ಹೈದರಾಬಾದ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ನಲ್ಲಿ ಹಲವರ ಬೇಡಿಕೆಯಾಗಿದ್ದ ಬ್ಯಾಡ್ ಬ್ಯಾಂಕ್ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಹೊಸ ಆಸ್ತಿ ಪುನರ್ನಿರ್ಮಾಣ ಮತ್ತು ಆಸ್ತಿ ನಿರ್ವಹಣಾ ಕಂಪನಿಯನ್ನು ಘೋಷಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ 20,000 ಕೋಟಿ ರೂ. ಹಂಚಿಕೆ ಮಾಡಿದ್ದಾರೆ.
ನಾವು ಎಆರ್‌ಸಿಗಳಿಗೆ (ಆಸ್ತಿ ಪುನರ್ನಿರ್ಮಾಣ ಕಂಪನಿ) ನಿಯಂತ್ರಕ ಮಾರ್ಗಸೂಚಿಗಳನ್ನು ಹೊಂದಿದ್ದೇವೆ. ಬ್ಯಾಡ್ ಬ್ಯಾಂಕ್ ಸ್ಥಾಪಿಸುವ ಪ್ರಸ್ತಾಪವನ್ನು ನಿರೀಕ್ಷಿಸುತ್ತಿದ್ದೇವೆ. ಆ ಕುರಿತು ಪ್ರಸ್ತಾಪ ಬಂದರೆ, ಅದನ್ನು ಪರೀಕ್ಷಿಸಲು ನಾವು ಸಿದ್ಧರಾಗಿದ್ದೇವೆ. ಸರ್ಕಾರಿ ಮತ್ತು ಖಾಸಗಿ ವಲಯಗಳು ಜಂಟಿಯಾಗಿ ಬ್ಯಾಡ್ ಬ್ಯಾಂಕ್‌ಗಾಗಿ ಯೋಜನೆ ರೂಪಿಸಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಈ ಹಿಂದೆ ಹೇಳಿದ್ದರು.
ವಸೂಲಿ ಮಾಡಲು ಕಷ್ಟ ಸಾಧ್ಯವಾದ ಸಾಲಗಳನ್ನು ಬ್ಯಾಡ್ ಬ್ಯಾಂಕ್ಗೆ ವರ್ಗಾಯಿಸಲಾಗುತ್ತದೆ. ಬ್ಯಾಡ್ ಬ್ಯಾಂಕ್ ಎಂಬುದು ಸಾಂಸ್ಥಿಕ ರಚನೆ ಆಗಿದ್ದು, ಬ್ಯಾಂಕ್ಗಳ ಆಸ್ತಿಯನ್ನು ತೆಗೆದುಕೊಳ್ಳುತ್ತದೆ. ಮಾರುಕಟ್ಟೆ ದರದಲ್ಲಿ ಬ್ಯಾಂಕ್ಗಳು ಆಸ್ತಿ ಸಾಲವನ್ನು ಖರೀದಿಸಿ ಅವುಗಳನ್ನು ಸಾಲ ಪಡೆದವರಿಂದ ವಸೂಲಿ ಮಾಡುತ್ತವೆ. ಈ ಬ್ಯಾಂಕ್ನ ಕಾರ್ಯ ಸುಸ್ತಿ ಸಾಲವನ್ನು ವಸೂಲಿ ಮಾಡುವುದು. ಇಂತಹ ವಿಧಾನವನ್ನು ಅರ್ಥಶಾಸ್ತ್ರಜ್ಞ ಡಿ. ಸುಬ್ಬರಾವ್ ಪ್ರತಿಪಾದಿಸಿಕೊಂಡು ಬಂದಿದ್ದಾರೆ.
ಬ್ಯಾಡ್ ಬ್ಯಾಂಕ್ ತನ್ನ ಆವೃತ್ತಿಯನ್ನು ಪ್ರಕಟಿಸಿದ ಸರ್ಕಾರವು ಸಾಲಗಳನ್ನು ಸ್ವಾಧೀನಪಡಿಸಿಕೊಳ್ಳಲು ಒತ್ತಡಕ್ಕೊಳಗಾದ ಸ್ವತ್ತುಗಳಿಗಾಗಿ ಆಸ್ತಿ ಪುನರ್ನಿರ್ಮಾಣ ಮತ್ತು ನಿರ್ವಹಣಾ ಕಂಪನಿಯನ್ನು ಸ್ಥಾಪಿಸುತ್ತದೆ. ಈ ಕ್ರಮಗಳು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಬಲಪಡಿಸುವ ನಿರೀಕ್ಷೆಯಿದೆ ಎಂದು ಅರ್ಥಶಾಸ್ತ್ರಜ್ಞ ಅನಿಲ್ ಸಾಸಿ ಹೇಳಿದ್ದಾರೆ.