ಲಖನೌ: ಬುಧವಾರದಿಂದಲೇ ಜಾರಿಗೆ ಬರುವಂತೆ ಉತ್ತರ ಪ್ರದೇಶ ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿದೆ. ಬಾಟಲ್ನ ಸೈಜ್ ಹಾಗೂ ಮದ್ಯದ ವರ್ಗ ಆಧರಿಸಿ 5 ರೂಪಾಯಿಯಿಂದ 400 ರೂಪಾಯಿಗಳಷ್ಟು ಬೆಲೆ ಹೆಚ್ಚಿಸಲಾಗಿದೆ.
ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮದ್ಯದ ಬೆಲೆ ಹೆಚ್ಚಳ ನಿರ್ಧಾರ ಕೈಗೊಳ್ಳಲಾಯಿತು. ದರ ಹೆಚ್ಚಳದಿಂದ 2020-21ನೇ ಸಾಲಿನಲ್ಲಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 2,350 ಕೋಟಿ ರೂಪಾಯಿ ಆದಾಯ ಹರಿದು ಬರುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವ ಸುರೇಶ ಖನ್ನಾ ತಿಳಿಸಿದರು.
"65 ರೂಪಾಯಿ ಬೆಲೆಯ ಬಾಟಲ್ ಮದ್ಯ ಇನ್ನು 70 ರೂ.ಗೆ ಸಿಗಲಿದೆ. ಅದೇ ರೀತಿ 75 ರೂ. ಬೆಲೆಯ ಮದ್ಯ ಇನ್ನು 80 ರೂ.ಗೆ ದೊರಕಲಿದೆ" ಎಂದು ಅವರು ಹೇಳಿದರು.
ಬೆಲೆ ಹೆಚ್ಚಳವನ್ನು ಕ್ವಾರ್ಟರ್ ಲೆಕ್ಕದಲ್ಲಿ (180 ಮಿಲೀ) ನೋಡುವುದಾದರೆ, ಕಡಿಮೆ ಬೆಲೆಯ ಕ್ವಾರ್ಟರ್ ಬಾಟಲಿ ಬೆಲೆ 10 ರೂ. ಹಾಗೂ 180 ಮಿಲೀ ನಿಂದ 500 ಮಿಲೀ ಬಾಟಲ್ ಮದ್ಯದ ಬೆಲೆ 20 ರೂ.ಗಳವರೆಗೆ ಹೆಚ್ಚಾಗಲಿದೆ.