ಈಟಾ, (ಉತ್ತರ ಪ್ರದೇಶ): ಕಂಠಪೂರ್ತಿ ಕುಡಿದಿದ್ದವನೊಬ್ಬ ನಾಗರಹಾವೊಂದನ್ನ ಹಲ್ಲಿನಿಂದ ಕಚ್ಚಿ ಮೂರು ತುಂಡಾಗಿಸಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಈಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಮಲಗಿದ್ದ ಕುಡುಕನನ್ನೇ ಕಚ್ಚಿಬಿಟ್ಟಿತು ನಾಗರಹಾವು!
ಜುಲೈ 28ರಂದು ರಾಜಕುಮಾರ್ ಎಂಬಾತ ಯದ್ವಾತದ್ವಾ ಕುಡಿದಿದ್ದ, ನಿಲ್ಲೋದಕ್ಕೂ ಆಗ್ತಿರಲಿಲ್ಲ. ಅದೇ ಟೈಮ್‌ಗೆ ರಾತ್ರಿ ವೇಳೆ ನಾಗರಹಾವೊಂದು ಮನೆಯೊಳಕ್ಕೆ ಎಂಟ್ರಿ ಕೊಟ್ಟಿತ್ತು. ಮಲಗಿದ್ದ ರಾಜುಕುಮಾರ್‌ನ ಕಚ್ಚಿತ್ತು. ಸಿಟ್ಟು ತಡೆಯಲಾರದೆ ತನ್ನ ಕಚ್ಚಿದ ಹಾವನ್ನೇ ಹಿಡಿದು ಹಲ್ಲಿನಿಂದ ಕಚ್ಚಿ ಕೊಂದುಬಿಟ್ಟಿದ್ದ. ಹಾವು ಮೂರು ಪೀಸ್ ಆಗ್ಬಿಡ್ತು. ಹಾವು ಕಚ್ಚಿದ್ದಕ್ಕಿಂತ ಈತ ಹಾವನ್ನ ಕಚ್ಚಿದ್ದಕ್ಕೆ ವಿಷ ಏರಿತ್ತು. ಆತನ ತಂದೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಬಳಿ ಕುಡುಕನ ತಂದೆ ಎಲ್ಲವನ್ನೂ ವಿವರಿಸಿದ್ದರು.
'ನನ್ನ ಮಗ ಮದ್ಯ ಸೇವಿಸಿದ್ದ. ಆಗ ಮನೆಯೊಳಗೆ ನಾಗರ ಎಂಟ್ರಿ ಕೊಟ್ಟಿತ್ತು. ಮಲಗಿದ್ದ ಮಗನನ್ನ ಕಚ್ಚಿತ್ತು. ಪ್ರತೀಕಾರ ತೀರಿಸಿಕೊಳ್ಳಲೆಂದು ನನ್ನ ಮಗನೂ ಕೂಡ ಹಾವನ್ನು ಕಚ್ಚಿದ. ಆತನ ಸ್ಥಿತಿ ಚಿಂತಾಜನಕವಾಗಿದೆ. ಮಗನ ಚಿಕಿತ್ಸೆಗಾಗಿ ತಗಲುವ ವೆಚ್ಚ ಭರಿಸೋ ಶಕ್ತಿ ತಮಗಿಲ್ಲ ಅಂತಾ ತಂದೆ ಬಾಬು ರಾಮ್ ನೋವು ತೋಡಿಕೊಂಡಿದ್ದಾರೆ.
ಚಿಂತಾಜನಕ ಸ್ಥಿತಿಯಲ್ಲಿರುವ ಹಾವು ಕಚ್ಚಿದ ಕುಡುಕ!
ರೋಗಿಯನ್ನ ನನ್ನ ಬಳಿ ಕರೆದುಕೊಂಡು ಬಂದರು. ಆತ ಹಾವನ್ನು ಕಚ್ಚಿರೋದಾಗಿ ಹೇಳಿದರು. ನಾನು ಆತನಿಗೆ ಹಾವಷ್ಟೇ ಕಚ್ಚಿದೆ ಅಂತಾ ತಪ್ಪು ತಿಳಿದುಕೊಂಡಿದ್ದೆ. ಆತನ ಸ್ಥಿತಿ ಚಿಂತಾಜನಕವಾಗಿದೆ. ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿರುವೆ ಅಂತಾ ರಾಜಕುಮಾರ್‌ಗೆ ಚಿಕಿತ್ಸೆ ನೀಡಿರುವ ವೈದ್ಯರು ಹೇಳಿದ್ದಾರೆ. ಈಗಾಗಲೇ ರಾಮಕುಮಾರ್‌ನ ಕುಟುಂಬ ಸದಸ್ಯರು ಹಾವನ್ನು ಸುಟ್ಟು ಹಾಕಿದ್ದಾರೆ.