ಹೈದರಾಬಾದ್ : ವೈದ್ಯರು ಮತ್ತು ದಾದಿಯರ ಮುಖದ ಮೇಲೆ ಸಣ್ಣ ತರಚು ಗಾಯಗಳ ಹೃದಯ ಕದಡುವ ಚಿತ್ರಗಳನ್ನು ನಾವೆಲ್ಲರೂ ನೋಡಿದ್ದೇವೆ. ಇವುಗಳೆಲ್ಲವೂ ಯಾವುದೇ ಜಗಳ, ಹೊಡೆದಾಟದಿಂದ ಉಂಟಾದ ಗಾಯಗಳಲ್ಲ. ಯಾವಾಗಲೂ ಸುರಕ್ಷತಾ ಸಾಧನಗಳನ್ನು ಧರಿಸುವುದರಿಂದ ಆಗಿರುವಂಥವು. ವಿಶೇಷವಾಗಿ ದೀರ್ಘಕಾಲದವರೆಗೆ N95 ಫೇಸ್ ಮಾಸ್ಕುಗಳನ್ನು ಧರಿಸುವುದರಿಂದ ಮುಖದ ಮೇಲೆ ಇಂತಹ ಗಾಯಗಳು ಉಂಟಾಗುತ್ತದೆ.
ದೀರ್ಘಕಾಲದವರೆಗೆ ಫೇಸ್ ಮಾಸ್ಕ್ ಧರಿಸುವ ಅಪಾಯದ ಬಗ್ಗೆ ಚರ್ಮ ಸೋಂಕಿನ ತಜ್ಞರು ಎಚ್ಚರಿಸುತ್ತಿದ್ದಾರೆ. ಜೊತೆಗೆ ಈ ಗಾಯಗಳನ್ನು ಗುಣಪಡಿಸಲು ಪರಿಹಾರಗಳನ್ನೂ ನೀಡುತ್ತಾರೆ. ಅಧ್ಯಯನದ ಆವಿಷ್ಕಾರಗಳನ್ನು ಜರ್ನಲ್ ಆಫ್ ವೌಂಡ್ ಕೇರ್ನಲ್ಲಿ ಪ್ರಕಟಿಸಲಾಗಿದೆ. ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಮುಂಚೂಣಿಯಲ್ಲಿ ಕೆಲಸ ಮಾಡುವ ವಿಶ್ವದ ಆರೋಗ್ಯ ಕಾರ್ಯಕರ್ತರು ಫೇಸ್ ಮಾಸ್ಕ್ ಧರಿಸಿ ಹೆಚ್ಚು ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಅನೇಕ ಸಾಮಾನ್ಯ ಸಾರ್ವಜನಿಕರು ಕೂಡ ಅದೇ ರೀತಿ ಮಾಡುತ್ತಿದ್ದಾರೆ. ಫೇಸ್ ಮಾಸ್ಕ್ ನಮಗೆ ಆರೋಗ್ಯ ರಕ್ಷಣೆಯನ್ನು ನೀಡುತ್ತದೆಯಾದರೂ, ಬೆವರುವಿಕೆ ಮತ್ತು ಫೇಸ್ ಮಾಸ್ಕ್ ಮೂಗಿಗೆ ಉಜ್ಜುವ ಮೂಲಕ ಚರ್ಮದ ಹಾನಿಗೆ ಕಾರಣವಾಗುತ್ತದೆ. ಹಡ್ಡರ್ಸ್‌ಫೀಲ್ಡ್ ವಿಶ್ವವಿದ್ಯಾಲಯದ ಚರ್ಮ ತಜ್ಞರು ಫೇಸ್ ಮಾಸ್ಕ್ನಿಂದಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ, ಮತ್ತು ಪರಿಹಾರಗಳನ್ನೂ ಸೂಚಿಸಿದ್ದಾರೆ.
ಮುಖದ ಮಾಸ್ಕುಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವೈದ್ಯಕೀಯ ಸಾಧನಗಳಿಂದ ಉಂಟಾಗುವ ಒತ್ತಡದ ಹಾನಿಯ ಬಗ್ಗೆ ವಿವರವಾದ ಸಂಶೋಧನೆ ನಡೆಸಿದ ತಂಡದ ಭಾಗವಾಗಿದ್ದ ಚರ್ಮದ ದೃಢತೆ ಮತ್ತು ಸೋಂಕು ತಡೆಗಟ್ಟುವಿಕೆಯ ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊಫೆಸರ್ ಕರೆನ್ ಔಸ್ಸಿ ಅವರ ಸಂಶೋಧನೆಗಳು ಮತ್ತು ಶಿಫಾರಸುಗಳನ್ನು ಫೆಬ್ರವರಿಯಲ್ಲಿ ಪ್ರಕಟಿಸಲಾಯಿತು.
ಆರೋಗ್ಯ ವೃತ್ತಿಪರರು ಮಾಸ್ಕ್ಗಳನ್ನು ಬಹಳ ಸಮಯದವರೆಗೆ ಧರಿಸುತ್ತಾರೆ. ಈಗಿನ ಈ ಪರಿಸ್ಥಿತಿಯಲ್ಲಿ ಮಾಸ್ಕ್‌ಗಳಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಬಹಳ ಗಂಭೀರವಾದ ವಿಷಯ. "ಮಾಸ್ಕ್ ಧರಿಸಿದವರು ಮಾಸ್ಕಿನ ಕೆಳಗೆ ಬೆವರುತ್ತಾರೆ, ಮತ್ತು ಇದು ಘರ್ಷಣೆಗೆ ಕಾರಣವಾಗುತ್ತದೆ, ಇದು ಮೂಗು ಮತ್ತು ಕೆನ್ನೆಗಳ ಮೇಲಿನ ಚರ್ಮವನ್ನು ಹಾನಿಗೊಳಿಸುತ್ತದೆ" ಎಂದು ಪ್ರೊಫೆಸರ್ ಔಸೆ ಹೇಳಿದ್ದಾರೆ. "ಇದರ ಪರಿಣಾಮವಾಗಿ ಚರ್ಮ ಹರಿದು ಗಾಯ ಉಂಟಾಗಬಹುದು ಮತ್ತು ಇವು ಸಂಭಾವ್ಯ ಸೋಂಕಿಗೆ ಕಾರಣವಾಗಬಹುದು" ಎಂಬುದು ಪ್ರೊ. ಔಸೆ ಅವರ ಅಭಿಪ್ರಾಯ. ಪ್ರತಿ ಎರಡು ಗಂಟೆಗಳಿಗೊಮ್ಮೆ ಮಾಸ್ಕಿನಿಂದಾಗುವ ಒತ್ತಡವನ್ನು ನಿವಾರಿಸಬೇಕೆಂದು ನಾವು ಸೂಚಿಸುತ್ತೇವೆ. ಆದ್ದರಿಂದ ನೀವು ರೋಗಿಯಿಂದ ದೂರವಿರಿ, ಸುರಕ್ಷಿತ ಸ್ಥಳದಲ್ಲಿ ಮಾಸ್ಕನ್ನು ತೆಗೆದು ಚರ್ಮವನ್ನು ಸ್ವಚ್ಛಗೊಳಿಸಿ ಮತ್ತೆ ಮಾಸ್ಕ್ ಧರಿಸಿ." ಅಂತ ಪ್ರೊಫೆಸರ್ ಔಸೆ ಸಲಹೆ ನೀಡುತ್ತಾರೆ.
ಅಂಗಡಿ ಕೆಲಸಗಾರರಂತಹವರು ತಮ್ಮ ಚರ್ಮವನ್ನು ಸ್ವಚ್ಛವಾಗಿ, ಶುಷ್ಕವಾಗಿ ಮತ್ತು ಬೆವರಿನಿಂದ ಮುಕ್ತವಾಗಿಡಲು ಧರಿಸುವ ಮಾಸ್ಕ್ಗಳಿಂದಾಗಿ ಆಗಾಗ ತೊಂದರೆ ಅನುಭವಿಸುತ್ತಿದ್ದರೆ ಅವುಗಳನ್ನು ಸಾಧ್ಯವಾದಷ್ಟು ಬೇಗ ತೆಗೆದುಹಾಕಿದರೆ ಒಳ್ಳೆಯದು ಎಂಬುದು ಪ್ರೊ. ಔಸೆ ಅಭಿಪ್ರಾಯ.