ETV Bharat / bharat

ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆಗೈದರೆ 5 ಲಕ್ಷ ರೂ. ದಂಡ, 7 ವರ್ಷ ಜೈಲು!

ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಕೂಡ ಕಠಿಣ ಕಾನೂನು ರೂಪಿಸಿದೆ. ಪ್ರಸ್ತುತ ಅನುಮೋದಿಸಲಾದ "ಉತ್ತರ ಪ್ರದೇಶ ಸಾಂಕ್ರಾಮಿಕ ರೋಗ ಕೋವಿಡ್​-19 ನಿಯಂತ್ರಣ ಕಾಯ್ದೆ-2020" ನ್ನು ಅತಿ ಶೀಘ್ರ ಜಾರಿಗೊಳಿಸಲಾಗುವುದು ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

UP cabinet announces fine of Rs 5 lakh, 7 years jail

author img

By

Published : May 6, 2020, 4:33 PM IST

ಲಖನೌ (ಉತ್ತರ ಪ್ರದೇಶ): ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ಮಾಡಿದವರಿಗೆ 5 ಲಕ್ಷ ರೂಪಾಯಿ ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವ ಕರಡು ಸುಗ್ರೀವಾಜ್ಞೆಯನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಅನುಮೋದಿಸಿದೆ. 1897 ಸಾಂಕ್ರಾಮಿಕ ರೋಗ ಕಾಯ್ದೆಗೆ ತಿದ್ದುಪಡಿ ಮಾಡಿರುವ ಹೊಸ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಅತಿ ಕಠಿಣ ಕ್ರಮ ಕೈಗೊಳ್ಳಲು ಯೋಗಿ ಸರ್ಕಾರ ಮುಂದಾಗಿದೆ.

ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಕೂಡ ಕಠಿಣ ಕಾನೂನು ರೂಪಿಸಿದೆ. ಪ್ರಸ್ತುತ ಅನುಮೋದಿಸಲಾದ "ಉತ್ತರ ಪ್ರದೇಶ ಸಾಂಕ್ರಾಮಿಕ ರೋಗ ಕೋವಿಡ್​-19 ನಿಯಂತ್ರಣ ಕಾಯ್ದೆ-2020" ನ್ನು ಅತಿ ಶೀಘ್ರ ಜಾರಿಗೊಳಿಸಲಾಗುವುದು ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವುದು ಮಾತ್ರವಲ್ಲದೆ ಅವರನ್ನು ಅವಮಾನಿಸುವುದು, ಅವರ ಮೇಲೆ ಉಗುಳುವುದು ಮುಂತಾದ ಎಲ್ಲ ಚಟುವಟಿಕೆಗಳ ವಿರುದ್ಧ ಈ ಕಾನೂನಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.