ಹೈದರಾಬಾದ್: ಕೋವಿಡ್-19 ವಿರುದ್ಧ ಹೋರಾಡಲು 'ಟಿ ಸೆಲ್ ಎಪಿಟೋಪ್ಸ್' ಎಂದು ಕರೆಯಲ್ಪಡುವ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ ಬಯೋಕೆಮಿಸ್ಟ್ರಿ ವಿಭಾಗದ ಅಧ್ಯಾಪಕರು ಕೆಲಸ ಮಾಡುತ್ತಿದ್ದಾರೆ ಎಂದು ಹೈದರಾಬಾದ್ ವಿಶ್ವವಿದ್ಯಾಲಯ ತಿಳಿಸಿದೆ.
ಕೊರೊನಾ ವೈರಸ್-2ಗೆ ಸಂಬಂಧಿಸಿದ ಎಲ್ಲಾ ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಪ್ರೋಟೀನ್‌ಗಳ ವಿರುದ್ಧ ಸಂಶೋಧನೆ ನಡೆಯುತ್ತಿದೆ ಎಂದು ವಿವಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪ್ಯೂಟೇಶನಲ್ ಸಾಫ್ಟ್‌ವೇರ್‌ನೊಂದಿಗೆ ಪ್ರಬಲ ಇಮ್ಯುನೊಇನ್‌ಫರ್ಮ್ಯಾಟಿಕ್ಸ್ ವಿಧಾನಗಳನ್ನು ಬಳಸಿಕೊಂಡು, ಅಧ್ಯಾಪಕಿ ಸೀಮಾ ಮಿಶ್ರಾ ಈ ಸಂಭಾವ್ಯ ಎಪಿಟೋಪ್‌ಗಳನ್ನು ಜನರಿಗೆ ಲಸಿಕೆಯಾಗಿ ಬಳಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ ಎಂದು ಅದು ಹೇಳಿದೆ.
ಸಾಮಾನ್ಯವಾಗಿ ಲಸಿಕೆ ಆವಿಷ್ಕಾರವು 15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸುಮಾರು 10 ದಿನಗಳಲ್ಲಿ ಈ ಲಸಿಕೆಯನ್ನು ತ್ವರಿತವಾಗಿ ಮಾಡಲು ಪ್ರಬಲವಾದ ಕಂಪ್ಯೂಟೇಶನಲ್ ಪರಿಕರಗಳು ಸಹಾಯ ಮಾಡುತ್ತಿವೆ ಎಂದು ವಿಶ್ವವಿದ್ಯಾಲಯ ಹೇಳಿದೆ.