ETV Bharat / bharat

ಪೊಲೀಸಪ್ಪನ ಪೋಲಿಯಾಟ... ಠಾಣೆಗೆ ಬಂದ ಯುವತಿ ಎದುರೇ ಹಸ್ತಮೈಥುನ, ದೂರು ದಾಖಲು - ಹಸ್ತಮೈಥುನ

ಪೊಲೀಸ್​ ಠಾಣೆಗೆ ದೂರು ನೀಡಲು ಬಂದ ಮಹಿಳೆಯರ ಎದುರೇ ಪೊಲೀಸ್​ ಅಧಿಕಾರಿಯೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ನಡೆದಿದೆ.

UP cop masturbates before woman complainant

author img

By

Published : Jul 1, 2020, 9:10 PM IST

ದೇವಾರಿಯಾ(ಉತ್ತರಪ್ರದೇಶ): ದೂರು ನೀಡಲು ಠಾಣೆಗೆ ಬಂದ ಯುವತಿಯರ ಎದುರೇ ಪೊಲೀಸ್​ ಅಧಿಕಾರಿಯೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ನಡೆದಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲು ಮಾಡಿದ್ದಾಳೆ.

ಭೂಮಿ ವಿವಾದ ವಿಚಾರವಾಗಿ ದೂರು ದಾಖಲು ಮಾಡಲು ತಾಯಿ-ಮಗಳು ಪೊಲೀಸ್​ ಠಾಣೆಗೆ ಆಗಮಿಸಿದ್ದರು. ಈ ವೇಳೆ ಪೊಲೀಸ್​ ಅಧಿಕಾರಿ ಭೀಷ್ಮಪಾಲ್​​ ಸಿಂಹ ಹಸ್ತಮೈಥುನ ಮಾಡಿಕೊಂಡಿದ್ದು, ಅದರ ವಿಡಿಯೋ ಮೊಬೈಲ್​ನಲ್ಲಿ ಮಹಿಳೆ ಸೆರೆ ಹಿಡಿದಿದ್ದಾಳೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಈಗಾಗಲೇ ಆತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದ್ದು, ಪೊಲೀಸ್​ ಅಧಿಕಾರಿ ತಲೆಮರೆಸಿಕೊಂಡಿದ್ದಾನೆ. ಆತನ ಹುಡುಕಿಕೊಟ್ಟವರಿಗೆ 25 ಸಾವಿರ ರೂ ನಗದು ಬಹುಮಾನ ಸಹ ಘೋಷಣೆ ಮಾಡಲಾಗಿದೆ.

ಏನಿದು ಪ್ರಕರಣ!

ಜೂನ್​ 22ರಂದು ಭಟಾನಿ ಥಾಣೆ ಕ್ಷೇತ್ರದಲ್ಲಿ ವಾಸವಾಗಿದ್ದ ಇಬ್ಬರು ಮಹಿಳೆಯರು ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಠಾಣೆಗೆ ಆಗಮಿಸಿದ್ದರು. ಈ ವೇಳೆ ಠಾಣೆಯಲ್ಲಿ ಭೀಷ್ಮ ಪಾಲ್​​ ಸಿಂಹ ಠಾಣೆಯಲ್ಲಿದ್ದ. ಇವರ ಮುಂದೆ ಕುಳಿತುಕೊಂಡಿರುವ ಮಹಿಳೆಯರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಆರಂಭಿಸಿದ್ದಾರೆ. ಇದರ ಬಗ್ಗೆ ಗಮನಹರಿಸದ ಪೊಲೀಸ್​ ಅಧಿಕಾರಿ ಅಶ್ಲೀಲವಾಗಿ ನಡೆದುಕೊಳ್ಳಲು ಆರಂಭಿಸಿದ್ದು, ಅವರ ಮುಂದೆ ಹಸ್ತಮೈಥುನ ಮಾಡಿಕೊಳ್ಳಲು ಶುರುಮಾಡಿದ್ದಾನೆ. ಇದರ ವಿಡಿಯೋ ಮೊಬೈಲ್​ನಲ್ಲಿ ಮಹಿಳೆ ಸೆರೆ ಹಿಡಿದಿದ್ದಾಳೆ.

ಇದಾದ ಬಳಿಕ ಕುಟುಂಬಸ್ಥರ ಎದುರು ಇದರ ಬಗ್ಗೆ ಹೇಳಿಕೊಂಡಿದ್ದು, ಇದೀಗ ಅದೇ ಠಾಣೆಯಲ್ಲಿ ಪೊಲೀಸ್​ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.