ETV Bharat / bharat

ಈದ್ಗಾ ಮೈದಾನದ ಬಳಿ ಮುಸ್ಲಿಂ ಕಾನ್ಸ್​ಟೆಬಲ್- ಹಿಂದೂ ಇನ್ಸ್​ಪೆಕ್ಟರ್ ಪ್ರಾರ್ಥನೆ: ನೆಟ್ಟಿಗರು ಫಿದಾ - ಕೋಮು ಸೌಹಾರ್ದತೆ ಚಿತ್ರ ವೈರಲ್

ಉತ್ತರ ಪ್ರದೇಶದ ಪೊಲೀಸ್ ಕಾನ್ಸ್​​ಟೆಬಲ್ ಮತ್ತು ಇನ್ಸ್‌ಪೆಕ್ಟರ್ ವಿಭಿನ್ನ ಸಮುದಾಯವಕ್ಕೆ ಸೇರಿದ್ದರೂ ಕೋಮು ಸೌಹಾರ್ದತೆ ಸಾರಿ ಇತರರಿಗೆ ಮಾದರಿಯಾಗಿದ್ದಾರೆ. ಈ ಇಬ್ಬರು ಪ್ರಾರ್ಥನೆ ಸಲ್ಲಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Cops join in prayers
ಕೋಮು ಸೌಹಾರ್ದತೆ
author img

By

Published : May 26, 2020, 6:57 PM IST

Updated : May 26, 2020, 8:02 PM IST

ಅಮ್ರೋಹಾ(ಉತ್ತರ ಪ್ರದೇಶ): ಕೋಮು ಸೌಹಾರ್ದತೆಯ ಅಪರೂಪದ ದೃಶ್ಯವೆಂಬಂತೆ ಉತ್ತರ ಪ್ರದೇಶದ ಪೊಲೀಸ್ ಕಾನ್ಸ್​ಟೆಬಲ್ ಮತ್ತು ಇನ್ಸ್‌ಪೆಕ್ಟರ್ ಇಬ್ಬರೂ ಎರಡು ವಿಭಿನ್ನ ಸಮುದಾಯಕ್ಕೆ ಸೇರಿದ್ರೂ ಸೇರಿ ಒಟ್ಟಿಗೇ ಪ್ರಾರ್ಥನೆ ಮಾಡುತ್ತಿರುವ ದೃಶ್ಯವು ಜಾಲತಾಣದಲ್ಲಿ ವೈರಲ್ ಆಗಿದೆ.

ಹಸನ್​ಪುರ ಪ್ರದೇಶದ ಈದ್ಗಾ ಮೈದಾನದಲ್ಲಿ ಕಾನ್ಸ್​​ಟೆಬಲ್ ಅಸ್ಗರ್ ಖಾನ್ ನಮಾಜ್ ಮಾಡುತ್ತಿರುವಾಗ ಇನ್ಸ್​ಪೆಕ್ಟರ್ ಆರ್.ಪಿ. ಶರ್ಮಾ ಅವರು ಹತ್ತಿರ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈದ್ ಹಬ್ಬದಂದು ಅಮ್ರೋಹಾದ ಹಸನ್ಪುರ ಪಟ್ಟಣದಲ್ಲಿ ಚಿತ್ರವನ್ನು ಕ್ಲಿಕ್ ಮಾಡಲಾಗಿದೆ.

ಪೊಲೀಸ್ ಕಾನ್ಸ್​ಟೆಬಲ್-ಇನ್ಸ್​ಪೆಕ್ಟರ್​ ಕೋಮು ಸೌಹಾರ್ದತೆ

ಈದ್ ನಮಾಜ್​‌ಗೆ ಯಾವುದೇ ಜನರು ಸೇರದಂತೆ ತಡೆಯಲು ಕಾನ್ಸ್​ಟೆಬಲ್ ಅಸ್ಗರ್ ಖಾನ್ ಅವರನ್ನು ಈದ್ಗಾದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಎಲ್ಲರೂ ತಮ್ಮ ಮನೆಗಳಲ್ಲಿಯೇ ಪ್ರಾರ್ಥಿಸುವಂತೆ ಮನವಿ ಮಾಡಿದ ಅವರು, ತಾವಿದ್ದ ಕರ್ತವ್ಯದ ಸ್ಥಳದಲ್ಲೇ ನಮಾಜ್​ ಮಾಡಿದರು.

ಈ ಮಧ್ಯೆ ಅಲ್ಲಿಗೆ ಆಗಮಿಸಿದ ಹಸನ್‌ಪುರ ಇನ್ಸ್​ಪೆಕ್ಟರ್ ​ಆರ್.ಪಿ. ಶರ್ಮಾ ಅವರು ಹತ್ತಿರದಲ್ಲೇ ನಿಂತು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ದೃಶ್ಯವನ್ನು ದಾರಿಹೋಕರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಕರ್ತವ್ಯದ ಇದ್ದುದರಿಂದ ಪ್ರಾರ್ಥನೆ ವಿಳಂಬವಾದ ಕಾರಣ ಕಾನ್ಸ್​ಟೆಬಲ್​ ಅಲ್ಲೇ ನಮಾಜ್ ಮಾಡಲು ನಿರ್ಧರಿಸಿದರು. ಎಲ್ಲಾ ಭಾರತೀಯರ ಒಳಿತಿಗಾಗಿ ಅವರು ಪ್ರಾರ್ಥಿಸುವುದನ್ನು ನೋಡಿ, ನಾನು ಅವರೊಂದಿಗೆ ಸೇರಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಇನ್ಸ್​ಪೆಕ್ಟರ್ ​ಆರ್.ಪಿ. ಶರ್ಮಾ ಹೇಳಿದ್ದಾರೆ.

ಪೊಲೀಸ್​ ಇಲಾಖೆಯ ಈ ಇಬ್ಬರು ಸಿಬ್ಬಂದಿಯ ಮಾದರಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗ್ತಿದೆ.

Last Updated : May 26, 2020, 8:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.