ನವದೆಹಲಿ: ಇಂದು ಕೇಂದ್ರ ಸಚಿವ ಸಂಪುಟ ಸಭೆ ಸೇರಲಿದ್ದು, ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. 7 ಲೋಕ ಕಲ್ಯಾಣ್ ಮಾರ್ಗ್ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಕೇಂದ್ರ ಸಚಿವ ಸಂಪುಟದ ಸಭೆ ನಡೆಯಲಿದೆ.
ಕಳೆದ ಜುಲೈ 8 ರಂದು ಕೇಂದ್ರ ಸಚಿವ ಸಂಪುಟದ ಸಭೆ ನಡೆದಿತ್ತು. ಈ ಸಂಪುಟ ಸಭೆಯಲ್ಲಿ ಉದ್ಯೋಗದಾತ ಮತ್ತು ನೌಕರರ ಪಿಎಫ್ ಪಾವತಿಸುವ ಯೋಜನೆಯನ್ನು ಆಗಸ್ಟ್ವರೆಗೆ, ಅಂದರೆ ಮೂರು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು.
ಇದೇ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅಣ್ಣಾ ಯೋಜನೆಯನ್ನು ಐದು ತಿಂಗಳವರೆಗೆ ವಿಸ್ತರಿಸಲು ಸಂಪುಟ ಅನುಮೋದನೆ ನೀಡಿತ್ತು. ಈ ಯೋಜನೆಯ ಅಡಿ ದೇಶದ ಸುಮಾರು 81 ಕೋಟಿ ಜನರಿಗೆ 203 ಲಕ್ಷ ಟನ್ ಧಾನ್ಯವನ್ನು ವಿತರಿಸಲಾಗುತ್ತದೆ.
ಇಂದು ಮತ್ತೆ ಕ್ಯಾಬಿನೆಟ್ ಮೀಟಿಂಗ್ ನಡೆಯುತ್ತಿದ್ದು, ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.