ETV Bharat / bharat

ಆಯೋಧ್ಯೆಯಲ್ಲಿನ ತಾತ್ಕಾಲಿಕ ರಾಮ ಮಂದಿರ ಓಪನ್:  ಬುಲೆಟ್​ ಪ್ರೂಫ್​ ದೇವಾಲಯದಲ್ಲಿ ಪೂಜೆ - ಆಯೋಧ್ಯೆಯಲ್ಲಿ ರಾಮ ಮಂದಿರ ಓಪನ್

ಲಾಕ್​ಡೌನ್​ ನಿಯಮಗಳು ಸಡಿಲಿಕೆಯಾಗುತ್ತಿರುವ ಬೆನ್ನಲ್ಲೆ ಗೃಹ ಸಚಿವಾಲಯ ಘೋಷಿಸಿದ ಹೊಸ ಮಾರ್ಗಸೂಚಿಗಳೊಂದಿಗೆ ಅಯೋಧ್ಯೆಯಲ್ಲಿ ತಾತ್ಕಾಲಿಕ ರಾಮ ಮಂದಿರದ ಬಾಗಿಲನ್ನ ತೆರೆಯಲಾಗಿದೆ.

Ram Mandir reopens
ಆಯೋಧ್ಯೆಯಲ್ಲಿ ತಾತ್ಕಾಲಿಕ ರಾಮ ಮಂದಿರ ಓಪನ್
author img

By

Published : Jun 8, 2020, 3:28 PM IST

ಅಯೋಧ್ಯೆ (ಉತ್ತರ ಪ್ರದೇಶ): ಲಾಕ್​​ಡೌನ್​ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಬಂದ್ ಆಗಿದ್ದ ದೇವಾಲಯಗಳನ್ನು ಭಕ್ತರ ಪ್ರವೇಶಕ್ಕೆ ಮತ್ತೆ ತೆರೆಯಲಾಗುತ್ತಿದೆ. ಇದರಂತೆ ಅಯೋಧ್ಯೆಯ ಪ್ರಸಿದ್ಧ ತಾತ್ಕಾಲಿಕ ರಾಮ ಮಂದಿರವನ್ನು ಇಂದು ಮತ್ತೆ ತೆರೆಯಲಾಯಿತು.

ರಾಮ ದೇವರ ಮೂರ್ತಿಯನ್ನು ಬುಲೆಟ್​ ಪ್ರೂಫ್​ ದೇವಾಲಯದಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಿದ್ದು ಭಕ್ತರಿಗೆ ವಿಭಿನ್ನ ಅನುಭವ ನೀಡಿದೆ. ಧಾರ್ಮಿಕ ಸ್ಥಳಗಳಿಗೆ ಅನುಗುಣವಾಗಿ ಗೃಹ ಸಚಿವಾಲಯ ಘೋಷಿಸಿದ ಹೊಸ ಮಾರ್ಗಸೂಚಿಗಳೊಂದಿಗೆ, ಕೇವಲ ಐದು ಭಕ್ತರಿಗೆ ಮಾತ್ರ ಒಂದೇ ಸಮಯದಲ್ಲಿ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಸಾಮಾಜಿಕ ಅಂತರ ಸೇರಿದಂತೆ ಹಲವು ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರವೇಶ ದ್ವಾರದಲ್ಲಿ ನಿಯೋಜಿಸಲಾಗಿರುವ ಸೆಕ್ಯುರಿಟಿ ಗಾರ್ಡ್‌ಗಳು, ಇಂದು 100 ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಸಾದ, ತೀರ್ಥ ವಿತರಣೆ ಅಥವಾ ಪವಿತ್ರ ನೀರನ್ನು ಚಿಮುಕಿಸುವುದು ಮುಂತಾದವುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.