ETV Bharat / bharat

ಸಹಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಟಾಪರ್.. ಈತನಿಗೆ ರಾಷ್ಟ್ರಪತಿ ಹೆಸರೇ ಗೊತ್ತಿಲ್ಲ!!

author img

By

Published : Jun 10, 2020, 9:19 PM IST

ನೇಮಕಾತಿಯಲ್ಲಿ ಅಗ್ರಸ್ಥಾನದಲ್ಲಿ ಪಡೆದಿದ್ದ ಪ್ರಯಾಗರಾಜ್ ನಿವಾಸಿ ಧರ್ಮೇಂದ್ರ ಪಟೇಲ್ ಸಾಮಾನ್ಯ ಜ್ಞಾನದ ತಿಳುವಳಿಕೆ ಮಟ್ಟ ಇಡೀ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆ ಎತ್ತಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಇತರ ಮೂವರು ಅಭ್ಯರ್ಥಿಗಳನ್ನೂ ಬಂಧಿಸಲಾಗಿದೆ.

UP assistant teacher recruitment exam
ಸಹಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯ

ಲಖನೌ : ಉತ್ತರಪ್ರದೇಶದ ಸಹಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕಗಳೊಂದಿಗೆ ಅಗ್ರಸ್ಥಾನ ಪಡೆದ ಧರ್ಮೇಂದ್ರ ಪಟೇಲ್​ಗೆ ಭಾರತದ ರಾಷ್ಟ್ರಪತಿ ಯಾರು ಎಂಬುದೇ ತಿಳಿದಿಲ್ಲ.

ಯುಪಿಯ ಶಿಕ್ಷಣ ಇಲಾಖೆ 69,000 ಹುದ್ದೆಗಳಿಗೆ ನೇಮಕಾತಿ ನಡೆಸಿತ್ತು. ಉದ್ಯೋಗ ಆಕಾಂಕ್ಷಿಗಳಿಂದ ಲಕ್ಷಾಂತರ ರೂ. ಲಂಚ ಸ್ವೀಕರಿಸುವ ಆರೋಪದಲ್ಲಿ ಪ್ರಯಾಗ್ರಾಜ್ ಪೊಲೀಸರು ಭಾನುವಾರ ಅಗ್ರಸ್ಥಾನ ಪಡೆದ ಧರ್ಮೇಂದ್ರ ಪಟೇಲ್ ಹಾಗೂ ಇತರ 9 ಮಂದಿಯನ್ನು ಬಂಧಿಸಿದ ನಂತರ ಈತನ ಸಾಮಾನ್ಯ ಜ್ಞಾನದ ಕೊರತೆ ಬೆಳಕಿಗೆ ಬಂದಿದೆ. ನೇಮಕಾತಿಯಲ್ಲಿ ಅಗ್ರಸ್ಥಾನದಲ್ಲಿ ಪಡೆದಿದ್ದ ಪ್ರಯಾಗರಾಜ್ ನಿವಾಸಿ ಧರ್ಮೇಂದ್ರ ಪಟೇಲ್ ಸಾಮಾನ್ಯ ಜ್ಞಾನದ ತಿಳುವಳಿಕೆ ಮಟ್ಟ ಇಡೀ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆ ಎತ್ತಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಇತರ ಮೂವರು ಅಭ್ಯರ್ಥಿಗಳನ್ನೂ ಬಂಧಿಸಲಾಗಿದೆ.

ಬಂಧನದ ನಂತರ ಅವರನ್ನು ಪ್ರಶ್ನಿಸಿದೆವು. ಈ ವೇಳೆ ಕನಿಷ್ಠ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಹ ಅವರು ಉತ್ತರಿಸಲು ಸಾಧ್ಯವಾಗಲಿಲ್ಲ. ಇದು ನೇಮಕಾತಿ ವ್ಯವಸ್ಥೆಯಲ್ಲಿನ ಅಕ್ರಮಗಳ ಬಗ್ಗೆ ಪ್ರತಿಬಿಂಬಿಸುತ್ತದೆ. ಶಿಕ್ಷಕರು ಅಷ್ಟು ತಿಳಿದಿಲ್ಲದಿದ್ದರೆ, ಮಕ್ಕಳಿಗೆ ಏನು ಕಲಿಸುತ್ತಾರೆ ಎಂದು ತನಿಖೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಈಗಾಗಲೇ ಹೈಕೋರ್ಟ್ ತಡೆಹಿಡಿಯಲಾಗಿದೆ. ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪ್ರಶ್ನಿಸಿದೆ. ಈ ಮಧ್ಯೆ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ಎಸ್‌ಟಿಎಫ್ ತನಿಖೆಗೆ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.