ಗುಂಪುಗಳ ಜನರು ಪರಸ್ಪರ ಕಲ್ಲು ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಕನಿಷ್ಠ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.