ETV Bharat / bharat

ಭಾರತಕ್ಕೆ 155 ಮಿ. ಡಾಲರ್ ಮೌಲ್ಯದ ಮಿಲಿಟರಿ ಸಾಧನಗಳ ಮಾರಾಟಕ್ಕೆ ಅಮೆರಿಕ ಅಸ್ತು

10 ಎಜಿಎಂ -84 ಎಲ್ ಹಾರ್ಪೂನ್ ಬ್ಲಾಕ್ II ವಾಯು-ಉಡಾವಣಾ ಕ್ಷಿಪಣಿಗಳ ಮಾರಾಟಕ್ಕೆ 92 ಮಿಲಿಯನ್ ಯುಎಸ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ 16 ಎಂಕೆ 54 ಆಲ್ ಅಪ್ ರೌಂಡ್​ ಟಾರ್ಪಿಡೊಗಳು ಮತ್ತು ಮೂರು ಎಂಕೆ 54 ಎಕ್ಸಸೈಝ್ ಟಾರ್ಪಿಡೊಗಳಿಗೆ 63 ಮಿಲಿಯನ್ ಯುಎಸ್ ಡಾಲರ್ ವೆಚ್ಚವಾಗಲಿದೆ ಎಂದು ಅಮೆರಿಕದ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ತಿಳಿಸಿದೆ.

anti-ship missiles
ಮಿಲಿಟರಿ ಸಾಧನ
author img

By

Published : Apr 14, 2020, 7:27 PM IST

ವಾಷಿಂಗ್ಟನ್: ಪ್ರಾದೇಶಿಕ ಬೆದರಿಕೆಗಳ ವಿರುದ್ಧ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ತನ್ನ ತಾಯ್ನಾಡಿನ ರಕ್ಷಣೆಯನ್ನು ಹೆಚ್ಚಿಸಲು 155 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಹಾರ್ಪೂನ್ ವಾಯು-ಉಡಾವಣಾ ಹಡಗು ವಿರೋಧಿ ಕ್ಷಿಪಣಿಗಳು ಮತ್ತು ಮಾರ್ಕ್ 54 ಹಗುರವಾದ ಟಾರ್ಪಿಡೊಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ನಿರ್ಧಸಿದೆ.

2016 ರಲ್ಲಿ ಅಮೆರಿಕವು ಭಾರತವನ್ನು 'ಪ್ರಮುಖ ರಕ್ಷಣಾ ಪಾಲುದಾರ' ಎಂದು ಗುರುತಿಸಿದೆ. ಈ ಅಂಕಿತನಾಮವು ಅಮೆರಿಕದ ಹತ್ತಿರದ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಸಮನಾಗಿ ಅಮೆರಿಕದಿಂದ ಹೆಚ್ಚು ಸುಧಾರಿತ ಮತ್ತು ಸೂಕ್ಷ್ಮ ತಂತ್ರಜ್ಞಾನಗಳನ್ನು ಖರೀದಿಸಲು ಭಾರತಕ್ಕೆ ಅನುಮತಿ ನೀಡುತ್ತದೆ.

10 ಎಜಿಎಂ -84 ಎಲ್ ಹಾರ್ಪೂನ್ ಬ್ಲಾಕ್ II ವಾಯು-ಉಡಾವಣಾ ಕ್ಷಿಪಣಿಗಳ ಮಾರಾಟಕ್ಕೆ 92 ಮಿಲಿಯನ್ ಯುಎಸ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ 16 ಎಂಕೆ 54 ಆಲ್ ಅಪ್ ರೌಂಡ್​ ಟಾರ್ಪಿಡೊಗಳು ಮತ್ತು ಮೂರು ಎಂಕೆ 54 ಎಕ್ಸಸೈಝ್ ಟಾರ್ಪಿಡೊಗಳಿಗೆ 63 ಮಿಲಿಯನ್ ಯುಎಸ್ ಡಾಲರ್ ವೆಚ್ಚವಾಗಲಿದೆ ಎಂದು ಅಮೆರಿಕದ ರಕ್ಷಣಾ ಭದ್ರತಾ ಸ ಹಕಾರ ಸಂಸ್ಥೆ ತಿಳಿಸಿದೆ.

ಭಾರತ ಸರ್ಕಾರವು ಈ ಎರಡು ಮಿಲಿಟರಿ ಯಂತ್ರಗಳನ್ನು ಪೂರೈಸುವಂತೆ ಮಾಡಿದ ಕೋರಿಕೆಯ ಮೇರೆಗೆ ಯುಎಸ್ ಸ್ಟೇಟ್ ಡಿಪಾರ್ಟ್​ಮೆಂಟ್ ಈ ನಿರ್ಣಯಕ್ಕೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.