ETV Bharat / bharat

ಅಮೆರಿಕದಲ್ಲಿ 24 ಗಂಟೆಗಳಲ್ಲಿ 1,738 ಸಾವು: ಇದು ವೈರಸ್​ ಅಲ್ಲ, ದಾಳಿಯೆಂದ ಟ್ರಂಪ್

ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 1,738 ಜನರು ಕೊರೊನಾ ವೈರಸ್​ನಿಂದಾಗಿ ಸಾವನ್ನಪ್ಪಿದ್ದಾರೆ. ಇನ್ನು ದೇಶದಲ್ಲಿ ಕೋವಿಡ್ 19ನಿಂದಾಗಿ ಈವರೆಗೆ 47,681 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 8,49,092ಕ್ಕೆ ಏರಿಕೆಯಾಗಿದೆ.

US sees 1,738 new coronavirus
ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್
author img

By

Published : Apr 23, 2020, 10:52 AM IST

ವಾಷಿಂಗ್​ಟನ್: ಅಮೆರಿಕದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ಮುಂದುವರೆಸಿದ್ದು, ಕಳೆದ 24 ಗಂಟೆಗಳಲ್ಲಿ 1,738 ಜನರು ಸಾವನ್ನಪ್ಪಿರುವುದಾಗಿ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ಇನ್ನು ದೇಶದಲ್ಲಿ ಇದುವರೆಗೆ ಕೋವಿಡ್ 19ನಿಂದಾಗಿ 47,681 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 8,49,092ಕ್ಕೆ ಏರಿಕೆಯಾಗಿದೆ.ಈ ಪೈಕಿ 84,050 ಜನರು ಗುಣ ಮುಖರಾಗಿದ್ದಾರೆ.

ಇನ್ನು ಕೊರೊನಾ ವೈರಸ್​​ನಿಂದಾಗಿ ಅಮೆರಿಕ ಸಾಮಾನ್ಯ ಸ್ಥಿತಿಗೆ ಬರಲು ಹೆಣಗಾಡುವಂತಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಚೀನಾ ಸೇರಿದಂತೆ ಎಲ್ಲಾ ದೇಶಗಳಿಗಿಂತಲೂ ಸದೃಢ ಆರ್ಥಿಕತೆಯಿಂದ ಕೂಡಿದ್ದ ಅಮೆರಿಕ, 1917ರ ಬಳಿಕ ಮೊದಲ ಬಾರಿಗೆ ಈ ರೀತಿಯ ಸಂಕಷ್ಟ ಎದುರಿಸುವಂತಾಗಿದೆ ಎಂದು ತಿಳಿಸಿದ್ದಾರೆ. ಇದು ಕೇವಲ ಒಂದು ವೈರಸ್​​ ಜ್ವರವಲ್ಲ ನಮ್ಮ ಮೇಲೆ "ದಾಳಿ" ಮಾಡಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.